ಈರುಳ್ಳಿ ದರ ಮತ್ತಷ್ಟು ಏರಿಕೆ ಸಂಭವ: ಟರ್ಕಿಯಲ್ಲೂ ದರ ಹೆಚ್ಚಳ ಹಿನ್ನೆಲೆ ರಫ್ತು ಸ್ಥಗಿತ
Team Udayavani, Dec 26, 2019, 6:20 AM IST
ಹೊಸದಿಲ್ಲಿ: ಈಗಾಗಲೇ 120ರ ಗಡಿ ದಾಟಿ ದೇಶದ ಜನರಲ್ಲಿ ಕಣ್ಣೀರು ತರಿಸಿರುವ ಈರುಳ್ಳಿ ಮತ್ತಷ್ಟು ದುಬಾರಿಯಾಗುವ ಸಾಧ್ಯತೆ ದಟ್ಟವಾಗಿದೆ.
ಗಗನಮುಖೀಯಾದ ಈರುಳ್ಳಿ ದರ ಸ್ವಲ್ಪಮಟ್ಟಿಗೆ ಇಳಿಕೆಯಾಗಲು ಕಾರಣವಾಗಿದ್ದ ಟರ್ಕಿ ಈರುಳ್ಳಿಯೂ ಭಾರತೀಯರಿಗೆ ಕೈಕೊಟ್ಟಿದೆ. ಆ ದೇಶದ ಸರಕಾರ ಏಕಾಏಕಿ ಈರುಳ್ಳಿ ರಫ¤ನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ. ಭಾರೀ ಪ್ರಮಾಣದಲ್ಲಿ ಭಾರತಕ್ಕೆ ಈರುಳ್ಳಿ ರಫ್ತು ಮಾಡಿದ ಕಾರಣ ಟರ್ಕಿಯಲ್ಲೂ ಈರುಳ್ಳಿ ದರ ದಿಢೀರ್ ಏರಿಕೆ ಕಂಡಿದೆ. ಈ ಹಿನ್ನೆಲೆಯಲ್ಲಿ ಆ ದೇಶವು ಈರುಳ್ಳಿ ರಫ¤ನ್ನು ಸದ್ಯದ ಮಟ್ಟಿಗೆ ಸ್ಥಗಿತಗೊಳಿಸಲು ತೀರ್ಮಾನಿಸಿದೆ. ಪರಿಣಾಮ ಭಾರತದಲ್ಲಿ ಈರುಳ್ಳಿಯ ದರ ಶೇ.10-15ರಷ್ಟು ಹೆಚ್ಚಳವಾಗಲಿದೆ.
ಸದ್ಯ ಬೆಂಗಳೂರಿನಲ್ಲಿ ಈರುಳ್ಳಿ ದರ ಕೆ.ಜಿ.ಗೆ 120ರಿಂದ 150 ರೂ. ಇದೆ. ಕೆಲವು ಪ್ರದೇಶಗಳಲ್ಲಂತೂ ಇದು 180 ರೂ. ವರೆಗೆ ಏರಿಕೆಯಾಗಿದೆ.
ಇನ್ನೂ ಕೆಲ ದಿನ ಏರಿಕೆ
ದರ ಏರಿಕೆ ಆದಾಗಿನಿಂದ ಟರ್ಕಿ, ಈಜಿಪ್ಟ್ ಹಾಗೂ ಚೀನದಿಂದ ಭಾರತ ಈರುಳ್ಳಿ ಆಮದು ಮಾಡಿಕೊಳ್ಳುತ್ತಿದೆ. ವ್ಯಾಪಾರಿಗಳು ಕೂಡ ಈಗ ಈ ದೇಶಗಳ ಈರುಳ್ಳಿಯನ್ನು ಅವಲಂಬಿಸಿದ್ದಾರೆ. ನಮ್ಮಲ್ಲಿ ಬೆಲೆ ಏರಿಕೆಯಾದಾಗ ಈರುಳ್ಳಿ ರಫ್ತಿಗೆ ಇಲ್ಲಿನ ಸರಕಾರ ಮಿತಿ ಹೇರಿದಂತೆಯೇ ಈಗ ಅಲ್ಲಿನ ಸರಕಾರವೂ ಅದೇ ನಿಯಮವನ್ನು ಜಾರಿಗೆ ತಂದಿದೆ.
ಹೀಗಾಗಿ ದೇಶೀಯ ಈರುಳ್ಳಿ ಪೂರೈಕೆ ಹೆಚ್ಚುವವರೆಗೂ ದರ ಏರಿಕೆ ಮುಂದುವರಿಯಲಿದೆ ಎಂದು ವ್ಯಾಪಾರಿಗಳು ಹೇಳಿದ್ದಾರೆ. ಜನವರಿ ತಿಂಗಳಲ್ಲಿ ದೇಶೀಯ ಈರುಳ್ಳಿ ಮಾರುಕಟ್ಟೆ ಪ್ರವೇಶಿಸುವ ಕಾರಣ, ಆಗ ದರ ಇಳಿಕೆಯಾಗುವ ನಿರೀಕ್ಷೆ ಇದೆ.
ಪ್ರಸಕ್ತ ವಿತ್ತೀಯ ವರ್ಷದಲ್ಲಿ ಭಾರತವು 7,070 ಟನ್ ಈರುಳ್ಳಿಯನ್ನು ಆಮದು ಮಾಡಿಕೊಂಡಿದೆ. ಈ ಪೈಕಿ ಶೇ.50ರಷ್ಟು ಟರ್ಕಿಯಿಂದಲೇ ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.