ಉತ್ತರದಲ್ಲೇ ಹೆಚ್ಚು ಗನ್ ಸದ್ದು
Team Udayavani, Oct 3, 2017, 6:50 AM IST
ಹೊಸದಿಲ್ಲಿ: ಕಣಿವೆ ರಾಜ್ಯ ಜಮ್ಮು-ಕಾಶ್ಮೀರದಲ್ಲಿ ಗುಂಡಿನ ಮೊರೆತಕ್ಕೆ ಮುಕ್ತಿಯೇ ಇಲ್ಲ. ಅಲ್ಲಿನ ಜನರಿಗೆ ಬೆಳಗಾಗುವುದು ಗುಂಡಿನ ಸದ್ದು ಕೇಳಿದ ನಂತರವೇ ಎಂಬ ಸ್ಥಿತಿ ಇದೆ. ಇಂಥ ಅಸುರಕ್ಷಿತ ರಾಜ್ಯದಲ್ಲಿ ಅತಿ ಹೆಚ್ಚು ಮಂದಿ ಬಂದೂಕು ಹೊಂದಲು ಪರವಾನಗಿ ಪಡೆದಿರಬಹುದು ಎಂಬುದು ಸಹಜ ಊಹೆ. ಈ ಬಗ್ಗೆ ಯಾರನ್ನೇ ಕೇಳಿದರೂ ಇರಬಹುದು ಅನ್ನುತ್ತಾರೆ.
ಆದರೆ ಅಸಲಿ ಸಂಗತಿ ಏನೆಂದರೆ, ಭಾರತದಲ್ಲಿ ಬಂದೂಕು ಹೊಂದಲು ಪರವಾನಗಿ ಪಡೆದಿರುವ ಅತಿ ಹೆಚ್ಚು ಮಂದಿ ಇರುವುದು ಉತ್ತರ ಪ್ರದೇಶದಲ್ಲಿ. ಇಲ್ಲಿ ಸುಮಾರು 12.77 ಲಕ್ಷ ಮಂದಿ ಗನ್ ಲೈಸೆನ್ಸ್ ಪಡೆದಿದ್ದಾರೆ. ಆದರೆ ಕಳೆದ 3 ದಶಕಗಳಿಂದ ರಕ್ತಪಾತ, ಹಿಂಸಾ ಕೃತ್ಯಗಳಿಗೆ ಸಾಕ್ಷಿಯಾಗಿರುವ ಕಣಿವೆ ರಾಜ್ಯದಲ್ಲಿ ಕೇವಲ 3.69 ಲಕ್ಷ ಮಂದಿ ಗನ್ ಪರವಾನಗಿ ಪಡೆದಿದ್ದಾರೆ.
ದೇಶದಲ್ಲಿ ಒಟ್ಟು 33.69 ಲಕ್ಷ ಸಕ್ರಿಯ ಗನ್ ಪರವಾನಗಿಗಳನ್ನು ನೀಡಲಾಗಿದೆ. ಈ ಪೈಕಿ ಅತ್ಯಧಿಕ ಅಂದರೆ 12.77 ಲಕ್ಷ ಗನ್ ಲೈಸೆನ್ಸ್ ಪಡೆದಿರುವುದು ಉತ್ತರಪ್ರದೇಶ ದವರು. ಇನ್ನು ಕರ್ನಾಟಕ ಈ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದ್ದು, 1.13 ಲಕ್ಷ ಲೈಸೆನ್ಸ್ ಪಡೆದಿದೆ. ಈ ಮೂಲಕ ನೆರೆಯ ಮಹಾರಾಷ್ಟ್ರವನ್ನು (84,050) ರಾಜ್ಯ ಹಿಂದಿಕ್ಕಿದೆ. ಕರ್ನಾಟಕಕ್ಕೆ ಹೋಲಿಸಿದರೆ ಗನ್ ಪರವಾನಗಿಯಲ್ಲಿ ತಮಿಳುನಾಡು ತೀರಾ ಹಿಂದಿದ್ದು, ಇಲ್ಲಿ ಕೇವಲ 22,532 ಗನ್ ಪಡೆಯಲಾಗಿದೆೆ. ಕೇವಲ 9,459 ಗನ್ ಲೈಸೆನ್ಸ್ ನೀಡಿರುವ ಕೇರಳ ಪಟ್ಟಿಯಲ್ಲಿ ಕಡೇ ಸ್ಥಾನದಲ್ಲಿದೆ. ವಿಶೇಷವೆಂದರೆ ಕೇಂದ್ರಾಡಳಿತ ಪ್ರದೇಶಗಳಾದ ದಮನ್ ಮತ್ತು ದಿಯೂ, ದಾದರ್ ಮತ್ತು ನಗರ್‌ನಲ್ಲಿ ವಿತರಿಸಿರುವುದು ತಲಾ 125 ಗನ್ ಲೈಸೆನ್ಸ್ ಮಾತ್ರ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mahakumbh Mela: ಪ್ರಯಾಗ್ ರಾಜ್ ಚಲೋ-ಮಹಾಕುಂಭ ಮೇಳಕ್ಕೆ ಅಡ್ಡಿ: ಉ*ಗ್ರ ಪನ್ನು ಬೆದರಿಕೆ
Chhattisgarh: ನಕ್ಸಲೀಯರ ಅಟ್ಟಹಾಸ- ಐಇಡಿ ಸ್ಫೋಟಕ್ಕೆ 9 ಯೋಧರ ದೇಹ ಛಿದ್ರ, ಛಿದ್ರ…
Kerala: ತಂಜಾವೂರು ಪ್ರವಾಸ ಮುಗಿಸಿ ವಾಪಸ್ಸಾಗುತ್ತಿದ್ದ ಬಸ್ ಅಪಘಾತ: ನಾಲ್ವರು ಮೃತ್ಯು
Chhattisgarh: ಪತ್ರಕರ್ತ ಮುಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಹೈದರಾಬಾದ್‌ನಲ್ಲಿ ಬಂಧನ
ಅಪ್ಪನನ್ನೇ ಬದಲಿಸಿದ ಅತಿಶಿ: ಪ್ರಿಯಾಂಕಾ ಬೆನ್ನಲ್ಲೇ ವಿವಾದಾತ್ಮಕ ಹೇಳಿಕೆ ನೀಡಿದ ಬಿಧುರಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ನನ್ನ ಮಗಳ ಬಾಯ್‌ಫ್ರೆಂಡ್ ಫೋಟೋ ರಿವೀಲ್ ಮಾಡಿದರೆ 21 ಲಕ್ಷ ಬಹುಮಾನ: ಬಿಗ್ ಬಾಸ್‌ಗೆ ಸವಾಲು
Manipal KMC; ಮಧುಮೇಹಿ ಮಕ್ಕಳಿಗಾಗಿ ಶೈಕ್ಷಣಿಕ ಕಾರ್ಯಕ್ರಮ
Mahakumbh Mela: ಪ್ರಯಾಗ್ ರಾಜ್ ಚಲೋ-ಮಹಾಕುಂಭ ಮೇಳಕ್ಕೆ ಅಡ್ಡಿ: ಉ*ಗ್ರ ಪನ್ನು ಬೆದರಿಕೆ
HMPV: ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ ಸಿಎಂ ಸಿದ್ದರಾಮಯ್ಯ
Daskath ಮೆಚ್ಚಿದ ಪ್ರೇಕ್ಷಕರಿಗೆ ಬಿಗ್ ನ್ಯೂಸ್ ಕೊಟ್ಟ ಚಿತ್ರತಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.