ಎರಡಕ್ಕಿಂತ ಹೆಚ್ಚು ಮಕ್ಕಳಿದ್ದುದಕ್ಕೆ ಗ್ರಾ.ಪಂ.ನಿಂದ ಮಹಿಳೆ ಅನರ್ಹ
Team Udayavani, Oct 3, 2019, 6:00 AM IST
ಭುವನೇಶ್ವರ: ಒಡಿಶಾದ ಗ್ರಾಮ ಪಂಚಾಯಿತಿಯ ಸದಸ್ಯೆಯೊಬ್ಬರು ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದಾರೆ ಎಂಬ ಕಾರಣಕ್ಕೆ, ಒಡಿಶಾದ ಜಿಲ್ಲಾ ನ್ಯಾಯಾಲಯವು ಅನರ್ಹಗೊಳಿಸಿದೆ. ಕಂಧಮಲ್‌ನ ದರಿಂಗಿಬಡಿ ಪಂಚಾಯಿತಿ ಸಮಿತಿಯ ಸದಸ್ಯೆ ಸುಭ್ರೆಂತಿ ಪ್ರಧಾನ್ ಅನರ್ಹತೆಗೆ ಒಳಗಾಗಿದ್ದಾರೆ. 1994ರ ಸಮಿತಿ ಕಾಯ್ದೆಯನ್ನು ಅವರು ಉಲ್ಲಂ ಸಿದ್ದಾರೆ ಎಂಬ ಕಾರಣಕ್ಕೆ ಕೋರ್ಟ್ ಈ ನಿರ್ಧಾರ ಕೈಗೊಂಡಿದೆ. 1991ರಲ್ಲೇ ಎರಡು ಮಕ್ಕಳ ನಿಯಮವನ್ನು ಒಡಿಶಾ ಸರಕಾರ ಅಳವಡಿಸಿಕೊಂಡಿತ್ತು. ಬಿಜೆಡಿ ಶಾಸಕ ಸಲುಗ ಪ್ರಧಾನ್ ಪತ್ನಿ ಸುಭ್ರೆಂತಿ ಈ ಹುದ್ದೆಗೆ ಸ್ಪರ್ಧಿಸುವಾಗ ತನ್ನ ಮಕ್ಕಳ ಸಂಖ್ಯೆಯನ್ನು ಎರಡು ಎಂದು ನಮೂದಿಸಿದ್ದರು. ಈ ಕುರಿತಂತೆ ಸಮೀಪದ ತಜುಂಗಿಯಾ ಪಂಚಾಯಿತಿ ಸಮಿತಿ ಸದಸ್ಯ ರುಡಾ ಮಲಿಕ್ ದೂರು ಸಲ್ಲಿಸಿದ್ದರು.
ಹಲವು ಬಾರಿ ಈ ನೀತಿ ರಾಜ್ಯದಲ್ಲಿ ತೀವ್ರ ಟೀಕೆಗೆ ಒಳಗಾಗಿದ್ದು, ಬುಡಕಟ್ಟು ಜನರ ಮೇಲೆ ಹಗೆ ಸಾಧಿಸಲು ಬಳಸಿಕೊಳ್ಳಲಾಗುತ್ತಿದೆ ಎನ್ನಲಾಗಿದೆ. ಈ ಹಿಂದಿನ ಕೆಲವು ಪ್ರಕರಣಗಳಲ್ಲಿ ಅನರ್ಹತೆಯನ್ನು ಸುಪ್ರೀಂಕೋರ್ಟ್ ಕೂಡ ಎತ್ತಿಹಿಡಿದಿದ್ದರಿಂದ, ಈ ನೀತಿಗೆ ಇನ್ನಷ್ಟು ಬಲ ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PM Modi: ತಂತ್ರಜ್ಞಾನವನ್ನು ಅರಿತು ಅಳವಡಿಸಿಕೊಳ್ಳಬೇಕು: ಯವಜನಕ್ಕೆ ಮೋದಿ ಕರೆ
Waqf ಆಸ್ತಿ ವಿವಾದ: ರಾಜ್ಯಗಳು ನೀಡಿದ ಮಾಹಿತಿಗೆ ಜೆಪಿಸಿ ಅತೃಪ್ತಿ
Kazakhstan ವಿಮಾನ ಪತನಕ್ಕೆ ರಷ್ಯಾ ಕ್ಷಿಪಣಿ ದಾಳಿ ಕಾರಣ: ವರದಿ
Temperature: ಉತ್ತರ ಭಾರತದಲ್ಲಿ ನಿಲ್ಲದ ಶೀತ ಪ್ರಕೋಪ: ತಾಪಮಾನ ಭಾರೀ ಇಳಿಕೆ!
Mourning: ಮನಮೋಹನ್ ಸಿಂಗ್ ನಿಧನ; ದೇಶಾದ್ಯಂತ 7 ದಿನ ಶೋಕಾಚರಣೆ ಘೋಷಿಸಿದ ಕೇಂದ್ರ ಸರಕಾರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.