![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Mar 20, 2021, 3:48 PM IST
ನವದೆಹಲಿ: ಗೋಡೆಯ ಮೇಲೆ ಉಗುಳಿದ ಹಿನ್ನೆಲೆಯಲ್ಲಿ ಬ್ಲಾಕ್ ಅಭಿವೃದ್ಧಿ ಅಧಿಕಾರಿಯೊಬ್ಬರು 22 ವಯಸ್ಸಿನ ವಿದ್ಯಾರ್ಥಿಗೆ ಕೋಲಿನಿಂದ ಹೊಡೆದು ಆ ವಿದ್ಯಾರ್ಥಿಯ ಕೈಯಿಂದಲೇ ಗೋಡೆಯನ್ನು ತೊಳೆದು ಶುಚಿಗೊಳಿಸಿದ ಘಟನೆ ನಡೆದಿದೆ.
ಬಿಹಾರದ ಪೂರ್ಣಿಯಾ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ಯುವಕನು ತಾನು ಉಗುಳಿ ಅಶುದ್ಧಗೊಳಿಸಿದ ಗೋಡೆಯನ್ನು ಶುಚಿಗೊಳಿಸುತ್ತಿರುವುದನ್ನು ವಿಡಿಯೋ ಮಾಡಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ. ಈ ವಿಡಿಯೋ ಇದೀಗ ಎಲ್ಲೆಡೆ ಭಾರಿ ವೈರಲ್ ಆಗಿದೆ.
ಈ ಕುರಿತಾಗಿ ಮಾತನಾಡಿರುವ ವಿದ್ಯಾರ್ಥಿ, ನಾನು ಮಾಡಿರುವುದು ತಪ್ಪು…. ಈ ತಪ್ಪನ್ನು ನಾನು ಒಪ್ಪಿಕೊಂಡಿದ್ದೇನೆ ಹಾಗೂ ಕ್ಷಮೆಯನ್ನು ಯಾಚಿಸುತ್ತಿದ್ದೇನೆ ಎಂದಿದ್ದು, ನಾನು ಗೋಡೆಯ ಮೇಲೆ ಉಗುಳಿದ ಸಮಯದಲ್ಲಿ ಅಧಿಕಾರಿಗಳು ನನ್ನನ್ನು ಅವರ ಕಚೇರಿಗೆ ಕರೆದಿದ್ದು, ಬಳಿಕ ಬಿದಿರಿನ ಕೋಲಿನಿಂದ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾನೆ.
ಅಲ್ಲದೆ ಅಧಿಕಾರಿಯು ನನ್ನಿಂದ ಗೋಡೆಯನ್ನು ತೊಳೆಸಿರುವ ವಿಡಿಯೋ ಮಾಡಿದ್ದು, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ. ಇದರಿಂದ ನನ್ನ ಗೆಳೆಯರು ಮತ್ತು ಸಂಬಂಧಿಗಳು ಈ ವಿಚಾರದ ಕುರಿತಾಗಿ ನನ್ನ ಬಳಿ ಪದೇ ಪದೇ ಪ್ರಶ್ನಿಸುತ್ತಿದ್ದು, ನಾನು ಅವಮಾನಕ್ಕೆ ಒಳಗಾಗಿದ್ದೇನೆ ಎಂದಿದ್ದಾನೆ.
ಇದನ್ನೂ ಓದಿ:70 ವರ್ಷಗಳಲ್ಲಿ ಎಲ್ಲರಿಗೂ ಅವಕಾಶ ನೀಡಿದ್ದೀರಿ ಈಗ ನಮಗೆ 5 ವರ್ಷ ಅಧಿಕಾರ ಕೊಡಿ; ಪ್ರಧಾನಿ
ಈ ವಿಚಾರದ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಅಧಿಕಾರಿ ಸತ್ಯೇಂದ್ರ ಸಿಂಗ್ ನಾನು ತಂಬಾಕನ್ನು ತಿಂದು ಗೋಡೆಯ ಮೇಲೆ ಉಗುಳಿರುವ ವ್ಯಕ್ತಿಯನ್ನು ಹಿಡಿದಿದ್ದು, ಆತನಲ್ಲಿಯೇ ಗೋಡೆಯನ್ನು ಶುಚಿಗೊಳಿಸಿದ್ದೇನೆ. ಕೋವಿಡ್ ಸೋಂಕಿನ ಹೆಚ್ಚಳದ ಹಿನ್ನೆಲೆಯಲ್ಲಿ ಸಮಾಜಕ್ಕೆ ಶುಚಿತ್ವದ ಸಂದೇಶವನ್ನು ಸಾರುವ ಉದ್ದೇಶದಿಂದ ನಾನು ಹೀಗೆ ಮಾಡಿದ್ದೇನೆ ಎಂದಿದ್ದಾರೆ.
ನಾನು ಆ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿಲ್ಲ ಮತ್ತು ಯಾವುದೇ ವಿಡಿಯೋವನ್ನು ಚಿತ್ರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿಲ್ಲ. ಘಟನೆ ನಡೆಯುವ ಸಮಯದಲ್ಲಿ ನಮ್ಮ ಸುತ್ತ ಮುತ್ತಲೂ ಹಲವಾರು ಜನರಿದ್ದು, ಅವರಲ್ಲಿ ಯಾರಾದರೂ ವಿಡಿಯೋ ಮಾಡಿರಬಹುದು ಎಂದು ತಿಳಿಸಿದ್ದಾರೆ. ಈ ನಡುವೆ ವಿದ್ಯಾರ್ಥಿ ಜಿಲ್ಲಾ ಅಧಿಕಾರಿಗಳ ಬಳಿ ಘಟನೆಯ ಹಿನ್ನೆಲೆಯಲ್ಲಿ ದೂರು ದಾಖಲಿಸಿದ್ದಾನೆ ಎಂದು ವರದಿ ತಿಳಿಸಿದೆ.
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.