ಬೀದಿ ವ್ಯಾಪಾರಿಗಳಿಗೂ ಆನ್‌ಲೈನ್ ಮಾರಾಟ ವ್ಯವಸ್ಥೆ
ಪಿಎಂಎಸ್‌ವಿಎ ನಿಧಿ ಫಲಾನುಭವಿಗಳ ಜತೆಗೆ ಸಂವಾದ
Team Udayavani, Sep 10, 2020, 6:25 AM IST
ಹೊಸದಿಲ್ಲಿ: ಬಯಸುವ ತಿನಿಸುಗಳನ್ನು ಬೃಹತ್ ರೆಸ್ಟೋರೆಂಟ್‌ಗಳಿಂದಷ್ಟೇ ಆನ್‌ಲೈನ್ ಮೂಲಕ ತರಿಸಿಕೊಳ್ಳುತ್ತಿದ್ದ ನೀವು ಇನ್ನು ಮುಂದೆ ನಿಮ್ಮ ಪರಿಸರದ ಬೀದಿ ಬದಿಯ ವ್ಯಾಪಾರಸ್ಥರಿಂದಲೂ ಮನೆ ಬಾಗಿಲಿಗೇ ತರಿಸಿಕೊಳ್ಳಬಹುದು. ಈ ಬಗ್ಗೆ ಸ್ವತಃ ಪ್ರಧಾನಿ ನರೇಂದ್ರ ಮೋದಿ ಬುಧವಾರ ಪ್ರಕಟಿಸಿದ್ದಾರೆ.
ಪ್ರಧಾನಮಂತ್ರಿ ಬೀದಿ ಬದಿಯ ವ್ಯಾಪಾರಿಗಳ ಆತ್ಮನಿರ್ಭರ ನಿಧಿ (ಪಿಎಂಎಸ್‌ವಿಎ ನಿಧಿ) ಯೋಜನೆಯ ಫಲಾನುಭವಿಗಳ ಜತೆಗೆ ಆನ್‌ಲೈನ್ ಮೂಲಕ ಸಂವಾದ ನಡೆಸಿದ ಸಂದರ್ಭದಲ್ಲಿ ಮೋದಿ ಈ ವಿಚಾರ ತಿಳಿಸಿದ್ದಾರೆ. ಮಧ್ಯಪ್ರದೇಶದಲ್ಲಿ ಈ ಯೋಜನೆ ಸಮರ್ಪಕವಾಗಿ ಜಾರಿಯಾಗಿದ್ದು, ಒಂದು ಲಕ್ಷ ಮಂದಿ ಸದುಪಯೋಗ ಪಡೆದು ಕೊಂಡಿದ್ದಾರೆ, ಇದೊಂದು ಶ್ಲಾಘನೀಯ ಬೆಳವಣಿಗೆ ಎಂದು ಹೇಳಿದ್ದಾರೆ. ಎರಡು ತಿಂಗಳ ಅವಧಿಯಲ್ಲಿ 4.5 ಲಕ್ಷ ಮಂದಿಗೆ ಯೋಜನೆಯ ಅನ್ವಯ ಗುರುತಿನ ಚೀಟಿ ವಿತರಿಸಿರುವುದು ಅತ್ಯುತ್ತ ಮ ಬೆಳವಣಿಗೆಯಾಗಿದೆ ಎಂದರು.ಡಿಜಿಟಲ್ ಪಾವತಿ ನಿಟ್ಟಿನಲ್ಲಿ ಬ್ಯಾಂಕ್‌ಗಳು ಆಧುನಿಕ ವ್ಯವಸ್ಥೆ ಗಳನ್ನು ಆರಂಭಿಸಿವೆ. ಅದನ್ನು ಬೀದಿ ಬದಿಯ ವ್ಯಾಪಾರಿಗಳು ಅಳವಡಿಸಿಕೊಳ್ಳಬೇಕು ಎಂದರು.
ದೇಶದಲ್ಲಿ ಬಡತನ ನಿರ್ಮೂಲನೆ ಬಗ್ಗೆ ಕೈಗೊಂಡ ಕ್ರಮಗಳ ಬಗ್ಗೆ ಪ್ರಸ್ತಾವಿಸಿದ ಮೋದಿ, ದೇಶದಲ್ಲಿ ಬಡತನ ನಿರ್ಮೂಲನೆ ಬಗ್ಗೆ ಹಿಂದಿನ ಹಲವು ಸಂದರ್ಭಗಳಲ್ಲಿ ಪ್ರಸ್ತಾವಿಸಲಾಗಿತ್ತು. ಆದರೆ ಹಿಂದಿನ ಆರು ವರ್ಷಗಳಲ್ಲಿ ಬಡತನ ನಿರ್ಮೂಲನೆ ನಿಟ್ಟಿನಲ್ಲಿ ಯೋಜನಾಬದ್ಧವಾಗಿ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಇಂದು ಮತ್ಸತ್ಸ್ಯಸಂಪದ ಬಿಡುಗಡೆ
ಆತ್ಮನಿರ್ಭರ ಭಾರತ ಯೋಜನೆಯಡಿ ಕೇಂದ್ರ ಸರಕಾರ ಹಲವು ಯೋಜನೆಗಳನ್ನು ಘೋಷಿಸಿದ್ದು, ಅದರಂಗವಾಗಿ ತಯಾರಾಗಿರುವ ಪ್ರಧಾನಮಂತ್ರಿ ಮತ್ಸ éಸಂಪದ ಯೋಜನೆ(ಪಿಎಂಎಸ್‌ಎಸ್‌ವೈ)ಯನ್ನು ಗುರುವಾರ ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ. ಜತೆಗೆ ಕೃಷಿಕರ ನೆರವಿಗಾಗಿ ಇ-ಗೋಪಾಲ ಆ್ಯಪ್ ಅನ್ನೂ ಬಿಡುಗಡೆ ಮಾಡಲಿದ್ದಾರೆ. ಮೀನುಗಾರಿಕೆ ವಲಯ ಅಭಿವೃದ್ಧಿ ಗೆ 20,050 ಕೋಟಿ ರೂ. ತೊಡಗಿಸಲಾಗುತ್ತಿದೆ. 2020-21ರಿಂದ 2024-25ರ ವರೆಗಿನ 5 ವರ್ಷಗಳಲ್ಲಿ ಎಲ್ಲ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಲ್ಲಿ ಮೀನುಗಾರಿಕೆ ಅಭಿವೃದ್ಧಿ ಗುರಿ ಹೊಂದಲಾಗಿದೆ. 12,340 ಕೋಟಿ ರೂ.ಗಳನ್ನು ಸಮುದ್ರ, ಒಳನಾಡು ಮೀನುಗಾರಿಕೆ ಮತ್ತು ಮೀನುಸಾಕಾಣಿಕೆ ಮಾಡುವವರಿಗೆ ಬಳಸಲಾಗುತ್ತದೆ. ಮೀನುಗಾರಿಕೆ ಸಂಬಂಧಿ ಮೂಲಸೌಕರ್ಯಗಳಿಗಾಗಿ ಬಾಕಿ 7,710 ಕೋಟಿ ರೂ. ಬಳಸಲಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ambedkar row: ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್
ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಎಲ್ಲಿ…? ಇಲ್ಲಿದೆ ನೋಡಿ ಮಾಹಿತಿ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!
Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.