ಶ್ರೀದೇವಿ ಸಾವು; ಪಾತಕಿ ದಾವೂದ್ ಹೆಸರು ತಳುಕು; ಸ್ವಾಮಿಗೆ ಮಂಗಳಾರತಿ!
Team Udayavani, Feb 27, 2018, 1:51 PM IST
ನವದೆಹಲಿ: ಬಾಲಿವುಡ್ ಸೂಪರ್ ಸ್ಟಾರ್(54) ಶ್ರೀದೇವಿ ಮೃತಪಟ್ಟ ವಿಷಯದಲ್ಲಿ ಭೂಗತಪಾತಕಿ ದಾವೂದ್ ಇಬ್ರಾಹಿಂ ಹೆಸರನ್ನು ತಳುಕು ಹಾಕಿ ಟ್ವೀಟ್ ಮಾಡಿದ್ದ ರಾಜ್ಯಸಭಾ ಸದಸ್ಯ, ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿಗೆ ಟ್ವೀಟಿಗರು ಮಂಗಳಾರತಿ ಮಾಡಿದ್ದಾರೆ!
ನಟಿ ಶ್ರೀದೇವಿಯ ಸಾವು ನಿಗೂಢವಾಗಿದ್ದು, ಪ್ರಾಥಮಿಕ ವರದಿ ಪ್ರಕಾರ ಶ್ರೀದೇವಿ ಹೃದಯ ಸ್ತಂಭನದಿಂದ ನಿಧನರಾಗಿರುವುದಾಗಿ ವರದಿಯಾಗಿತ್ತು. ಇದೀಗ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಶ್ರೀದೇವಿ ಪ್ರಜ್ಞೆತಪ್ಪಿ ಬಿದ್ದು ಬಾತ್ ಟಬ್ ನಲ್ಲಿ ಮುಳುಗಿ ಸಾವನ್ನಪ್ಪಿರುವುದಾಗಿ ತಿಳಿಸಿದೆ. ಅಲ್ಲದೇ ದೇಹದಲ್ಲಿ ಮದ್ಯದ ಅಂಶ ಪತ್ತೆಯಾಗಿರುವುದಾಗಿ ಉಲ್ಲೇಖಿಸಿತ್ತು.
ಹೃದಯ ಸ್ತಂಭನದಿಂದ ಸಾವನ್ನಪ್ಪಿರುವುದನ್ನು ತಳ್ಳಿಹಾಕಲು ಸಾಧ್ಯವಿಲ್ಲ. ಯಾಕೆಂದರೆ ಶ್ರೀದೇವಿ ಬಾತ್ ಟಬ್ ನಲ್ಲಿ ಮುಳುಗಿದ ಸಂದರ್ಭದಲ್ಲಿ ಉಸಿರಾಟದಿಂದ ಒದ್ದಾಡಿ ಹೃದಯ ಸ್ತಂಭನದಿಂದ ಸಾವನ್ನಪ್ಪಿರುವ ಸಾಧ್ಯತೆ ಇದೆ ಎಂದು ವರದಿ ಹೇಳಿದೆ. ಆದರೂ ಶ್ರೀದೇವಿಯ ಸಾವಿನ ನಿಖರ ಕಾರಣ ಇನ್ನಷ್ಟೇ ತಿಳಿದು ಬರಬೇಕಾಗಿದೆ.
ನಿಗೂಢ ಸಾವಿನ ತನಿಖೆ ನಡೆಯುತ್ತಿರುವಾಗಲೇ ಎಎನ್ ಐ ಜತೆ ಮಾತನಾಡಿದ ಸ್ವಾಮಿ, ನಿಜ ವಿಷಯ ಇನ್ನೂ ಮಾಧ್ಯಮಗಳಿಗೆ ಗೊತ್ತಿಲ್ಲ. ಶ್ರೀದೇವಿ ಯಾವತ್ತೂ ಹಾರ್ಡ್ ಲಿಕ್ಕರ್(ಮದ್ಯ) ಉಪಯೋಗಿಸಿಲ್ಲ. ಸಿಸಿಟಿವಿ ಫೂಟೇಜ್ ಏನಾಯ್ತು? ವೈದ್ಯರು ಏಕಾಏಕಿ ಬಂದು ಶ್ರೀದೇವಿ ಹೃದಯಾಘಾತದಿಂದ ಸಾವನ್ನಪ್ಪಿರುವುದಾಗಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಅದೂ ಅಲ್ಲದೇ ನಟಿಯರು ಹಾಗೂ ತಲೆಮರೆಸಿಕೊಂಡಿರುವ ಭೂಗತಪಾತಕಿ ದಾವೂದ್ ಇಬ್ರಾಹಿಂ ನಡುವಿನ ಅಕ್ರಮ ಸಂಬಂಧದ ಬಗ್ಗೆಯೂ ಸ್ವಾಮಿ ಪ್ರಶ್ನಿಸಿದ್ದಾರೆ. ಸಿನಿಮಾ ನಟಿಯರು ಹಾಗೂ ದಾವೂದ್ ಜತೆಗಿನ(ಅಕ್ರಮ) ಸಂಬಂಧ ಇದೆಯಲ್ಲ ಅದರ ಬಗ್ಗೆಯೂ ನಾವು ಸ್ವಲ್ಪ ನಿಗಾ ವಹಿಸಬೇಕಾಗಿದೆ ಎಂದು ಸ್ವಾಮಿ ಪ್ರತಿಕ್ರಿಯಿಸಿದ್ದರು.
ಸ್ವಾಮಿ ಈ ಹೇಳಿಕೆ ಟ್ವೀಟರ್ ನಲ್ಲಿ ಭಾರೀ ಟ್ರೋಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸ್ವಾಮಿಯನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡು ಮಂಗಳಾರತಿ ಮಾಡಿದ್ದಾರೆ!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ
Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.