ಇಂದು ಕೊಲೀಜಿಯಂ ಸಭೆ
Team Udayavani, May 11, 2018, 11:05 AM IST
ಹೊಸದಿಲ್ಲಿ: ಉತ್ತರಾಖಂಡ ಹೈಕೋರ್ಟ್ ಮುಖ್ಯನ್ಯಾಯಮೂರ್ತಿ ಕೆ.ಎಂ.ಜೋಸೆಫ್ ರನ್ನು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಸ್ಥಾನಕ್ಕೆ ಶಿಫಾರಸು ಮಾಡಲು ಶುಕ್ರವಾರ ಕೊಲೀಜಿಯಂ (ನ್ಯಾಯ ಮೂರ್ತಿಗಳ ಸಮಿತಿ) ಸಭೆ ನಡೆಯಲಿದೆ. ಅದರಲ್ಲಿ ನ್ಯಾ| ಜೋಸೆಫ್ ಹೆಸರನ್ನು ಮತ್ತೂಮ್ಮೆ ಅಂತಿಮಪಡಿಸಿ ಕೇಂದ್ರ ಸರಕಾರಕ್ಕೆ ಕಳುಹಿಸುವ ಸಾಧ್ಯತೆ ಇದೆ. ಈ ಬಗ್ಗೆ ಅಧಿಕೃತ ಮಾಹಿತಿ ಇರದೇ ಇದ್ದರೂ, ಸಮಿತಿ ಸದಸ್ಯರು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಜತೆ ಈಗಾಗಲೇ ಮಾತುಕತೆ ನಡೆಸಿದ್ದಾರೆ.
ನ್ಯಾ| ಜೋಸೆಫ್ ಹೆಸರನ್ನು ನ್ಯಾಯಮೂರ್ತಿಯಾಗಿ ಅಂಗೀಕರಿಸಬೇಕು. ಈ ಬಗ್ಗೆ ತುರ್ತಾಗಿ ಕೊಲೀಜಿಯಂ ಸಭೆ ನಡೆಯಬೇಕು ಎಂದು ಸಮಿತಿ ಸದಸ್ಯ ನ್ಯಾ| ಜೆ.ಚಲಮೇಶ್ವರ್ ಬುಧವಾರ ಮುಖ್ಯನ್ಯಾಯಮೂರ್ತಿ ದೀಪಕ್‌ಮಿಶ್ರಾಗೆ ಪತ್ರ ಬರೆದಿದ್ದರು. ಜ.10ರಂದು ನ್ಯಾ| ಜೋಸೆಫ್ ಹೆಸರನ್ನು ಅಂತಿಮಗೊಳಿಸಿ ಕೇಂದ್ರಕ್ಕೆ ಕಳುಹಿಸಿದ ಬಳಿಕದ ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಹೀಗಾಗಿ, ಅವರನ್ನೇ ಪರಿಗಣಿಸಬೇಕು ಎಂದು ಪತ್ರದಲ್ಲಿ ಬರೆದ್ದರು.
ಎ.26ರಂದು ನಡೆದಿದ್ದ ಬೆಳವಣಿಗೆಯಲ್ಲಿ ಕೇಂದ್ರ ಕಾನೂನು ಸಚಿವ ರವಿಶಂಕರ ಪ್ರಸಾದ್ ಅವರು ನ್ಯಾ| ಜೋಸೆಫ್ ಹೆಸರನ್ನು ಮತ್ತೂಮ್ಮೆ ಪರಿಶೀಲಿಸುವಂತೆ ಕೋರಿ ಪತ್ರ ಬರೆದಿದ್ದರು. ಜೋಸೆಫ್ ಹೆಸರನ್ನು ಅಂತಿಮಪಡಿಸಿದರೆ ಕೇರಳಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಿದಂತಾಗುತ್ತದೆ. ಅವರಿಗಿಂತ ಹಿರಿಯ ನ್ಯಾಯಮೂರ್ತಿಗಳೂ ಇದ್ದಾರೆ ಎಂದು ಸಚಿವರು ಉಲ್ಲೇಖಿಸಿದ್ದರು. ನ್ಯಾ| ಜೆ.ಚಲಮೇಶ್ವರ್ ತಮ್ಮ ಪತ್ರದಲ್ಲಿ ಸಚಿವ ರವಿಶಂಕರ ಪ್ರಸಾದ್ ಪ್ರಸ್ತಾವಿಸಿರುವ ಅಂಶಗಳಿಗೂ ಉತ್ತರ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್ ಟೀಕೆ
PAN 2.0 ಗೆ ಸಂಪುಟ ಅನುಮೋದನೆ: ಏನಿದು ಪ್ಯಾನ್ 2.0? ಇದರ ವೈಶಿಷ್ಟ್ಯವೇನು?
Essar Group: ಎಸ್ಸಾರ್ ಗ್ರೂಪ್ ನ ಸಹ ಸಂಸ್ಥಾಪಕ ಶಶಿ ರುಯಿಯಾ ನಿಧನ
RBI ಗವರ್ನರ್ ಶಕ್ತಿಕಾಂತ್ ದಾಸ್ ಚೆನ್ನೈ ಆಸ್ಪತ್ರೆಗೆ ದಾಖಲು; ಶೀಘ್ರವೇ ಡಿಸ್ ಚಾರ್ಜ್
26/11 Te*rror Attack: ಕರಾಳ ನೆನಪಿಗೆ 16 ವರ್ಷ-ಆರು ಧೀರ ಹೀರೋಗಳು..ಹುತಾತ್ಮರಿಗೆ ಗೌರವ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Gundlupete: ವಿದ್ಯುತ್ ತಂತಿಗೆ ಸಿಲುಕಿ ಮರಿಯಾನೆ ಸಾವು
Constitution: ಕಾಂಗ್ರೆಸ್ಸಿಗರಿಂದ ಸಂವಿಧಾನದ ರಕ್ಷಕರಂತೆ ಕಪಟ ನಾಟಕ: ಬಿ.ವೈ.ವಿಜಯೇಂದ್ರ
Sirsi: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿ ಪರಾರಿ; ಆರೋಪಿ ಬಂಧನ
EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್ ಟೀಕೆ
Sirsi: ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿಯಾದ ಸಂಸದ ಕಾಗೇರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.