Hoax bomb calls; ಕ್ರಮ ತೆಗೆದುಕೊಳ್ಳಲಾಗುತ್ತಿದೆ:ಸಚಿವ ರಾಮ್ ಮೋಹನ್ ನಾಯ್ಡು
ಕುಚೇಷ್ಟೆ ಆದರೂ ಗಂಭೀರವಾದ ವಿಷಯ... ಭದ್ರತಾ ಏಜೆನ್ಸಿಗಳೊಂದಿಗೆ ಮಾತನಾಡುತ್ತಿದ್ದೇವೆ
Team Udayavani, Oct 17, 2024, 7:06 PM IST
![Vimana 2](https://www.udayavani.com/wp-content/uploads/2024/10/Vimana-2-620x333.jpg)
![Vimana 2](https://www.udayavani.com/wp-content/uploads/2024/10/Vimana-2-620x333.jpg)
ಹೊಸದಿಲ್ಲಿ: ವಿವಿಧ ವಿಮಾನಗಳಿಗೆ ಇತ್ತೀಚೆಗೆ ನಿರಂತರವಾಗಿ ಹುಸಿ ಬಾಂಬ್ ಕರೆಗಳ ಕುರಿತು ಕ್ರಮ ತೆಗೆದುಕೊಳ್ಳಲಾಗುತ್ತಿದೆ. ನಾವು ಯಾವುದೇ ರೀತಿಯ ಪಿತೂರಿಯ ಬಗ್ಗೆ ಪ್ರತಿಕ್ರಿಯಿಸಲು ಸಾಧ್ಯವಿಲ್ಲ, ಆದರೆ ಈ ಕರೆಗಳು ಎಲ್ಲಿಂದ ಬರುತ್ತಿವೆ ಎಂದು ನಮಗೆ ಸ್ವಲ್ಪಮಟ್ಟಿಗೆ ನಮಗೆ ತಿಳಿದಿದೆ” ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಕಿಂಜರಾಪು ಗುರುವಾರ(ಅ17) ಪ್ರತಿಕ್ರಿಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ ”ಕೆಲವು ಅಪ್ರಾಪ್ತ ವಯಸ್ಕರು ಮತ್ತು ಕುಚೇಷ್ಟೆಗಾರರು ಮಾಡುತ್ತಿದ್ದು,ಯಾವುದೇ ರೀತಿಯ ಪಿತೂರಿ ಇಲ್ಲ, ನಾವು ಏರ್‌ಲೈನ್ಸ್, ಭದ್ರತಾ ಏಜೆನ್ಸಿಗಳೊಂದಿಗೆ ಮಾತನಾಡುತ್ತಿದ್ದೇವೆ. ಸಚಿವಾಲಯದಲ್ಲಿಯೂ ಸಮಾಲೋಚನೆ ನಡೆಯುತ್ತಿದೆ” ಎಂದರು.
ನಮ್ಮ ಕಡೆಯಿಂದ, ನಾವು ಏನು ಮಾಡಬಹುದು ಎಂಬುದನ್ನು ನಾವು ನೋಡಲಿದ್ದೇವೆ. ನಾವು ಸಚಿವಾಲಯದೊಳಗಿನ ವಿಮಾನಯಾನ ಸಂಸ್ಥೆಗಳು, ಭದ್ರತಾ ಏಜೆನ್ಸಿಗಳೊಂದಿಗೆ ಮಾತನಾಡುತ್ತಿದ್ದೇವೆ. ಸಮಾಲೋಚನೆಗಳು ನಡೆಯುತ್ತಿವೆ” ಎಂದು ಸಚಿವ ಹೇಳಿಕೆ ನೀಡಿದ್ದಾರೆ.
ಗಂಭೀರವಾದ ವಿಷಯ
ವಿದೇಶಾಂಗ ಇಲಾಖೆ ವಕ್ತಾರ ರಣಧೀರ್ ಜೈಸ್ವಾಲ್ ಪ್ರತಿಕ್ರಿಯಿಸಿ “ಬಾಂಬ್ ಬೆದರಿಕೆಗಳು ಬಹಳ ಗಂಭೀರವಾದ ವಿಷಯವಾಗಿದೆ. ವಿದೇಶಾಂಗ ಇಲಾಖೆ ಸೇರಿದಂತೆ ನಮ್ಮ ಸಂಬಂಧಿತ ಏಜೆನ್ಸಿಗಳು ಈ ವಿಷಯವನ್ನು ಪರಿಶೀಲಿಸುತ್ತಿವೆ. ಕೆಲವು ಎಫ್‌ಐಆರ್‌ಗಳನ್ನು ಸಹ ದಾಖಲಿಸಲಾಗಿದೆ” ಎಂದು ಹೇಳಿದ್ದಾರೆ.
ನಿರಂತರ ಹುಚ್ಚಾಟ
ದೇಶದ ವಿವಿಧೆಡೆ ಕಳೆದ ಕೆಲ ದಿನಗಳಿಂದ ನಿರಂತರವಾಗಿ 20 ಕ್ಕೂ ಹೆಚ್ಚು ವಿಮಾನಗಳಿಗೆ ಹುಸಿ ಕರೆ ಬಂದಿದ್ದು, ಹಾರಾಟದ ಮೇಲೆ ಪರಿಣಾಮ ಬೀರಿತ್ತು. ಪೊಲೀಸರು ಕಾರ್ಯಪ್ರವೃತ್ತರಾಗಿ ಅಪ್ರಾಪ್ತ ವಯಸ್ಕನೊಬ್ಬನನ್ನು ಬಂಧಿಸಿದ್ದಾರೆ. ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ ಕಠಿನ ಕ್ರಮಕ್ಕೆ ಮುಂದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![15-monalisa](https://www.udayavani.com/wp-content/uploads/2025/02/15-monalisa-150x90.jpg)
![15-monalisa](https://www.udayavani.com/wp-content/uploads/2025/02/15-monalisa-150x90.jpg)
![15-monalisa](https://www.udayavani.com/wp-content/uploads/2025/02/15-monalisa-150x90.jpg)
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
![Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!](https://www.udayavani.com/wp-content/uploads/2025/02/crime-12-150x82.jpg)
![Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!](https://www.udayavani.com/wp-content/uploads/2025/02/crime-12-150x82.jpg)
Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!
![Mother-in-law gives HIV injection to daughter-in-law for not giving much dowry](https://www.udayavani.com/wp-content/uploads/2025/02/HIV-150x82.jpg)
![Mother-in-law gives HIV injection to daughter-in-law for not giving much dowry](https://www.udayavani.com/wp-content/uploads/2025/02/HIV-150x82.jpg)
ಹೆಚ್ಚು ವರದಕ್ಷಿಣೆ ನೀಡಲಿಲ್ಲವೆಂದು ಸೊಸೆಗೆ HIV ಸೋಂಕಿನ ಇಂಜೆಕ್ಷನ್ ನೀಡಿದ ಅತ್ತೆ ಮಾವ
![Valentine’s Day: Young woman orders 100 pizzas for old boyfriend: But there’s a twist](https://www.udayavani.com/wp-content/uploads/2025/02/pizza-150x82.jpg)
![Valentine’s Day: Young woman orders 100 pizzas for old boyfriend: But there’s a twist](https://www.udayavani.com/wp-content/uploads/2025/02/pizza-150x82.jpg)
Valentine’s Day: ಹಳೇ ಗೆಳೆಯನಿಗೆ 100ಪಿಜ್ಜಾ ಆರ್ಡರ್ ಮಾಡಿದ ಯುವತಿ: ಆದರೆ ಟ್ವಿಸ್ಟ್ ಇದೆ
![delhi](https://www.udayavani.com/wp-content/uploads/2025/02/delhi-7-150x82.jpg)
![delhi](https://www.udayavani.com/wp-content/uploads/2025/02/delhi-7-150x82.jpg)
Stampede: ಕುಂಭಕ್ಕೆ ಹೊರಟವರು ಕಾಲ್ತುಳಿತಕ್ಕೆ ಬಲಿ! ದೆಹಲಿ ರೈಲುನಿಲ್ದಾಣದಲ್ಲಿ ಆಗಿದ್ದೇನು?