One Nation One Election ;ಇಂದು ಲೋಕಸಭೆಯಲ್ಲಿ ಮಸೂದೆ ಮಂಡನೆ?
ಮಂಡನೆ ಬಳಿಕ ಜಂಟಿ ಸದನ ಸಮಿತಿಯ ಪರಿಶೀಲನೆಗೆ ಒಪ್ಪಿಸುವ ಸಾಧ್ಯತೆ
Team Udayavani, Dec 17, 2024, 6:58 AM IST
ಹೊಸದಿಲ್ಲಿ: ಏಕಕಾಲಕ್ಕೆ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆ ನಡೆಸುವ ಸಂವಿಧಾನ ತಿದ್ದುಪಡಿ ಮಸೂದೆ ಲೋಕಸಭೆಯಲ್ಲಿ ಮಂಗಳವಾರ ಮಂಡನೆಯಾಗುವ ಸಾಧ್ಯತೆ ಇದೆ. ಬಳಿಕ ಇದನ್ನು ಸಂಸತ್ತಿನ ಉಭಯ ಸದನಗಳ ಜಂಟಿ ಸದನ ಸಮಿತಿಗೆ ಒಪ್ಪಿಸುವ ನಿರೀಕ್ಷೆ ಇದೆ. ಒಂದು ದೇಶ, ಒಂದು ಚುನಾವಣೆ ಎಂದೇ ಜನಪ್ರಿಯವಾಗಿರುವ “ಸಂವಿಧಾನದ 129ನೇ ತಿದ್ದುಪಡಿ ಮಸೂದೆ-2024’ನ್ನು ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘಾÌಲ್ ಲೋಕಸಭೆಯಲ್ಲಿ ಮಂಡಿಸಲಿದ್ದಾರೆ. ಬಳಿಕ ಮೇಘಾÌಲ್ ಅವರು ಮಸೂದೆಯ ವಿಸ್ತೃತ ಚರ್ಚೆಗೆ ಜಂಟಿ ಸದನ ಸಮಿತಿ ನೀಡುವಂತೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಕೋರಲಿದ್ದಾರೆ ಎಂದು ಸರಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜಂಟಿ ಸದನ ಸಮಿತಿಗೆ ಲೋಕಸಭೆಯಲ್ಲಿ ಪಕ್ಷಗಳು ಹೊಂದಿರುವ ಸಂಖ್ಯಾಬಲದ ಆಧಾರದಲ್ಲಿ ಸದಸ್ಯರನ್ನು ನೇಮಿಸಲಿದ್ದು ಬಿಜೆಪಿಗೆ ಅಧ್ಯಕ್ಷ ಸ್ಥಾನ ದೊರೆಯಲಿದೆ. ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್ ನೇತೃತ್ವದ ಸಮಿತಿ ದೇಶದಲ್ಲಿ ಸ್ಥಳೀಯ ಸಂಸ್ಥೆಗಳು ಸೇರಿ ಎಲ್ಲ ಚುನಾವಣೆ ಏಕಕಾಲಕ್ಕೆ ಚುನಾವಣೆ ನಡೆಸಲು ಶಿಫಾರಸು ಮಾಡಿತ್ತು. ಆದರೆ ಕಳೆದ ವಾರ ಕೇಂದ್ರ ಸಚಿವ ಸಂಪುಟ ಇದನ್ನು ಅನುಮೋದಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Supreme Court: ಮಸೀದಿಯೊಳಗೆ ಜೈ ಶ್ರೀರಾಮ್ ಎಂದರೆ ಅಪರಾಧವೇ: ಸುಪ್ರೀಂ ಕೋರ್ಟ್ ಪ್ರಶ್ನೆ
GST: ಹಳೆ ವಾಹನ ಮಾರಾಟಕ್ಕೆ ಶೇ.18ರ ಜಿಎಸ್‌ಟಿ? ನೀತಿ ಜಾರಿಯಾದರೆ ಹಳೆಯ ವಾಹನ ಖರೀದಿ ದುಬಾರಿ
Sulphur; ಹಿಂದೂ ಮಹಾಸಾಗರದಲ್ಲಿ ಗಂಧಕದ ಬೃಹತ್ ಬೆಟ್ಟ ಪತ್ತೆ!
Georgia: ಕಾರ್ಬನ್ ಮೊನಾಕ್ಸೈಡ್ ಸೋರಿಕೆ 12 ಭಾರತೀಯರ ಸಾ*ವು
Sabarimala; ಅರಣ್ಯ ಮಾರ್ಗದಲ್ಲಿ ಬಂದವರಿಗೆ ವಿಶೇಷ ದರ್ಶನ ಸೌಲಭ್ಯ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.