On Camera; ರಸ್ತೆ ಮೇಲೆ ಜಾರುತ್ತ ಬಂದ ಹಿಮಬಂಡೆ…ಎದ್ದು ಬಿದ್ದು ಹಿಂದಕ್ಕೊಡಿದ ಪ್ರವಾಸಿಗರು!
ಇದನ್ನು ಕೆಲವು ಪ್ರವಾಸಿಗರು ತಮ್ಮ ಮೊಬೈಲ್ ಪೋನ್ ಗಳಲ್ಲಿ ಸೆರೆ ಹಿಡಿಯುತ್ತಿದ್ದರು.
Team Udayavani, Jan 15, 2020, 12:51 PM IST
ನವದೆಹಲಿ: ಕಣ್ಣೆದುರೇ ಸಂಭವಿಸಿದ ಶ್ವೇತವರ್ಣದ ಹಿಮಕುಸಿತದ ದೃಶ್ಯವನ್ನು ಸೆರೆಹಿಡಿದಿರುವ ವಿಡಿಯೋ ಇದೀಗ ಅಂತರ್ಜಾಲದಲ್ಲಿ ಭರ್ಜರಿಯಾಗಿ ಹರಿದಾಡತೊಡಗಿದೆ. ರಸ್ತೆಯ ಮೇಲೆ ಹಿಮಬಂಡೆ ನಿಧಾನಕ್ಕೆ ಕುಸಿಯುತ್ತಾ ಬರುತ್ತಿರುವ ದೃಶ್ಯ ಹಾಗೂ ಪ್ರವಾಸಿಗರು ಅದರಿಂದ ತಪ್ಪಿಸಿಕೊಳ್ಳಲು ಹಿಂದೆ, ಹಿಂದೆ ಸರಿಯುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಹಿಮಾಚಲ ಪ್ರದೇಶದ ಟಿಂಕು ನಲ್ಲಾಹ್ ಸಮೀಪದ ಪೂಹ್ ಎಂಬಲ್ಲಿ ಈ ದೃಶ್ಯವನ್ನು ಸೆರೆಹಿಡಿಯಲಾಗಿದೆ. ಈ ವಿಡಿಯೋ ಜನವರಿ ಆರಂಭದಲ್ಲಿಯೇ ಆನ್ ಲೈನ್ ನಲ್ಲಿ ಪ್ರಕಟವಾಗಿದ್ದು, ಇದೀಗ ಐಆರ್ ಎಸ್ ಅಧಿಕಾರಿ ನಾವೀದ್ ಟ್ರುಮ್ ಬೂ ಟ್ವೀಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
Ever seen the force of a moving glacier in real-time? This is in Tinku nallah near Pooh on NH-5, Kinnaur, HP.. #ClimateChange is not a distant reality. pic.twitter.com/J7ifxaAh1g
— Naveed Trumboo IRS (@NaveedIRS) January 13, 2020
ಹಿಮದ ಬಂಡೆ ಕುಸಿದು ರಸ್ತೆ ಮೇಲೆ ಬೀಳುತ್ತಿದ್ದು, ನಂತರ ಇಡೀ ಹಿಮರಾಶಿ ರಸ್ತೆ ಮೇಲೆ ನಿಧಾನಕ್ಕೆ ಚಲಿಸುತ್ತಾ ಬರುತ್ತಿದೆ. ಇದನ್ನು ಕೆಲವು ಪ್ರವಾಸಿಗರು ತಮ್ಮ ಮೊಬೈಲ್ ಪೋನ್ ಗಳಲ್ಲಿ ಸೆರೆ ಹಿಡಿಯುತ್ತಿದ್ದರು. ಆದರೆ ಹಿಮರಾಶಿ ಜಾರುತ್ತಾ ಬಂದಂತೆ ಪ್ರವಾಸಿಗರು ಗೋ ಬ್ಯಾಕ್ , ಗೋ ಬ್ಯಾಕ್ ಎಂದು ಕೂಗುತ್ತಾ ಹಿಂದಡಿ ಇಡುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಕೆಲವು ಪ್ರವಾಸಿಗರು ತಮ್ಮ ಕಾರುಗಳನ್ನು ಹಿಂದಕ್ಕೆ ಎಳೆಯುತ್ತಿರುವುದು ವಿಡಿಯೋದಲ್ಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
High Court: ಗುರು ರಾಘವೇಂದ್ರ ಬ್ಯಾಂಕ್ ಅಧ್ಯಕಗೆ ಜಾಮೀನು ನಿರಾಕರಣೆ
Arrested: ಬಿಹಾರದ ಬೆಡ್‌ಶೀಟ್ ಗ್ಯಾಂಗ್‌ನ 8 ಮಂದಿ ಸೆರೆ
Crime Follow Up: ಅಸ್ಸಾಂ ಯುವತಿ ಹತ್ಯೆ ಕೇಸ್; ಆರೋಪಿ ಸೆರೆಗೆ 3 ತಂಡ ರಚನೆ
Bomb Threat: ಹೋಟೆಲ್, ಶಾಲೆ ಆಯ್ತು, ಈಗ ಬ್ಯಾಂಕ್‌ಗೆ ಬಾಂಬ್ ಬೆದರಿಕೆ ಇ-ಮೇಲ್ ಸಂದೇಶ
ಇಸ್ಪೀಟ್ ಅಡ್ಡೆಯ ಮೇಲೆ ಡಿವೈಎಸ್ಪಿ ದಾಳಿ; ಮಾಜಿ ಅಧ್ಯಕ್ಷ-ಹಾಲಿ ಉಪಾಧ್ಯಕ್ಷ ಸೇರಿ 8 ಜನರ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.