ಮೋದಿ ಸ್ವಚ್ಛಾಗ್ರಹ


Team Udayavani, Oct 3, 2017, 6:40 AM IST

Modi–Swachh-Bharat.jpg

ಹೊಸದಿಲ್ಲಿ: “ಒಂದು ಸಾವಿರ ಮಹಾತ್ಮ ಗಾಂಧಿಗಳು, ಒಂದು ಲಕ್ಷ ನರೇಂದ್ರ ಮೋದಿಗಳು, ಎಲ್ಲ ರಾಜ್ಯಗಳ ಮುಖ್ಯ ಮಂತ್ರಿಗಳು ಒಂದಾದರೂ “ಸ್ವಚ್ಛ ಭಾರತ’ವನ್ನು ನಿರ್ಮಿಸಲು ಸಾಧ್ಯವಿಲ್ಲ. ದೇಶದ 125 ಕೋಟಿ ಮಂದಿ ಒಗ್ಗಟ್ಟಾದರೆ ಮಾತ್ರವೇ ಸ್ವಚ್ಛತೆಯ ಗುರಿಯನ್ನು ಸಾಧಿಸಲು ಸಾಧ್ಯ.’

ಗಾಂಧಿ ಜಯಂತಿಯ ದಿನವಾದ ಸೋಮವಾರವೇ ಸ್ವಚ್ಛ ಭಾರತ ಅಭಿಯಾನಕ್ಕೆ 3 ವರ್ಷ ತುಂಬಿದ್ದು, ಈ ಹಿನ್ನೆಲೆಯಲ್ಲಿ ದೆಹಲಿಯ ವಿಜ್ಞಾನ ಭವನದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಸ್ವಚ್ಛ ಭಾರತದಲ್ಲಿ ಎಲ್ಲರೂ ಕೈಜೋಡಿಸುವಂತೆ ಕರೆ ನೀಡಿದ್ದು ಹೀಗೆ. 2014ರ ಅ.2 ರಂದು ಪ್ರಧಾನಿ ಮೋದಿ ಅವರು ಸ್ವಚ್ಛ ಭಾರತ ಅಭಿಯಾನಕ್ಕೆ ಚಾಲನೆ ನೀಡಿದ್ದರು. ಭಾರತವನ್ನು ಸ್ವಚ್ಛ ದೇಶವ ನ್ನಾಗಿ ಪರಿವರ್ತಿಸುವುದು, 2019ರೊಳಗೆ ದೇಶವನ್ನು ಬಯಲುಶೌಚ ಮುಕ್ತವಾಗಿಸುವುದು ಈ ಅಭಿಯಾನದ ಉದ್ದೇಶವಾಗಿತ್ತು.

ಸೋಮವಾರ ಗಾಂಧಿ ಜಯಂತಿ ಪ್ರಯುಕ್ತ ಮಾತನಾಡಿದ ಪ್ರಧಾನಿ ಮೋದಿ, “ಸ್ವಚ್ಛತೆಯ ಪ್ರಾಮುಖ್ಯತೆಯನ್ನು ಪ್ರಚಾರ ಮಾಡುವಲ್ಲಿ ಮಾಧ್ಯಮ ಹಾಗೂ ನಾಗರಿಕ ಸಮಾಜದ ಸದಸ್ಯರು ಪ್ರಮುಖ ಪಾತ್ರ ವಹಿಸಿದ್ದಾರೆ. ಹೀಗಿದ್ದಾಗ್ಯೂ, ಸ್ವಚ್ಛತಾ ಅಭಿಯಾನವು ಸಂಪೂರ್ಣವಾಗಿ ಯಶಸ್ವಿಯಾಗಿಲ್ಲ ಎಂದಾದರೆ, ನಾವೆಲ್ಲರೂ ಆತ್ಮವಿಮರ್ಶೆ ಮಾಡಿಕೊಳ್ಳಬೇಕಾದ ಅಗತ್ಯವಿದೆ’ ಎಂದು ಹೇಳಿದ್ದಾರೆ.

ಮಹಿಳೆಯರ ದೃಷ್ಟಿಯಿಂದ ನೋಡಿ: ಸ್ವಚ್ಛತೆಯ ವಿಚಾರವನ್ನು ಎಲ್ಲರೂ ಮಹಿಳೆಯರ ದೃಷ್ಟಿಕೋನದಿಂದ ನೋಡಬೇಕು. ಏಕೆಂದರೆ, ಶೌಚಾಲಯಗಳ ಕೊರತೆಯಿಂದಾಗಿ ಬಹಳಷ್ಟು ತೊಂದರೆ ಅನುಭವಿಸಿದವರು ಅವರು. ಭಾರತವು ಸೂಪರ್‌ ಪವರ್‌ ಆಗಬೇಕೆಂದರೆ ಸ್ವಚ್ಛತೆಯು ಬಹಳ ಮುಖ್ಯ. ಸಾವಿರ ಗಾಂಧಿಗಳು, ಲಕ್ಷ ಮೋದಿಗಳು, ಸಿಎಂಗಳು ಒಂದಾದರೂ ಸ್ವತ್ಛ ಭಾರತ ನಿರ್ಮಾಣ ಸಾಧ್ಯವಿಲ್ಲ. ದೇಶವು ನಿರ್ಮಲವಾಗ ಬೇಕೆಂದರೆ, ದೇಶದ 125 ಕೋಟಿ ಮಂದಿಯೂ ಒಂದಾಗಬೇಕು ಎಂದೂ ಮೋದಿ ಕರೆ ನೀಡಿದ್ದಾರೆ. ಭಾರತವು ಹಲವು ಸವಾಲುಗಳನ್ನು ಎದುರಿಸುತ್ತಿದೆ. ಹಾಗೆಂದ ಮಾತ್ರಕ್ಕೆ ನಾವು ಓಡಿ ಹೋಗಲು ಸಾಧ್ಯವಿಲ್ಲ. ಎಲ್ಲವನ್ನೂ ಎದುರಿಸಿ, ಗೆಲ್ಲಬೇಕು ಎಂದೂ ಹೇಳಿದ್ದಾರೆ.

ಸ್ವಚ್ಛಾಗ್ರಹಿಗಳು 
ಎಂಬ ಪದಪ್ರಯೋಗ

ಬ್ರಿಟಿಷರಿಂದ ಭಾರತವನ್ನು ಸ್ವತಂತ್ರಗೊಳಿಸಲು ಅಹಿಂಸಾತ್ಮಕ ಜನಾಂದೋಲನ ರೂಪಿಸುವ ವೇಳೆ ಮಹಾತ್ಮ ಗಾಂಧಿ ಅವರು “ಸತ್ಯಾಗ್ರಹ’ ಎಂಬ ಪದವನ್ನು ಬಳಸಿದ್ದರು. ಈಗ ಇದೇ ಪದದ ಮಾದರಿಯಲ್ಲೇ ಹೊಸ ಪದ ಪ್ರಯೋಗ ಮಾಡಿದ್ದಾರೆ ಪ್ರಧಾನಿ ಮೋದಿ. ಅದೆಂದರೆ, “ಸ್ವಚ್ಛಾಗ್ರಹ’. ಸೋಮವಾರದ ಭಾಷಣದ ವೇಳೆ ಮೋದಿ ಅವರು, “ಸ್ವಚ್ಛಾಗ್ರಹಿಗಳ ಸಿದ್ಧಿ ಮತ್ತು ಬದ್ಧತೆಯಿಂ ದಾಗಿಯೇ ಸ್ವಚ್ಛ ಭಾರತವು ಜನಾಂದೋಲನ ವಾಗಿ ರೂಪುಗೊಂಡಿದೆ’ ಎಂದರು. 

ರಾಜಕೀಯ ಬೇಡ
ಸ್ವಚ್ಛ ಭಾರತದ ವಿಚಾರದಲ್ಲಿ ಯಾರೂ ರಾಜಕೀಯ ಮಾಡು ವುದುಸಲ್ಲ. ಮೋದಿ ಅವರನ್ನು ಟೀಕಿಸಲು ಬೇರೆ ಬೇರೆ ವಿಷಯಗಳು ಸಿಗುತ್ತವೆ. ಅಂಥ ಸಾವಿರಾರು ವಿಚಾರಗಳನ್ನು ಹುಡುಕಿಕೊಡುವವರೂ ಸಾಕಷ್ಟಿದ್ದಾರೆ. ಆದರೆ, ಯಾರಾದರೂ ಸ್ವಚ್ಛತೆಯ ಕೆಲಸದಲ್ಲಿ ತೊಡಗಿದ್ದರೆ ಅವರನ್ನು ಧೈರ್ಯಗುಂದಿ ಸುವ ಕೆಲಸವನ್ನು ಮಾತ್ರ ಮಾಡಬೇಡಿ ಎನ್ನುತ್ತಾ ಟೀಕಾಕಾರ ರಿಗೂ ಚುಚ್ಚಿದರು ಮೋದಿ. ಇದಕ್ಕೂ ಮೊದಲು ಮೋದಿ ಅವರು ರಾಜ್‌ಘಾಟ್‌ ಮತ್ತು ವಿಜಯ್‌ಘಾಟ್‌ಗೆ ತೆರಳಿ ಮಹಾತ್ಮ ಗಾಂಧೀಜಿ ಮತ್ತು ಲಾಲ್‌ ಬಹದ್ದೂರ್‌ ಶಾಸ್ತ್ರ ಅವರ ಸಮಾಧಿಗೆ ಪುಷ್ಪಾರ್ಚನೆ ಮಾಡಿ ದರು. ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌, ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು, ಮಾಜಿ ಪ್ರಧಾನಿ ಮನಮೋಹನ್‌ಸಿಂಗ್‌ ಅವರೂ ಬಾಪೂಗೆ ಗೌರವ ಸಲ್ಲಿಸದರು.

ವಿದೇಶಗಳಲ್ಲೂ ಬಾಪೂಗೆ ನಮನ
ಗಾಂಧೀಜಿಯವರ 148ನೇ ಜಯಂತಿಯನ್ನು ಭಾರತದಲ್ಲಷ್ಟೇ ಅಲ್ಲದೆ, ಜಗತ್ತಿನಾದ್ಯಂತ ಹಲವೆಡೆ ಆಚರಿಸಲಾಯಿತು. ಚೀನಾದಲ್ಲಿ ಚಾವ್‌ಯಾಂಗ್‌ ಪಾರ್ಕ್‌ನಲ್ಲಿ ಸೇರಿದ್ದ ಸಾವಿರಾರು ಮಂದಿ ಭಜನೆಗಳ ಮೂಲಕ ಗಾಂಧೀಜಿಯನ್ನು ಸ್ಮರಿಸಿದರು. 2005ರಲ್ಲೇ ಇಲ್ಲಿ ಕಲಾವಿದ ಯುವಾನ್‌ ಕ್ಸಿಕುನ್‌ ಅವರು ಮಹಾತ್ಮನ ಪ್ರತಿಮೆಯೊಂದನ್ನು ರಚಿಸಿದ್ದು, ಅಲ್ಲಿ ವಿವಿಧ ಶಾಲೆಗಳ ವಿದ್ಯಾರ್ಥಿಗಳೂ ಸೇರಿದ್ದರು. ಇದೇ ವೇಳೆ, ನೆದರ್ಲೆಂಡ್‌ನ‌ ಹೇಗ್‌ನಲ್ಲಿ ವಿವಿಧ ದೇಶಗಳ, ವಯೋಮಾನದ 800ರಷ್ಟು ಮಂದಿ “ಗಾಂಧಿ ರ್ಯಾಲಿ’ ನಡೆಸಿ, ಅಹಿಂಸೆ ಮತ್ತು ಶಾಂತಿಯ ಸಂದೇಶವನ್ನು ಸಾರಿದರು. ಇಲ್ಲಿ ಭಾನುವಾರವೇ “ಫಾಲೋ ದಿ ಮಹಾತ್ಮ’ ಎಂಬ ಅಭಿಯಾನ ಆರಂಭವಾಗಿತ್ತು.

ಟಾಪ್ ನ್ಯೂಸ್

Vijayendra (2)

MUDA; ಲೋಕಾಯುಕ್ತ ಕ್ಲೀನ್ ಚಿಟ್ ಕೊಟ್ಟರೂ ಸಿಎಂಗೆ ಗಂಡಾಂತರ ತಪ್ಪಿದ್ದಲ್ಲ: ವಿಜಯೇಂದ್ರ

Stock Market: ಟ್ರಂಪ್‌ ಗೆಲುವಿನ ಎಫೆಕ್ಟ್-ಬಾಂಬೆ ಷೇರುಪೇಟೆ ಸೂಚ್ಯಂಕ 1 ಸಾವಿರ ಅಂಕ ಏರಿಕೆ!

Stock Market: ಟ್ರಂಪ್‌ ಗೆಲುವಿನ ಎಫೆಕ್ಟ್-ಬಾಂಬೆ ಷೇರುಪೇಟೆ ಸೂಚ್ಯಂಕ 1 ಸಾವಿರ ಅಂಕ ಏರಿಕೆ!

lakshmi hebbalkar

Belagavi; ರುದ್ರಣ್ಣ ಯಡವಣ್ಣವರ ಪ್ರಕರಣ ನಿಷ್ಪಕ್ಷಪಾತ ತನಿಖೆಯಾಗಲಿ: ಹೆಬ್ಬಾಳಕರ್

10

BʼTown: ʼಪುಷ್ಪ-2ʼಗೆ ದಾರಿ ಬಿಟ್ಟ ವಿಕ್ಕಿ ಕೌಶಲ್‌ ʼಛಾವಾʼ; ರಿಲೀಸ್‌ ಡೇಟ್‌ ಮುಂದೂಡಿಕೆ?

7-

ಹುಂಡಿ ಒಡೆದು ನಗದು ದೋಚಿ ಪರಾರಿಯಾದ ದುಷ್ಕರ್ಮಿಗಳು; ಎರಡು ಪ್ರತ್ಯೇಕ ಘಟನೆ ದಾಖಲು

1-qwwqewq

Udupi; ಬಜೆ ಡ್ಯಾಂ ಬಳಿ ಶಿಲಾಯುಗದ ನಿಲಿಸುಗಲ್ಲು ಪತ್ತೆ

US Result: ಡೊನಾಲ್ಡ್‌ ಟ್ರಂಪ್  ಗೆ‌ ಮತ್ತೊಮ್ಮೆ‌ ಅಧ್ಯಕ್ಷ ಪಟ್ಟ; ಪ್ರಧಾನಿ ಮೋದಿ ಅಭಿನಂದನೆ

US Result: ಡೊನಾಲ್ಡ್‌ Trumpಗೆ‌ ಮತ್ತೊಮ್ಮೆ‌ ಅಧ್ಯಕ್ಷ ಪಟ್ಟ; ಪ್ರಧಾನಿ ಮೋದಿ ಅಭಿನಂದನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-reddd

BJP,ಮೋದಿ ಸಾಂವಿಧಾನಿಕ ಮೌಲ್ಯಗಳ ನಾಶಕ್ಕೆ ಯತ್ನಿಸುತ್ತಿದ್ದಾರೆ: ಪ್ರಿಯಾಂಕಾ ಕಿಡಿ

Tiger

Jaipur; ರಾಷ್ಟ್ರೀಯ ಉದ್ಯಾನವನದಿಂದ ಭಾರೀ ಸಂಖ್ಯೆಯ ಹುಲಿಗಳು ನಾಪತ್ತೆ!

1-qrrewr

Folk singer; ಪದ್ಮಭೂಷಣ ಪುರಸ್ಕೃತೆ ಶಾರದಾ ಸಿನ್ಹಾ ವಿಧಿವಶ

Maha-Election

Assembly Election: ಮಹಾರಾಷ್ಟ್ರ ಗೆಲ್ಲಲು 10 ಗ್ಯಾರಂಟಿಗಳ ಕೊಟ್ಟ ʼಮಹಾಯುತಿʼ!

ರೈಲು ಬುಕಿಂಗ್‌, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್‌’: ಮುಂದಿನ ತಿಂಗಳು ಬಿಡುಗಡೆ

Super App: ರೈಲು ಬುಕಿಂಗ್‌, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್‌’: ಮುಂದಿನ ತಿಂಗಳು ಬಿಡುಗಡೆ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

10

Katpadi: ಅಂಚಿಗೆ ಬ್ಯಾರಿಕೇಡ್‌ ಇರಿಸಿ ರಿಬ್ಬನ್‌ ಅಳವಡಿಕೆ

Vijayendra (2)

MUDA; ಲೋಕಾಯುಕ್ತ ಕ್ಲೀನ್ ಚಿಟ್ ಕೊಟ್ಟರೂ ಸಿಎಂಗೆ ಗಂಡಾಂತರ ತಪ್ಪಿದ್ದಲ್ಲ: ವಿಜಯೇಂದ್ರ

8-

Kalaburagi: ಕಾರು- ಪಿಕಪ್ ಡಿಕ್ಕಿ: ಇಬ್ಬರು ಸಾವು

Stock Market: ಟ್ರಂಪ್‌ ಗೆಲುವಿನ ಎಫೆಕ್ಟ್-ಬಾಂಬೆ ಷೇರುಪೇಟೆ ಸೂಚ್ಯಂಕ 1 ಸಾವಿರ ಅಂಕ ಏರಿಕೆ!

Stock Market: ಟ್ರಂಪ್‌ ಗೆಲುವಿನ ಎಫೆಕ್ಟ್-ಬಾಂಬೆ ಷೇರುಪೇಟೆ ಸೂಚ್ಯಂಕ 1 ಸಾವಿರ ಅಂಕ ಏರಿಕೆ!

9

Padubidri: ಹೆಜಮಾಡಿ ಬಂದರು ಮೀನಮೇಷ ಎಣಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.