ಯುಕೆ ಉದ್ಯಮಿ ಕೊರೊನಾ ಮೂಲ ಸೋಂಕಿತ
ಈತನಿಂದಲೇ ಮೂರು ದೇಶಗಳಿಗೆ ಸೋಂಕು ; 'ದ ಗಾರ್ಡಿಯನ್'ನಲ್ಲಿ ಬಂದ ವರದಿ
Team Udayavani, Feb 12, 2020, 7:50 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಬೀಜಿಂಗ್/ವಾಷಿಂಗ್ಟನ್: ಇಡೀ ವಿಶ್ವದಲ್ಲೇ ರುದ್ರತಾಂಡವ ಆಡುತ್ತಿರುವ ಕೊರೊನಾ ವೈರಸ್‌ನ ಮೂಲ ಚೀನ ಅಲ್ಲ, ಸಿಂಗಾಪುರ ಎಂದು “ದ ಗಾರ್ಡಿಯನ್’ ಪತ್ರಿಕೆಯ ತನಿಖಾ ವರದಿ ಹೇಳಿದೆ. ‘2019ರಲ್ಲಿ ಸಿಂಗಾಪು ರಕ್ಕೆ ಭೇಟಿ ನೀಡಿದ್ದ ಲಂಡನ್ ಮೂಲದ, 50 ವರ್ಷ ವಯಸ್ಸಿನ ಉದ್ಯಮಿ ಯೊಬ್ಬರಿಂದ (ಹೆಸರು ತಿಳಿಸಿಲ್ಲ) ಈ ವೈರಸ್ ಸೋಂಕು ಆರಂಭದಲ್ಲಿ ಮೂರು ದೇಶಗಳ 11 ಜನರಿಗೆ ಹರಡಿತು’ ಎಂದು ವರದಿಯಲ್ಲಿ ಹೇಳಲಾಗಿದೆ.
‘ಸಿಂಗಾಪುರದಲ್ಲಿ 2019ರ ಫೆ. 20ರಿಂದ 21ರವರೆಗೆ ನಡೆದಿದ್ದ ವ್ಯವಹಾರ ಸಂಬಂಧಿ ಸಮ್ಮೇಳನವೊಂದರಲ್ಲಿ ಪಾಲ್ಗೊಂಡಿದ್ದರು. ಸುಮಾರು 100ಕ್ಕಿಂತ ಹೆಚ್ಚು ಜನರು ಭಾಗವಹಿಸಿದ್ದ ಆ ಸಮ್ಮೇಳನದಲ್ಲೇ ಅವರಿಗೆ ಸೋಂಕು ತಗುಲಿತ್ತು. ಅವರೇ ಈ ವೈರಸ್‌ನ ಮೊದಲ ಸೋಂಕಿತರು. ಅಲ್ಲಿಂದ ಮೂರು ದೇಶಗಳಿಗೆ ತೆರಳಿದ್ದ ಆ ಉದ್ಯಮಿಯಿಂದಲೇ ಆ ಸೋಂಕು ಫ್ರಾನ್ಸ್ ಮತ್ತಿತರ ಕಡೆಗೆ ಹರಡಿತು. ಆ ಉದ್ಯಮಿಯೀಗ ಲಂಡನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದು ವಿವರಿಸಲಾಗಿದೆ.
ಮತ್ತೊಂದೆಡೆ, ಕೊರೊನಾ ವೈರಸ್ ಅನ್ನು ಬೇಗನೇ ನಿಯಂತ್ರಿಸದಿದ್ದರೆ ಅದು ಜಗತ್ತಿನ ಶೇ. 60ರಷ್ಟು ಜನಸಂಖ್ಯೆಯನ್ನು ಬಾಧಿಸಲಿದೆ ಎಂದು ಹಾಂಕಾಂಗ್‌ನ ಸಾಂಕ್ರಾಮಿಕ ರೋಗ ತಜ್ಞರು ಎಚ್ಚರಿಸಿದ್ದಾರೆ.
ಜಪಾನ್‌ನಲ್ಲಿನ ನೌಕೆಯಲ್ಲಿರುವ 138 ಭಾರತೀಯ ರೊಂದಿಗೆ ನಾವು ಸಂಪರ್ಕದಲ್ಲಿದ್ದೇವೆ ಎಂದು ಭಾರತೀಯ ರಾಯಭಾರ ಕಚೇರಿ ತಿಳಿಸಿದೆ. ಇನ್ನೊಂದೆಡೆ, ಇತ್ತೀಚೆಗೆ ರಕ್ತದ ಪರೀಕ್ಷೆಯ ವರದಿ ನೆಗೆಟಿವ್ ಎಂದು ಬಂದಿದ್ದ ಜಪಾನ್‌ನ ಇಬ್ಬರನ್ನು ಮತ್ತೂಮ್ಮೆ ಪರೀಕ್ಷೆಗೊಳ ಪಡಿಸಿದಾಗ, ವರದಿ ಪಾಸಿಟಿವ್ ಎಂದು ಬಂದಿದೆ. ಹೀಗಾಗಿ, ಅವರನ್ನು ತೀವ್ರ ನಿಗಾದಲ್ಲಿ ಇಡಲಾಗಿದೆ.
ಇಲಿ ಮೇಲೆ ಪ್ರಯೋಗ: ಬ್ರಿಟನ್‌ನ ವಿಜ್ಞಾನಿಗಳ ತಂಡವೊಂದು ಕೊರೊನಾ ವೈರಸ್‌ಗೆ ಲಸಿಕೆಯೊಂದನ್ನು ಅಭಿವೃದ್ಧಿ ಪಡಿಸಿ, ಅದನ್ನು ಇಲಿಯ ಮೇಲೆ ಪ್ರಯೋ ಗಿಸಲು ಆರಂಭಿಸಿದೆ.
ಸಾವಿರ ಗಡಿ ದಾಟಿದ ಸಾವಿನ ಸರಣಿ
ಕೊರೊನಾವೈರಸ್‌ನಿಂದಾಗಿ ಸಾವಿಗೀಡಾದವರ ಸಂಖ್ಯೆ ಮಂಗಳವಾರ ಸಾವಿರ ದಾಟಿದ್ದು, ಒಟ್ಟು 1,016 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಸೋಂಕಿತರ ಸಂಖ್ಯೆಯೂ ಏರುಮುಖದಲ್ಲೇ ಸಾಗುತ್ತಿದ್ದು, 42,638 ಮಂದಿಗೆ ಸೋಂಕು ತಗುಲಿದೆ ಎಂದು ಚೀನ ಹೇಳಿದೆ.
ಇದೇ ವೇಳೆ ಯುಎಇಯಲ್ಲಿರುವ ಭಾರತೀಯ ವ್ಯಕ್ತಿಯೊಬ್ಬರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಸೋಂಕಿತನ ವ್ಯಕ್ತಿಯೊಬ್ಬರ ಸಂಪರ್ಕದಿಂದಾಗಿ ಭಾರತೀಯನಿಗೆ ಕೊರೊನಾ ತಗುಲಿದ್ದು, ಒಟ್ಟಾರೆ ಯುಎಇಯಲ್ಲಿ 8 ಮಂದಿ ಕೊರೊನಾದಿಂದ ಬಳಲುತ್ತಿದ್ದಾರೆ ಎಂದು ಅಲ್ಲಿನ ಆರೋಗ್ಯ ಸಚಿವಾಲಯ ತಿಳಿಸಿದೆ.
ಏತನ್ಮಧ್ಯೆ, ಸೋಂಕು ದೃಢಪಟ್ಟಿದ್ದ ಕೇರಳ ವಿದ್ಯಾರ್ಥಿನಿಯ ರಕ್ತದ ಮಾದರಿಯ ಪರೀಕ್ಷೆಯ ಹೊಸ ವರದಿ ಮಂಗಳವಾರ ಬಂದಿದ್ದು, ಆಕೆ ಸೋಂಕಿನಿಂದ ಮುಕ್ತವಾಗಿರುವುದು ಖಚಿತವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Patna: ಆಸ್ಪತ್ರೆಯಲ್ಲಿ ಮೃತಪಟ್ಟ ರೋಗಿಯ ಕಣ್ಣೇ ಮಾಯಾ… ಇಲಿ ತಿಂದಿದೆ ಎಂದ ವೈದ್ಯರು
Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು
Kerala govt: ಶಬರಿಮಲೆ ವರ್ಚುವಲ್ ಕ್ಯೂ ಬುಕ್ಕಿಂಗ್ ಮಿತಿ ಹೆಚ್ಚಳ
Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು
G20 Leaders Summit: ಪ್ರಧಾನಿ ಮೋದಿ ನೈಜೀರಿಯಾ, ಬ್ರೆಜಿಲ್, ಗಯಾನಾ ಪ್ರವಾಸ ಶುರು
MUST WATCH
ಹೊಸ ಸೇರ್ಪಡೆ
Mike Tyson: ವಿದಾಯದ ಸುಳಿವು ನೀಡಿದ ಬಾಕ್ಸಿಂಗ್ ದಿಗ್ಗಜ ಮೈಕ್ ಟೈಸನ್
Patna: ಆಸ್ಪತ್ರೆಯಲ್ಲಿ ಮೃತಪಟ್ಟ ರೋಗಿಯ ಕಣ್ಣೇ ಮಾಯಾ… ಇಲಿ ತಿಂದಿದೆ ಎಂದ ವೈದ್ಯರು
Team India: ವಿರಾಟ್ ಕೊಹ್ಲಿ ದಾಖಲೆ ಮುರಿದ ತಿಲಕ್ ವರ್ಮಾ
Master Rohit: ರಸ್ತೆ ಅಪಘಾತ ʼಕಾಟೇರʼ ಬಾಲನಟ ರೋಹಿತ್‌ಗೆ ಗಂಭೀರ ಗಾಯ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.