ನಡುರಾತ್ರಿ ಒಂದಾದ ಕರ ಭಾರತ; ಗುಡ್ & ಸಿಂಪಲ್ ಟ್ಯಾಕ್ಸ್
Team Udayavani, Jul 1, 2017, 3:45 AM IST
ಹೊಸದಿಲ್ಲಿ: ಹದಿನೇಳು ವರ್ಷಗಳ ಹಿಂದೆ ಚಿಗುರೊಡೆದ ಕನಸೊಂದು ಕೊನೆಗೂ ಶುಕ್ರವಾರ ನಡುರಾತ್ರಿ ಸಾಕಾರಗೊಂಡಿತು. ಏಕರೂಪ ತೆರಿಗೆ ವ್ಯವಸ್ಥೆ ಜಿಎಸ್‌ಟಿಗೆ ಭಾರತ ತೆರೆದುಕೊಳ್ಳುವುದ ರೊಂದಿಗೆ ದೇಶದ ಆರ್ಥಿಕ ಇತಿಹಾಸದಲ್ಲಿ ಹೊಸ ಯುಗ ಆರಂಭಗೊಂಡಿತು.
1947ರ ಆಗಸ್ಟ್ 14ರ ನಡುರಾತ್ರಿ ರಾಜಕೀಯವಾಗಿ ಭಾರತ ಒಂದಾದರೆ, 70 ವರ್ಷಗಳ ಬಳಿಕ 2017ರ ಜೂ. 30ರ ನಡುರಾತ್ರಿ ಭಾರತ ಆರ್ಥಿಕವಾಗಿಯೂ ಒಂದಾಯಿತು. ಸಂಸತ್‌ನ ಸೆಂಟ್ರಲ್ ಹಾಲ್‌ನಲ್ಲಿ ನಡೆದ ಐತಿಹಾಸಿಕ ವಿಶೇಷ ಜಂಟಿ ಅಧಿವೇಶದಲ್ಲಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ, ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ, ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ಎಚ್. ಡಿ.ದೇವೇಗೌಡ, ಲೋಕಸಭೆ ಸ್ಪೀಕರ್ ಸುಮಿತ್ರಾ ಮಹಾಜನ್ ಮತ್ತು ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ ಉಪಸ್ಥಿತಿಯಲ್ಲಿ ಜಿಎಸ್‌ಟಿ ಉದಯವಾಯಿತು.
ಕಾಂಗ್ರೆಸ್, ಎಡಪಕ್ಷಗಳು, ಟಿಎಂಸಿ ಮತ್ತು ಡಿಎಂಕೆ ಹೊರತುಪಡಿಸಿ ಉಳಿದೆಲ್ಲ ಪಕ್ಷಗಳು ಈ ಜಿಎಸ್‌ಟಿ ಸಂಭ್ರಮಕ್ಕೆ ಸಾಕ್ಷಿಯಾದವು. ಪ್ರಾಸ್ತಾವಿಕ ಭಾಷಣ ಮಾಡಿದ ಹಣಕಾಸು ಸಚಿವ ಅರುಣ್ ಜೇಟ್ಲಿ , ಜಿಎಸ್‌ಟಿ ಮೊಳಕೆ ಸಿಡಿಯಲು ಕಾರಣವಾದ ಪಶ್ಚಿಮ ಬಂಗಾಲದ ಮಾಜಿ ಹಣಕಾಸು ಸಚಿವ ಆಸೀಮ್ ದಾಸ್‌ಗುಪ್ತಾ ಅವರನ್ನು ನೆನಪಿಸಿಕೊಂಡರು. ಅವರ ಪರಿಶ್ರಮ ಮತ್ತು ಮುಂದೆ ಬಂದ ಸರಕಾರಗಳ ಒತ್ತಾಸೆಯೊಂದಿಗೆ ನಾವೀಗ ಈ ಸಂಭ್ರಮದ ಕ್ಷಣಕ್ಕೆ ಸಾಕ್ಷಿಯಾಗಿದ್ದೇವೆ ಎಂದು ಹೇಳಿದರು. ಇದರ ಜತೆಯಲ್ಲೇ ಪ್ರಣವ್ ಮುಖರ್ಜಿ ಹಣಕಾಸು ಸಚಿವರಾಗಿದ್ದ ವೇಳೆ ಜಿಎಸ್‌ಟಿ ಮಂಡನೆಗೆ ಯತ್ನಿಸಿದ್ದನ್ನೂ ನೆನಪಿಸಿಕೊಂಡರು.
ಗುಡ್ ಆ್ಯಂಡ್ ಸಿಂಪಲ್ ಟ್ಯಾಕ್ಸ್- ಜಿಎಸ್‌ಟಿ
ಜಿಎಸ್‌ಟಿ ಗಳಿಗೆಯ ಖುಷಿ ಬಗ್ಗೆ ಮಾತ ನಾಡಿದ ಪ್ರಧಾನಿ ನರೇಂದ್ರ ಮೋದಿ, ಇದೊಂದು ಗುಡ್ ಆ್ಯಂಡ್ ಸಿಂಪಲ್ ಟ್ಯಾಕ್ಸ್ (ಉತ್ತಮ ಮತ್ತು ಸರಳ ತೆರಿಗೆ) ಎಂದು ಕರೆದರು. ವರ್ತಕರು ಮತ್ತು ಸಣ್ಣ ಉದ್ದಿಮೆದಾರರಿಗೆ ಕಿರುಕುಳವಾಗಬಾರದು ಎಂಬ ದೃಷ್ಟಿಕೋನದಿಂದ ಈ ನೂತನ ತೆರಿಗೆ ನೀತಿಯನ್ನು ಜಾರಿಗೆ ತರುತ್ತಿದ್ದೇವೆ ಎಂದರು.
“ಜಿಎಸ್‌ಟಿ ಮಂಡಳಿ ಒಟ್ಟು 18 ಸಭೆಗಳನ್ನು ಮಾಡಿದೆ. ಕಾಕತಾಳೀಯವೆಂದರೆ ನಮ್ಮ ಭಗವದ್ಗೀತೆ ಕೂಡ 18 ಅಧ್ಯಾಯಗಳನ್ನು ಒಳ ಗೊಂಡಿದೆ’ ಎಂದು ನೆನಪಿಸಿಕೊಂಡರು. “ಹೀಗೆ ಸುಮ್ಮನೆ ಕಲ್ಪನೆ ಮಾಡಿಕೊಳ್ಳಿ , ಒಂದು ವೇಳೆ ದೇಶದ ಮೊದಲ ಗೃಹ ಸಚಿವ ಸರ್ದಾರ್ ವಲ್ಲಭಭಾಯಿ ಪಟೇಲ್ ಇಡೀ ದೇಶವನ್ನು ಒಂದುಗೂಡಿಸದಿದ್ದರೆ ನಾವೆಲ್ಲ ಹೀಗೆ ಒಟ್ಟಿಗೆ ಸೇರುತ್ತಿರಲಿಲ್ಲ. ಹಾಗೆಯೇ ಇಂದು ದೇಶದ ಎಲ್ಲ ರಾಜ್ಯಗಳ ಮಾರುಕಟ್ಟೆಗಳು ಒಂದಾಗುವಂತೆ ಮಾಡಿದ್ದು ಜಿಎಸ್‌ಟಿ’ ಎಂದರು.
“ಹಿಂದೊಮ್ಮೆ ಶ್ರೇಷ್ಠ ವಿಜ್ಞಾನಿ ಆಲ್ಬರ್ಟ್ ಐನ್‌ಸ್ಟಿನ್ ನನಗೆ ಏನಾದರೂ ಅರ್ಥವಾಗಲು ತೀರಾ ಕಷ್ಟವಾಗುತ್ತಿದೆ ಎಂದರೆ ಅದು ಆದಾಯ ತೆರಿಗೆ ಎಂದು ಹೇಳಿದ್ದರು. ಅವರೇನಾದರೂ ನಮ್ಮ ತೆರಿಗೆ ವ್ಯವಸ್ಥೆ ನೋಡಿ ಹೀಗೆ ಹೇಳಿದ್ದರೇ ಎಂದು ನನಗೆ ಅಚ್ಚರಿಯಾಗುತ್ತಿದೆ’ ಎಂದು ಮೋದಿ ತಿಳಿಸಿದರು. ಈವರೆಗೆ ದೇಶದಲ್ಲಿ 500 ರೀತಿಯ ತೆರಿಗೆಗಳಿತ್ತು. ಇನ್ನು ಮುಂದೆ ಈ ಎಲ್ಲ ತೆರಿಗೆಗಳಿಂದ ದೇಶ ಮುಕ್ತವಾಗಿದೆ ಎಂದರು. “ಹಲವು ವರ್ಷಗಳ ಬಳಿಕ ನಮ್ಮ ಹೊಸ ಆರ್ಥಿಕತೆ ಮತ್ತು ನಮ್ಮ ಗಣತಂತ್ರಕ್ಕೆ ಹೊಸ ಶಕ್ತಿ ದೊರೆತಿದೆ. ನಾವು ಭಾರತದ ಭವಿಷ್ಯ ನಿರ್ಧ ರಿಸುತ್ತಿದ್ದೇವೆ’ ಎಂದು ಜಿಎಸ್‌ಟಿ ವ್ಯವಸ್ಥೆಯನ್ನು ನರೇಂದ್ರ ಮೋದಿ ಶ್ಲಾಘೀಸಿದರು.
“ಸಂಸತ್‌ನ ಸೆಂಟ್ರಲ್ ಹಾಲ್ ಈ ಅಪೂರ್ವ ಕ್ಷಣಗಳಿಗೆ ಸಾಕ್ಷಿಯಾಗಿದೆ. 1947ರ ಆಗಸ್ಟ್ 14ರ ಮಧ್ಯರಾತ್ರಿ ಸ್ವಾತಂತ್ರ್ಯದ ಸಂಭ್ರಮವನ್ನೂ ಈ ಹಾಲ್ ನೋಡಿದೆ. ಪಂಡಿತ್ ನೆಹರೂ, ಆಜಾದ್, ಪಟೇಲ್… ಹೀಗೆ ಹಲವಾರು ಹಿರಿಯ ಚೇತನಗಳು ಇದೇ ಹಾಲ್‌ನ ಮುಂದಿನ ಆಸನಗಳಲ್ಲಿ ಕುಳಿತಿದ್ದರು’ ಎಂದು ಹೇಳುವ ಮೂಲಕ ಮಧ್ಯ
ರಾತ್ರಿಯೇ ಜಿಎಸ್‌ಟಿಗೆ ಚಾಲನೆ ಕೊಟ್ಟದ್ದನ್ನು ಸಮರ್ಥಿಸಿಕೊಂಡರು.
ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಮಾತನಾಡಿ, ನಾವೆಲ್ಲರೂ ಜಿಎಸ್‌ಟಿ ಆರಂಭಕ್ಕೆ ಸಾಕ್ಷಿಯಾಗುತ್ತಿದ್ದೇವೆ. 14 ವರ್ಷಗಳ ಪ್ರಯಾಣಕ್ಕೆ ಇಂದು ಅಂತ್ಯ ಸಿಕ್ಕಿದೆ. ಹಿಂದೆ ನಾನು ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಅಧಿಕಾರಿಗಳ ಜತೆ ಚರ್ಚಿಸಿದ್ದೇನೆ. ಎಲ್ಲರೂ ಜಿಎಸ್‌ಟಿ ಬಗ್ಗೆ ಧನಾತ್ಮಕವಾದ ಹೇಳಿಕೆಯನ್ನೇ ನೀಡಿದ್ದರು ಎಂದು ಶ್ಲಾ ಸಿದರು.
ರಸಗೊಬ್ಬರ, ಟ್ರ್ಯಾಕ್ಟರ್ ಬೆಲೆ ಕಡಿಮೆ
ಶುಕ್ರವಾರ ನಡೆದ ಜಿಎಸ್‌ಟಿ ಮಂಡಳಿಯ ಕೊನೆಯ ಸಭೆ ಯಲ್ಲಿ ಖುಷಿಯ ವಿಚಾರ ಹೊರಬಿದ್ದಿದೆ. ರಸಗೊಬ್ಬರಕ್ಕೆ ಶೇ.12ರಷ್ಟು ತೆರಿಗೆ ವಿಧಿಸಲು ತೀರ್ಮಾನಿಸಿದ್ದ ಮಂಡಳಿ, ಈಗ ಶೇ.5ಕ್ಕೆ ಇಳಿಸಿದೆ. ಇನ್ನು ಟ್ರ್ಯಾಕ್ಟರ್‌ನ ಬಿಡಿ ಭಾಗಗಳಿಗೆ ಶೇ. 28ರಷ್ಟು ತೆರಿಗೆ ವಿಧಿಸಲು ನಿರ್ಧರಿಸಿದ್ದ ಮಂಡಳಿ ಇದನ್ನೂ ಶೇ.18ಕ್ಕೆ ಇಳಿಕೆ ಮಾಡಿದೆ. ಈ ಮೂಲಕ ರೈತರು ಬಳಕೆ ಮಾಡುವ ಈ ವಸ್ತುಗಳ ಬೆಲೆಯನ್ನು ಇಳಿಸಿ, ರೈತರ ಬೇಡಿಕೆಯನ್ನು ಈಡೇರಿಸಿದೆ.
ಅಗ್ಗ
ಬೈಸಿಕಲ್
ಪ್ರಸ್ತುತ ಜಿಎಸ್ಟಿ
19% 12%
ಕೇಬಲ್ ಟಿವಿ ಸೇವೆ
ಪ್ರಸ್ತುತ ಜಿಎಸ್ಟಿ
23% 18%
ಸೋಪ್
ಪ್ರಸ್ತುತ ಜಿಎಸ್ಟಿ
27% 18%
ಹೈ ಎಂಡ್ ಕಾರು
ಪ್ರಸ್ತುತ ಜಿಎಸ್ಟಿ
52% 43%
ಸ್ಕೂಟರ್
ಪ್ರಸ್ತುತ ಜಿಎಸ್ಟಿ
30% 28%
ತುಟ್ಟಿ
ಮೊಬೈಲ್
ಪ್ರಸ್ತುತ ಜಿಎಸ್ಟಿ
6% 12%
ಬಿಸಿನೆಸ್ ಕ್ಲಾಸ್ ಟಿಕೆಟ್
ಪ್ರಸ್ತುತ ಜಿಎಸ್ಟಿ
9% 12%
ಬಿಸ್ಕೇಟ್
ಪ್ರಸ್ತುತ ಜಿಎಸ್ಟಿ
11% 18%
ಬ್ಯಾಂಕಿಂಗ್ ಸೇವೆ
ಪ್ರಸ್ತುತ ಜಿಎಸ್ಟಿ
15% 18%
ಫೈವ್ ಸ್ಟಾರ್ ಹೋಟೆಲ್
ಪ್ರಸ್ತುತ ಜಿಎಸ್ಟಿ
25% 28%
ಜಿಎಸ್‌ಟಿ ಯಾವುದೇ ಒಂದು ಪಕ್ಷದ ಅಥವಾ ಒಂದು ಸರಕಾರದ ಸಾಧನೆ ಅಲ್ಲ. ಇದು ಎಲ್ಲರ ಮತ್ತು ಪರಂಪರಾಗತದಿಂದ ಬಂದ ಸಾಧನೆ.
ನರೇಂದ್ರ ಮೋದಿ, (ವಿಶೇಷ ಅಧಿವೇಶನದಲ್ಲಿ)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು
8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ
Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ
Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’
ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್ ಮಾದರಿಯಲ್ಲಿ ವಿಶೇಷ ಪೊಲೀಸ್ ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.