“ಬಿಎಸ್ 6’ನಿಂದ ತೈಲ ಬೆಲೆ ಏರಿಕೆ?
ತೈಲ ಕಂಪನಿಗಳ ಒಕ್ಕೂಟದಿಂದ ಬೆಲೆ ಹೆಚ್ಚಿಸಲು ಸರ್ಕಾರಕ್ಕೆ ಮನವಿ
Team Udayavani, Dec 23, 2019, 8:46 PM IST
ನವದೆಹಲಿ: ಬಿಎಸ್ 6 ಮಾದರಿಯ ಇಂಜಿನ್ಗಳುಳ್ಳ ವಾಹನಗಳು 2020ರ ಏ.1ರಿಂದ ಕಡ್ಡಾಯವಾಗಿ ಜಾರಿಗೆ ಬರಲಿದ್ದು, ಅದರ ಬೆನ್ನಿಗೇ ತೈಲ ದರಗಳೂ ಏರಿಕೆಯಾಗುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
ತೈಲ ಪೂರೈಕೆ ಕಂಪನಿಗಳ ಒಕ್ಕೂಟ(ಒಎಂಸಿ), ಪೆಟ್ರೋಲಿಯಂ ಸಚಿವಾಲಯಕ್ಕೆ ಮನವಿಯೊಂದನ್ನು ಸಲ್ಲಿಸಿದ್ದು, ಬಿಎಸ್ 6 ಇಂಜಿನ್ಗಳಿಗೆ ಪೂರಕವಾಗಿ ಸದ್ಯಕ್ಕೆ ಲಭ್ಯವಿರುವ ಪೆಟ್ರೋಲ್, ಡೀಸೆಲ್ನ ಗುಣಮಟ್ಟವನ್ನು ಉನ್ನತೀಕರಿಸಬೇಕಿದೆ. ಈಗಾಗಲೇ ಈ ನಿಟ್ಟಿನಲ್ಲಿ ಅಪಾರ ಪ್ರಮಾಣದ ಬಂಡವಾಳ ಹೂಡಿಕೆ ಮಾಡಲಾಗಿದ್ದು, ಇದನ್ನು ಹಿಂಪಡೆಯಲು ಗ್ರಾಹಕರು ಖರೀದಿಸುವ ತೈಲದ ಬೆಲೆಗಳನ್ನು ಸತತ ಐದು ವರ್ಷ ಏರಿಸಬೇಕು ಎಂದು ಕೋರಲಾಗಿದೆ.
ಒಂದು ವೇಳೆ, ಈ ಮನವಿಗೆ ಸಚಿವಾಲಯ ಒಪ್ಪಿದರೆ, ಪೆಟ್ರೋಲ್ ಬೆಲೆ ಪ್ರತಿ ಲೀಟರಿಗೆ 80 ಪೈಸೆ ಹಾಗೂ ಡೀಸೆಲ್ ದರ 1.50 ರೂ. ಏರಿಕೆಯಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.
ಮೂಲಗಳ ಪ್ರಕಾರ, ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳಾದ ಇಂಡಿಯನ್ ಆಯಿಲ್, ಹಿಂದೂಸ್ತಾನ್ ಪೆಟ್ರೋಲಿಯಂ ಹಾಗೂ ಭಾರತ್ ಪೆಟ್ರೋಲಿಯಂ ಸಂಸ್ಥೆಗಳು ತೈಲಗಳ ಗುಣಮಟ್ಟ ಉನ್ನತೀಕರಣಕ್ಕಾಗಿ 80,000 ಕೋಟಿ ರೂ.ಗಳನ್ನು ವ್ಯಯಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.