ಭಾರತದಲ್ಲಿ ಒಮಿಕ್ರಾನ್‌ ಅಪಾಯಕಾರಿಯಲ್ಲ!


Team Udayavani, Dec 3, 2021, 7:20 AM IST

ಭಾರತದಲ್ಲಿ ಒಮಿಕ್ರಾನ್‌ ಅಪಾಯಕಾರಿಯಲ್ಲ!

ಕರ್ನಾಟಕದಲ್ಲಿ ಪತ್ತೆಯಾಗಿರುವ ಎರಡು ಒಮಿಕ್ರಾನ್‌ ಪ್ರಕರಣಗಳಿಂದ ಎಲ್ಲರೂ ಆತಂಕಗೊಳ್ಳುವಂತಾಗಿದೆ. 2020 ಹಾಗೂ 2021ರ ಆರಂಭದಲ್ಲಿ ದೇಶವನ್ನು ಶೋಕ ಸಾಗರಲ್ಲಿ ದೂಡಿದಂತೆ ಒಮಿಕ್ರಾನ್‌ ಕೂಡ ಭಾರತದಲ್ಲಿ ಮರಣ ಮೃದಂಗ ಬಾರಿಸಲಿದೆಯೇ ಎಂಬ ಆತಂಕ ಎಲ್ಲರಲ್ಲೂ ಮನೆ ಮಾಡಿದೆ. ಆದರೆ ಭಾರತದಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ಇದು ಅಪಾಯಕಾರಿಯಲ್ಲ ಎಂದು ಸಾಂಕ್ರಾಮಿಕ ರೋಗ ಶಾಸ್ತ್ರಜ್ಞ ರಮಣನ್‌ ಲಕ್ಷ್ಮೀ ನಾರಾಯಣ್‌ ತಿಳಿಸಿದ್ದಾರೆ.

ಭಾರತದಲ್ಲಿ ಈಗಾಗಲೇ ಹಲವಾರು ಜನರು ಕೊರೊನಾ ಲಸಿಕೆ ಪಡೆದಿರುವುದರಿಂದ ಈ ರೂಪಾಂತರಿ ಅಂಥ ಅಪಾಯ ಉಂಟು ಮಾಡುವುದಿಲ್ಲ ಎಂದು “ಸೆಂಟರ್‌ ಫಾರ್‌ ಡಿಸೀಸ್‌ ಡೈನಮಿಕ್ಸ್‌’ನ ಮುಖ್ಯಸ್ಥರೂ ಆಗಿರುವ ಅವರು ಹೇಳಿದ್ದಾರೆ.

ಅದಕ್ಕವರು ಉದಾಹರಣೆಯಾಗಿ ಕೊಡು ವುದು ವಿಶ್ವದ ನಾನಾ ಭಾಗಗಳಲ್ಲಿ ಕಾಣಿಸಿ ಕೊಂಡಿರುವ ಒಮಿಕ್ರಾನ್‌ ಪ್ರಕರಣಗಳನ್ನು ನ. 24ರಂದು ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿ ರುವ ಇದು ಅತಿ ವೇಗವಾಗಿ ನಾನಾ ದೇಶ ಗಳಲ್ಲಿ ಕಾಣಿಸಿಕೊಂಡಿರುವುದು ಸರಿಯಷ್ಟೇ. ಆದರೆ ಈ ಯಾವುದೇ ಪ್ರಕರಣಗಳಲ್ಲಿ ಯಾರೂ ಗಂಭೀರ ಪರಿಸ್ಥಿತಿಗೆ ತಲುಪಿಲ್ಲ. ಅವರಲ್ಲಿ ಸಾಮಾನ್ಯವಾಗಿ ಕೊರೊನಾ ಸಂಬಂಧಿತ ಲಕ್ಷಣ ಗಳು ತುಂಬಾ ಸೌಮ್ಯ ಸ್ವರೂಪದಲ್ಲಿ ಕಾಣಿಸಿಕೊಂಡಿವೆ. ಹಾಗಾಗಿ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವುದು ಅಥವಾ ಈ ರೂಪಾಂತರಿ ಹೊಂದಿರುವವರು ಆಸ್ಪತ್ರೆಗೆ ಖಂಡಿತವಾಗಿಯೂ ದಾಖಲಾಗುತ್ತಾರೆ ಎಂಬ ಆತಂಕಗಳು ಇಲ್ಲ ಎಂದು ಅವರು ಹೇಳಿದ್ದಾರೆ.

ಯುಎಸ್‌, ಫ್ರಾನ್ಸ್‌ಗೂ ಲಗ್ಗೆ: ಭಾರತದಲ್ಲಿ ಎರಡು ಒಮಿಕ್ರಾನ್‌ ಕೇಸ್‌ಗಳು ಪತ್ತೆಯಾದ ದಿನವೇ ಅತ್ತ ಅಮೆರಿಕ ಮತ್ತು ಫ್ರಾನ್ಸ್‌ನಲ್ಲೂ ತಲಾ ಒಂದೊಂದು ರೂಪಾಂತರಿ ಕೇಸ್‌ ದೃಢಪಟ್ಟಿದೆ. ಈ ಮೂಲಕ ಜಗತ್ತಿನ 30 ದೇಶಗಳಲ್ಲಿ 375 ಪ್ರಕರಣಗಳು ಪತ್ತೆಯಾದಂತಾಗಿವೆ.

ಸದ್ಯ 30 ದೇಶಗಳಲ್ಲಿ ಒಮಿಕ್ರಾನ್‌ ಭೀತಿ ಇದೆ. ಅಂದರೆ ಭಾರತದಲ್ಲಿ 2, ದಕ್ಷಿಣ ಆಫ್ರಿಕಾದಲ್ಲಿ 183, ಬೋಟ್ಸ್‌ವಾನಾದಲ್ಲಿ 19, ನೆದರ್ಲೆಂಡ್‌ 16, ಹಾಂಕಾಂಗ್‌ 7, ಇಸ್ರೇಲ್‌, ಬೆಲ್ಜಿಯಂ, ಸ್ಪೇನ್‌, ಜಪಾನ್‌, ಬ್ರೆಜಿಲ್‌, ನಾರ್ವೆಯಲ್ಲಿ ತಲಾ 2, ಇಂಗ್ಲೆಂಡ್‌ನಲ್ಲಿ 32, ಜರ್ಮನಿ 10, ಆಸ್ಟ್ರೇಲಿಯ 8, ಇಟಲಿ, ಆಸ್ಟ್ರಿಯಾ, ಸ್ವೀಡನ್‌ನಲ್ಲಿ ತಲಾ 4, ಡೆನ್ಮಾರ್ಕ್‌ 6, ಕೆನಡಾ 7, ಪೋರ್ಚ್‌ಗಲ್‌ 13, ಘಾನಾ 33, ದಕ್ಷಿಣ ಕೊರಿಯಾ, ನೈಜೀರಿಯ, ಸ್ವಿಟ್ಸರ್ಲೆಂಡ್‌ನಲ್ಲಿ ತಲಾ 3, ಅಮೆರಿಕ, ಸೌದಿ ಅರೇಬಿಯಾ, ಐರ್ಲೆಂಡ್‌, ಫ್ರಾನ್ಸ್‌, ಯುಎಇನಲ್ಲಿ ತಲಾ ಒಂದು ಕೇಸ್‌ಗಳು ಪತ್ತೆಯಾಗಿವೆ.
ಆದರೆ ಇವರಲ್ಲಿ ಹೆಚ್ಚಿನವರು ಆಸ್ಪತ್ರೆಗೆ ಹೋಗುವಂಥ ಸ್ಥಿತಿಗೆ ತಲುಪಿಲ್ಲ. ಇನ್ನು, ಆಸ್ಪತ್ರೆಗೆ ಸೇರಿದವರಲ್ಲಿ ಯಾರೂ ಐಸಿಯುನಲ್ಲಿ ಚಿಕಿತ್ಸೆ ಪಡೆದ ಬಗ್ಗೆ ವರದಿಗಳಾಗಿಲ್ಲ.

ಇದನ್ನೂ ಓದಿ:ತನ್ನ ಕಾರು ತಡೆದರೆಂದು ಪೊಲೀಸರಿಗೆ ಅಮಾನತು ಬೆದರಿಕೆ ಹಾಕಿದ ಬಿಹಾರ ಸಚಿವ !

ಒಮಿಕ್ರಾನ್‌ ಬಗ್ಗೆ ಎಚ್ಚರವಿರಲಿ: ಒಮಿಕ್ರಾನ್‌ ರೂಪಾಂತರಿ ಹೆಚ್ಚು ಪರಿಣಾಮಕಾರಿಯೋ ಅಥವಾ ಇಲ್ಲವೋ ಎಂದು ಈಗಲೇ ಹೇಳಲು ಸಾಧ್ಯವಿಲ್ಲ ಎಂದು ದಕ್ಷಿಣ ಆಫ್ರಿಕಾದ ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ. ಸದ್ಯ ಈ ವೈರಸ್‌ ಯುವಕರಲ್ಲಿ ಹೆಚ್ಚಾಗಿ ಪತ್ತೆಯಾಗಿದೆ. ಹೀಗಾಗಿ ಅವರಲ್ಲಿ ಇದರ ಪರಿಣಾಮ ಕಡಿಮೆ ಇರಬಹುದು. ಆದರೆ ವೃದ್ಧರಲ್ಲಿ ಇದು ಹೆಚ್ಚಾಗಿ ಕಂಡುಬಂದರೆ, ಅದರ ದುಷ್ಪರಿ ಣಾಮವೇನು ಎಂದು ಈಗಲೇ ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ.

ಲಸಿಕೆ ಕಡ್ಡಾಯ: ದಿಲ್ಲಿಯ ಇಂದಿರಾ ಗಾಂಧಿ ವಿಮಾನ ನಿಲ್ದಾಣಕ್ಕೆ ಬಂದಿಳಿದ 4 ಪ್ರಯಾಣಿಕರಲ್ಲಿ ಕೊರೊನಾ ಪಾಸಿಟಿವ್‌ ದೃಢಪಟ್ಟಿದ್ದು, ಏರ್‌ಪೋರ್ಟ್‌ ನಲ್ಲಿ ಪರೀಕ್ಷೆ ಹೆಚ್ಚಳ ಮಾಡಲಾಗಿದೆ. ಅಲ್ಲದೆ, ಒಮಿಕ್ರಾನ್‌ ತಡೆಯುವ ಸಲುವಾಗಿ ಎಲ್ಲ ನಾಗರಿಕರು ಒಂದು ಡೋಸ್‌ ಆದರೂ ಲಸಿಕೆ ಪಡೆಯಬೇಕು. ಆಗ ಮಾತ್ರ ಸಾರ್ವಜನಿಕ ಸ್ಥಳಗಳಿಗೆ ಪ್ರವೇಶ ನೀಡಲಾಗುತ್ತದೆ ಎಂಬ ನಿಯಮ ರೂಪಿಸಲು ದಿಲ್ಲಿ ಸರಕಾರ ಮುಂದಾಗಿದೆ.

ಮಹಾರಾಷ್ಟ್ರದಲ್ಲಿ ಲಸಿಕೆ ಕಡ್ಡಾಯ
ಒಮಿಕ್ರಾನ್‌ ಆತಂಕದ ನಡುವೆಯೇ ಮಹಾರಾಷ್ಟ್ರ ಸರಕಾರ ಹೆಚ್ಚು ಕಡಿಮೆ ಎಲ್ಲ ನಾಗರಿಕರಿಗೂ ಲಸಿಕೆಯನ್ನು ಕಡ್ಡಾಯ ಮಾಡಿದೆ. ಅಂದರೆ ಇನ್ನು ಮುಂದೆ ಮಹಾರಾಷ್ಟ್ರದಲ್ಲಿ ಯಾವುದೇ ಸಾರ್ವಜನಿಕ ಸ್ಥಳಗಳಿಗೆ ಹೋಗಬೇಕಾದರೆ ಕಡ್ಡಾಯವಾಗಿ ಎರಡೂ ಡೋಸ್‌ ಲಸಿಕೆ ಪಡೆದಿರಲೇಬೇಕು. ಬಸ್‌, ಮೆಟ್ರೋ, ರೈಲು, ಮಾಲ್‌ಗಳು, ಶಾಪ್‌ಗಳು ಸೇರಿದಂತೆ ಎಲ್ಲ ರೀತಿಯ ಸಾರ್ವಜನಿಕ ಸ್ಥಳಗಳಿಗೂ ಲಸಿಕೆ ಕಡ್ಡಾಯವಾಗಿದೆ. ಈ ಸಂಬಂಧ ಜನರು ಲಸಿಕೆ ಪಡೆದಿರುವ ಪ್ರಮಾಣ ಪತ್ರವನ್ನು ತೋರಿಸಲೇಬೇಕು. ಒಂದು ವೇಳೆ ವೈದ್ಯಕೀಯ ಕಾರಣಗಳಿಂದಾಗಿ ಲಸಿಕೆ ಪಡೆದಿಲ್ಲವಾದರೆ, ಇದಕ್ಕೂ ಸೂಕ್ತ ದಾಖಲೆ ಒದಗಿಸಬೇಕು.

ಸರಕಾರ ರೂಪಿಸಿರುವ ಮಾರ್ಗಸೂಚಿಗಳನ್ನು ಪಾಲನೆ ಮಾಡದವರಿಗೆ 500 ರೂ.ಗಳಿಂದ 50 ಸಾವಿರ ರೂ.ಗಳ ವರೆಗೆ ದಂಡ ವಿಧಿಸಲು ನಿರ್ಧರಿಸಲಾಗಿದೆ. ವ್ಯಕ್ತಿಗಳಿಗಾದರೆ 500 ರೂ. ಸಂಘ ಸಂಸ್ಥೆಗಳಿಗೆ 10 ಸಾವಿರದಿಂದ 50 ಸಾವಿರ ರೂ. ದಂಡ ಹಾಕಲಾಗುತ್ತದೆ.

ಈ ಮಧ್ಯೆ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಕ್ವಾರಂಟೈನ್‌ ಮಾಡುವ ಸಂಬಂಧ ಕೇಂದ್ರ ಮತ್ತು ಮಹಾರಾಷ್ಟ್ರ ನಡುವಿನ ತಿಕ್ಕಾಟ ಅಂತ್ಯಗೊಂಡಿದೆ. ಈ ಹಿಂದೆ ಹೊರಡಿಸಿದ್ದ ಮಾರ್ಗಸೂಚಿಗಳಿಗೆ ತಿದ್ದುಪಡಿ ಮಾಡಿರುವ ಮಹಾರಾಷ್ಟ್ರ ಸರಕಾರ, ಆರು ಹೈರಿಸ್ಕ್ ದೇಶಗಳಿಂದ ಬರುವವರಿಗೆ ಆರ್‌ಟಿಪಿಸಿಆರ್‌ ಪರೀಕ್ಷೆ ಕಡ್ಡಾಯ ಮತ್ತು ಕೇಂದ್ರ ಸರಕಾರದ ನಿಯಮಗಳಂತೆ ಕ್ವಾರಂಟೈನ್‌ ಆಗಬೇಕು ಎಂದಿದೆ. ಅಂದರೆ, ಏಳು ದಿನ ಸಾಂಸ್ಥಿಕ ಮತ್ತು ಏಳು ದಿನ ಹೋಂ ಐಸೋಲೇಶನ್‌ನಲ್ಲಿ ಇರಬೇಕು.

 

ಟಾಪ್ ನ್ಯೂಸ್

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1sadgu

Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

crimebb

Kasaragod: ಹಲ್ಲೆ ಪ್ರಕರಣ; ಕೇಸು ದಾಖಲು

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.