69 ಲಕ್ಷ ನಿರುದ್ಯೋಗಿಗಳ ಪೈಕಿ 1.49 ಲಕ್ಷ ಮಂದಿಗೆ ಮಾತ್ರ ನೌಕರಿ
Team Udayavani, Aug 25, 2020, 6:00 AM IST
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಸ್ವಉದ್ಯೋಗಿಗಳು ಹಾಗೂ ವಲಸೆ ಕಾರ್ಮಿಕರಿಗೆ ಉದ್ಯೋಗ ಕಲ್ಪಿಸಲು ಕೇಂದ್ರ ಸರಕಾರ ತೆರೆದಿರುವ ಅಸೀಮ್ ಪೋರ್ಟಲ್‌ನಲ್ಲಿ 40 ದಿನಗಳ ಅವಧಿಯಲ್ಲಿ 69 ಲಕ್ಷ ಮಂದಿ ನೋಂದಾಯಿಸಿ ಕೊಂಡಿದ್ದಾರೆ. ಈ ಪೈಕಿ 1.49 ಲಕ್ಷ ಜನರಿಗೆ ಕೆಲಸದ ಆಫರ್ ನೀಡಲಾಗಿದೆ. ವಾಸ್ತವವಾಗಿ ಇದರಲ್ಲಿ 7,700 ಮಂದಿ ಮಾತ್ರ ಉದ್ಯೋಗದಲ್ಲಿ ತೊಡಗಿಸಿ ಕೊಂಡಿದ್ದಾರೆ.
ಆ.14ರಿಂದ ಆ.21ರವರೆಗೆ ಅಂದರೆ ಒಂದು ವಾರದಲ್ಲಿ 7 ಲಕ್ಷ ನಿರುದ್ಯೋಗಿಗಳು ಹೆಸರು ನೋಂದಾಯಿಸಿಕೊಂಡಿದ್ದಾರೆ. ಇದರಲ್ಲಿ 691 ಮಂದಿಗೆ ಮಾತ್ರ ನೌಕರಿ ದೊರೆತಿದೆ. ಕೇಂದ್ರ ಕೌಶಲ್ಯ ಅಭಿವೃದ್ಧಿ ಸಚಿವಾಲಯದ ಅಂಕಿ ಅಂಶಗಳ ಪ್ರಕಾರ, ಅಸೀಮ್ ಪೋರ್ಟಲ್‌ನಲ್ಲಿ ನೋಂದಾಯಿಸಿ ಕೊಂಡಿರುವ 3.7 ಲಕ್ಷ ಮಂದಿ ಪೈಕಿ ಶೇ.2ರಷ್ಟು ಮಂದಿಗೆ ಮಾತ್ರ ಉದ್ಯೋಗ ದೊರೆತಿದೆ ಎಂದು “ಇಂಡಿಯನ್ ಎಕ್ಸ್ ಪ್ರಸ್’ ವರದಿ ಮಾಡಿದೆ.
ಕೇಂದ್ರ ಸರಕಾರವು ನಿರುದ್ಯೋಗಿಗಳಿಗೆ ನೌಕರಿ ಕಲ್ಪಿಸಲು ಜುಲೈ 11ರಂದು ಗರೀಬ್ ಕಲ್ಯಾಣ ರೋಜಗಾರ್ ಅಭಿಯಾನದಡಿ ಆತ್ಮನಿರ್ಭರ್ ಸ್ಕಿಲ್ಡ್ ಎಂಪ್ಲಾಯೀ ಎಂಪ್ಲಾಯರ್ ಮ್ಯಾಪಿಂಗ್ (ಅಸೀಮ್) ಎಂಬ ಪೋರ್ಟಲ್ ತೆರೆ ದಿತ್ತು. ಇದರಡಿ ವಲಸೆ ಕಾರ್ಮಿಕರಷ್ಟೇ ಅಲ್ಲದೇ ಟೈಲರ್‌ಗಳು, ಎಲೆಕ್ಟ್ರಿಶಿಯನ್ ಫೀಲ್ಡ್ ಟೆಕ್ಸಿಶಿಯನ್, ಕೊರಿಯರ್ ಡೆಲಿ ವರಿ, ನರ್ಸ್, ಅಕೌಂಟೆಟ್ ಎಕ್ಸಿ ಕ್ಯೂಟಿವ್, ಮ್ಯಾನುವಲ್ ಕ್ಲೀನರ್ ಮತ್ತಿತರ ಸ್ವ ಉದ್ಯೋಗಿಗಳು ಹೆಸರು ನೋಂದಾಯಿಸಿ ಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಈ ಪೋರ್ಟಲ್ ದೇಶದ 116 ಜಿಲ್ಲೆಗಳನ್ನು ಒಳಗೊಂಡಿದೆ. ಪೋರ್ಟ ಲ್‌ನಲ್ಲಿ 514 ಕಂಪನಿಗಳು ನೋಂದಾಯಿಸಿಕೊಂಡಿದ್ದು, ಇದರಲ್ಲಿ 443 ಸಂಸ್ಥೆಗಳು 2.92 ಲಕ್ಷ ಉದ್ಯೋಗ ಕಲ್ಪಿಸುವುದಾಗಿ ತಿಳಿಸಿದ್ದವು. ಆದರೆ, 1.49 ಲಕ್ಷ ಮಂದಿಗೆ ಮಾತ್ರ ಉದ್ಯೋ ಗದ ಆಫರ್ ನೀಡಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.