ಸರಕಾರದಿಂದ 2.50 ರೂ.ಗೆ ನ್ಯಾಪ್ಕಿನ್
Team Udayavani, Mar 9, 2018, 7:30 AM IST
ಹೊಸದಿಲ್ಲಿ: ಅಂತಾರಾಷ್ಟ್ರೀಯ ಮಹಿಳಾ ದಿನದ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಜೈವಿಕ ಸ್ಯಾನಿಟರಿ ನ್ಯಾಪ್ಕಿನ್ಗ ಳನ್ನು ಬಿಡುಗಡೆ ಮಾಡಿದ್ದು, ಒಂದು ಪ್ಯಾಡ್ ಕೇವಲ 2.50 ರೂ.ಗೆ ದೊರೆಯಲಿದೆ. ಇದು ದೇಶದೆಲ್ಲೆಡೆ ಇರುವ 3,200 ಜನೌಷಧಿ ಕೇಂದ್ರಗಳಲ್ಲಿ ಲಭ್ಯವಾಗಲಿದೆ.
ಒಂದು ಪ್ಯಾಕ್ನಲ್ಲಿ ನಾಲ್ಕು ಪ್ಯಾಡ್ಗಳು ಇರಲಿದ್ದು, ಪ್ಯಾಕ್ಗೆ 10 ರೂ. ಆಗಿರಲಿದೆ. ಮೇ. 28ರಿಂದ ನ್ಯಾಪ್ಕಿನ್ಗಳು ಲಭ್ಯವಾಗಲಿವೆ. ಇದಕ್ಕೆ ಸುವಿಧಾ ಎಂದು ಹೆಸರಿಡಲಾಗಿದೆ ಎಂದು ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಅನಂತ ಕುಮಾರ್ ತಿಳಿಸಿದ್ದಾರೆ. ಸದ್ಯ ಮಾರುಕಟ್ಟೆಯಲ್ಲಿ ಸ್ಯಾನಿಟರಿ ನ್ಯಾಪ್ಕಿನ್ಗೆ ರೂ. 32 ಆಗಿದ್ದು, ಜೈವಿಕವೂ ಅಲ್ಲ. ಆದರೆ ಸರಕಾರ ಬಿಡುಗಡೆ ಮಾಡಲಿರುವ ಈ ನ್ಯಾಪ್ಕಿನ್ಗಳು ಜೈವಿಕವಾಗಿದ್ದು, ಮಣ್ಣಿ ನಲ್ಲಿ ಸುಲಭವಾಗಿ ಕೊಳೆಯುತ್ತದೆ. ಇದು ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ವಿಶೇಷವಾಗಿ ಅನುಕೂಲಕರವಾಗಿರಲಿದೆ.
ಈ ಹಿಂದೆ ಜಿಎಸ್ಟಿ ವ್ಯಾಪ್ತಿಯಿಂದ ನ್ಯಾಪ್ಕಿನ್ಗಳನ್ನು ಹೊರಗಿಡುವುದಕ್ಕೆ ಸಂಬಂಧಿ ಸಿದ ಭಾರೀ ಪ್ರತಿಭಟನೆ, ಆಕ್ರೋಶ ವ್ಯಕ್ತ ವಾಗಿತ್ತು. ಜಿಎಸ್ಟಿಗೂ ಮೊದಲು ಶೇ. 16ರಷ್ಟಿದ್ದ ತೆರಿಗೆಯನ್ನು ಜಿಎಸ್ಟಿಯಲ್ಲಿ ಶೇ. 12ಕ್ಕೆ ಇಳಿಸಲಾಗಿತ್ತು. ಆದರೆ ಇದಕ್ಕೆ ತೆರಿಗೆ ವಿನಾಯಿತಿ ನೀಡಬೇಕು ಎಂಬ ಆಗ್ರಹ ವ್ಯಕ್ತವಾಗಿತ್ತು. ಈ ನಿಟ್ಟಿನಲ್ಲಿ ಕೇಂದ್ರ ಸರಕಾರವೇ ಜೈವಿಕ ನ್ಯಾಪ್ಕಿನ್ಗಳನ್ನು ಬಿಡುಗಡೆ ಮಾಡಿ ಆಕ್ರೋಶಕ್ಕೆ ಉತ್ತರಿಸಿದಂತಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jammu: ವೈಷ್ಣೋದೇವಿ ರೋಪ್ವೇ ವಿರೋಧಿ ಪ್ರತಿಭಟನೆ ವೇಳೆ ಭಾರೀ ಘರ್ಷಣೆ
Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಶಿವಸೇನೆಗೆ
Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Election: ರಾಜ್ ಠಾಕ್ರೆ ಎಂಎನ್ಎಸ್ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.