ಭದ್ರತೆ ಶಿಷ್ಟಾಚಾರ ಮುರಿದ ಮೋದಿ: ಉಮರ್ ಅಬ್ದುಲ್ಲ ಆಕ್ಷೇಪ
Team Udayavani, Dec 12, 2017, 3:06 PM IST
ಹೊಸದಿಲ್ಲಿ : ಸಿಂಗಲ್ ಇಂಜಿನ್ ಸೀ ಪ್ಲೇನ್ ನಲ್ಲಿ ಹಾರುವ ಪ್ರಧಾನಿ ನರೇಂದ್ರ ಮೋದಿ ಅವರ ನಿರ್ಧಾರವನ್ನು ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಉಮರ್ ಅಬ್ದುಲ್ಲ ಪ್ರಶ್ನಿಸಿದ್ದಾರೆ. ಮೋದಿ ಅವರ ಭದ್ರತಾ ಮಾರ್ಗದರ್ಶಿ ಸೂತ್ರಗಳನ್ನು ಈ ವಿಷಯದಲ್ಲಿ ಸಡಿಲುಗೊಳಿಸಿದ್ದು ಏಕೆ ಎಂದವರು ಕೇಳಿದ್ದಾರೆ.
ತಮ್ಮ ರೋಡ್ ಶೋಗೆ ಅನುಮತಿ ನಿರಾಕರಿಸಲಾದ ತಾಸುಗಳ ಬಳಿಕ ಪ್ರಧಾನಿ ಮೋದಿ ಅವರು ಸೀ ಪ್ಲೇನ್ ಮೂಲಕ ಧರೋಯಿ ಅಣೆಕಟ್ಟಿಗ ಹಾರಿ ಅಂಬಾಜಿ ದೇವಸ್ಥಾನವನ್ನು ಸಂದರ್ಶಿಸಿ ಅಲ್ಲಿ ಪೂಜೆ ಸಲ್ಲಿಸಿದ್ದರು. ಇದು ದೇಶದಲ್ಲೇ ಮೊತ್ತ ಮೊದಲ ಸೀ ಪ್ಲೇನ್ ಎಂಧು ಭಾರತೀಯ ಜನತಾ ಪಕ್ಷ ಹೇಳಿಕೊಂಡಿತ್ತು.
#WATCH Prime Minister Narendra Modi on his way to Ambaji Temple in Banaskantha #Gujarat pic.twitter.com/48gE1EAQ0q
— ANI (@ANI) December 12, 2017
ವಿವಿಐಪಿಗಳಿಗೆ ಸಾಮಾನ್ಯವಾಗಿ ಭದ್ರತೆಯ ದೃಷ್ಟಿಯಿಂದ ಈ ರೀತಿಯ ಸಿಂಗಲ್ ಇಂಜಿನ್ ವಿಮಾನಗಳಲ್ಲಿ ಹಾರಲು ಅನುಮತಿ ನೀಡಲಾಗುವುದಿಲ್ಲ; ಹಾಗಿರುವಾಗ ದೇಶದ ಪ್ರಧಾನಿಯಾಗಿರುವ ಮೋದಿ ಅವರಿಗೆ ಈ ಏಕ-ಇಂಜಿನ್ ವಿಮಾನದಲ್ಲಿ ಹಾರಲು ಸಾಧ್ಯವಾದದ್ದು ಹೇಗೆ? ಅದರ ಔಚಿತ್ಯವೇನು? ಎಂದು ಉಮರ್ ಅಬ್ದುಲ್ಲ ಪ್ರಶ್ನಿಸಿದರು.
ಪ್ರಧಾನಿಯವರು ಹಾರಿರುವ ಈ ರೀತಿಯ ಏಕ ಇಂಜಿನ್ ವಿಮಾನವನ್ನು ಸಾಮಾನ್ಯವಾಗಿ ಭಾರತೀಯ ವಾಯು ಪಡೆಯ ಪೈಲಟ್ ನಡೆಸುವುದು ರೂಢಿ; ಆದರೆ ಇಂದು ಸೀ ಪ್ಲೇನ್ ಹಾರಾಟ ಕೈಗೊಂಡವರು ಓರ್ವ ವಿದೇಶಿ ಪೈಲಟ್. ಪ್ರಧಾನಿಯ ಭದ್ರತೆಯ ದೃಷ್ಟಿಯಿಂದ ಈ ನಿರ್ಧಾರ ಎಷ್ಟು ಸರಿ ಎಂದೂ ಉಮರ್ ಅಬ್ದುಲ್ಲ ಪ್ರಶ್ನಿಸಿದ್ದಾರೆ.
ವಿಶೇಷವೆಂದರೆ ಪ್ರಧಾನಿ ಮೋದಿ ಅವರಿಂದು ಏಕ ಇಂಜಿನ್ ಸೀ ಪ್ಲೇನ್ ನಲ್ಲಿ ಹಾರಿದ್ದಷ್ಟೇ ಅಲ್ಲ ಅನಂತರ ಅಂಬಾಜಿ ದೇವಸ್ಥಾನದ ವರೆಗೂ ಹೋದ ತಮ್ಮ ಕಾವಲು ವಾಹನಗಳ ಸಾಲಿನಲ್ಲಿನ ಭಾರೀ ಶಸ್ತ್ರ ಸಜ್ಜಿತವಾಗಿದ್ದ ತಮ್ಮ ವಾಹನದ ಸೈಡ್ ಸ್ಟೆಪ್ ಮೇಲೆ ನಿಂತು ರಸ್ತೆಯ ಇಕ್ಕೆಲಗಳಲ್ಲಿ ಹಿಂಡುಗಟ್ಟಿ ನಿಂತಿದ್ದ ತಮ್ಮ ಅಭಿಮಾನೀ ಜನತೆಯನ್ನು ಕೈಬೀಸಿ ಅಬಿನಂದಿಸುವ ಮೂಲಕ ಪೂರ್ತಿ ಜೋಶ್‌ನಲ್ಲಿರುವಂತೆ ಕಂಡುಬಂದಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.