No Politics: ಕಿತ್ತಳೆ ಬಣ್ಣದ ವಂದೇ ಭಾರತ್ ರೈಲುಗಳ ಹಿಂದಿದೆ ವೈಜ್ಞಾನಿಕ ಚಿಂತನೆ…
Team Udayavani, Oct 5, 2023, 1:22 PM IST
ನವದೆಹಲಿ: ಕಿತ್ತಳೆ ಬಣ್ಣದ ವಂದೇ ಭಾರತ್ ರೈಲುಗಳನ್ನು ಪ್ರಾರಂಭಿಸುವ ಹಿಂದಿನ ಉದ್ದೇಶವನ್ನು ರೈಲ್ವೆ ಸಚಿವ ಬಿಚ್ಚಿಟ್ಟಿದ್ದಾರೆ.
ಪತ್ರಕರ್ತರೊಂದಿಗೆ ಸಂವಾದ ನಡೆಸಿದ ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ‘ಕಿತ್ತಳೆ ಬಣ್ಣದ ವಂದೇ ಭಾರತ್ ರೈಲುಗಳನ್ನು ಪ್ರಾರಂಭಿಸುವುದರ ಹಿಂದೆ ಯಾವುದೇ ರಾಜಕೀಯವಿಲ್ಲ ಬದಲಾಗಿ ಕಿತ್ತಳೆ ಬಣ್ಣದ ಹಿಂದೆ ಒಂದು ವೈಜ್ಞಾನಿಕ ಚಿಂತನೆಯಿದೆ ಎಂದು ಹೇಳಿದ್ದಾರೆ.
“ಹಳದಿ ಮತ್ತು ಕಿತ್ತಳೆ ಮಾನವನ ಕಣ್ಣುಗಳಿಗೆ ಎರಡು ಬಣ್ಣಗಳು ಹೆಚ್ಚು ಗೋಚರಿಸುತ್ತವೆ. ಹಾಗೆಯೇ ಯುರೋಪ್ ದೇಶಗಳಲ್ಲೂ, ಸುಮಾರು 80 ಪ್ರತಿಶತ ರೈಲುಗಳ ಬಣ್ಣ ಕಿತ್ತಳೆ ಅಥವಾ ಹಳದಿ ಮತ್ತು ಕಿತ್ತಳೆ ಸಂಯೋಜನೆಯನ್ನು ಹೊಂದಿವೆ, ಎಂದು ವೈಷ್ಣವ್ ಹೇಳಿದರು.
ಇದರಲ್ಲಿ ಯಾವುದೇ ರಾಜಕೀಯ ಉದ್ದೇಶವಿಲ್ಲ ಮತ್ತು ಇದು 100% ವೈಜ್ಞಾನಿಕ ಚಿಂತನೆಯಿಂದ ಈ ಬಣ್ಣವನ್ನು ಆಯ್ಕೆ ಮಾಡಲಾಗಿದೆ ಎಂದು ವೈಷ್ಣವ್ ಪ್ರತಿಪಾದಿಸಿದರು.
ಅಷ್ಟುಮಾತ್ರವಲ್ಲದೆ “ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಬಳಸುವ ರಕ್ಷಣಾ ದೋಣಿಗಳು ಮತ್ತು ಲೈಫ್ ಜಾಕೆಟ್‌ಗಳು ಸಹ ಕಿತ್ತಳೆ ಬಣ್ಣದಲ್ಲಿರುತ್ತವೆ. ಯಾಕೆಂದರೆ ಈ ಬಣ್ಣ ಕಣ್ಣಿಗೆ ಸ್ಪಷ್ಟವಾಗಿ ಗೋಚರವಾಗುತ್ತವೆ ಎಂಬ ಕಾರಣಕ್ಕೆ”
ಭಾರತೀಯ ರೈಲ್ವೇ ತನ್ನ ಮೊದಲ ಕಿತ್ತಳೆ-ಬೂದು ಬಣ್ಣದ ವಂದೇ ಭಾರತ್ ರೈಲನ್ನು ಸೆಪ್ಟೆಂಬರ್ 24 ರಂದು ಕೇರಳದ ಕಾಸರಗೋಡು ಮತ್ತು ತಿರುವನಂತಪುರಂ ನಡುವೆ ಪ್ರಾರಂಭಿಸಿತು. ಪ್ರಧಾನಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 24 ರಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದರು.
ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ಇತ್ತೀಚೆಗೆ ಪತ್ರಕರ್ತರೊಂದಿಗಿನ ಸಂವಾದದಲ್ಲಿ ಕಿತ್ತಳೆ ಬಣ್ಣದ ವಂದೇ ಭಾರತ್ ರೈಲುಗಳನ್ನು ಪ್ರಾರಂಭಿಸುವುದರ ಹಿಂದೆ ಯಾವುದೇ ರಾಜಕೀಯವಿದೆ ಎಂಬ ಕಲ್ಪನೆಯನ್ನು ತಳ್ಳಿಹಾಕಿದರು, ಬಣ್ಣಗಳ ಆಯ್ಕೆಯು ವೈಜ್ಞಾನಿಕ ಚಿಂತನೆಯಿಂದ ತಿಳಿಯಲ್ಪಟ್ಟಿದೆ ಎಂದು ಹೇಳಿದರು.
ಇದನ್ನೂ ಓದಿ: Viral: ಹೆಲ್ಮೆಟ್ ಇಲ್ಲದೆ ಪೊಲೀಸರ ಕೈಗೆ ಸಿಕ್ಕಿಬಿದ್ದರೂ,ಈತನಿಗೆ ಇದುವರಗೆ ದಂಡವೇ ಹಾಕಿಲ್ಲ!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
Maharashtra poll ; ಕಣದಲ್ಲಿ ಉಳಿದಿದ್ದು 4,140 ಅಭ್ಯರ್ಥಿಗಳು
DMK ನಾಶವೇ ಹೊಸ ಪಕ್ಷದ ಉದ್ದೇಶ: ವಿಜಯ್ ವಿರುದ್ಧ ಸ್ಟಾಲಿನ್ ಕಿಡಿ
WhatsApp ನಲ್ಲಿ ಧರ್ಮ ಆಧರಿತ ಗುಂಪು: ಕೇರಳ ಐಎಎಸ್ ಅಧಿಕಾರಿ ದೂರು
Elephants; ಮಧ್ಯಪ್ರದೇಶ ಬಳಿಕ ಒಡಿಶಾದಲ್ಲಿ 7 ತಿಂಗಳಿನಲ್ಲಿ 50 ಆನೆಗಳ ಸಾವು
MUST WATCH
ಹೊಸ ಸೇರ್ಪಡೆ
Bantwal: ತುಂಬೆ ಶ್ರೀಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕನ್ನ; ಲಕ್ಷಾಂತರ ಮೌಲ್ಯದ ನಗನಗದು ಲೂಟಿ
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
ಅಂಗಡಿಯಲ್ಲಿ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ
Kavoor: ಎಡನೀರು ಮಠದ ಶ್ರೀಗಳ ಮೇಲೆ ಹಲ್ಲೆ… ಶಾಸಕ ಡಾ.ಭರತ್ ಶೆಟ್ಟಿ ವೈ. ಖಂಡನೆ
ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.