ನೋಟು ಅಮಾನ್ಯದ ಬಳಿಕ ಕಾರ್ಡ್‌ ಬಳಕೆ ಶೇ.7 ಏರಿಕೆ 

Team Udayavani, Jul 17, 2017, 4:00 AM IST

Debit-Card-600.jpg

ಹೊಸದಿಲ್ಲಿ: 500 ಹಾಗೂ 1 ಸಾವಿರ ಮುಖಬೆಲೆಯ ನೋಟುಗಳನ್ನು ಅಮಾನ್ಯಗೊಳಿಸಿದ ಬಳಿಕ ಕೇಂದ್ರ ಸರಕಾರವು ನಗದುರಹಿತ ವಹಿವಾಟಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಹೆಜ್ಜೆಯಿಟ್ಟಿದ್ದು ಗೊತ್ತೇ ಇದೆ. ಆದರೆ, ಅದರ ಫ‌ಲಿತಾಂಶ ಮಾತ್ರ ನಿರೀಕ್ಷೆಯಷ್ಟು ಆಗಿಲ್ಲ ಎಂದು ಸ್ವತಃ ಸರಕಾರದ ಮೂಲಗಳೇ ತಿಳಿಸಿವೆ. ಅಪನಗದೀಕರಣದ ಬಳಿಕ ಡೆಬಿಟ್‌ ಹಾಗೂ ಕ್ರೆಡಿಟ್‌ ಕಾರ್ಡ್‌ಗಳ ಬಳಕೆಯ ಪ್ರಮಾಣವು ಶೇ.7ರಷ್ಟು ಮಾತ್ರವೇ ಏರಿಕೆಯಾಗಿದೆ ಎಂದು ಸಂಸದೀಯ ಸಮಿತಿಗೆ ಸರಕಾರದ ಉನ್ನತ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸಮಾಧಾನದ ಸಂಗತಿಯೆಂದರೆ, ಈ ಅವಧಿಯಲ್ಲಿ ಒಟ್ಟಾರೆ ಡಿಜಿಟಲ್‌ ವಹಿವಾಟು ಶೇ.23ರಷ್ಟು ಹೆಚ್ಚಾಗಿದೆ.

‘ಅಪನಗದೀಕರಣ ಮತ್ತು ಡಿಜಿಟಲ್‌ ಆರ್ಥಿಕತೆಯತ್ತ ಬದಲಾವಣೆ’ ಎಂಬ ವಿಚಾರದ ಬಗ್ಗೆ ಹಣಕಾಸಿಗೆ ಸಂಬಂಧಿಸಿದ ಸಂಸದೀಯ ಸ್ಥಾಯಿ ಸಮಿತಿಗೆ ಸರಕಾರದ ವಿವಿಧ ಸಚಿವಾಲಯಗಳ ಅಧಿಕಾರಿಗಳು ರವಿವಾರ ಮಾಹಿತಿ ನೀಡಿದರು. 2016ರ ನವೆಂಬರ್‌ಗೆ ಹೋಲಿಸಿದರೆ 2017ರ ಮೇ ವೇಳೆಗೆ ಎಲ್ಲ ರೀತಿಯ ಡಿಜಿಟಲ್‌ ವಹಿವಾಟುಗಳು ಶೇ.23ರಷ್ಟು ಅಂದರೆ 27.5 ದಶಲಕ್ಷದಷ್ಟು ಹೆಚ್ಚಳವಾಗಿವೆ. ಐಎಂಪಿಎಸ್‌ ವಹಿವಾಟು ದುಪ್ಪಟ್ಟಾಗಿದ್ದು, 1.2 ದಶಲಕ್ಷದಿಂದ 2.2 ದಶಲಕ್ಷಕ್ಕೆ ಏರಿಕೆಯಾಗಿದೆ. ಆದರೆ, ಪ್ಲಾಸ್ಟಿಕ್‌ ಕಾರ್ಡ್‌ ಬಳಕೆಯಲ್ಲಿ ಹೇಳಿಕೊಳ್ಳುವಷ್ಟು ಏರಿಕೆಯಾಗಿಲ್ಲ. ಇದು ಕಳೆದ ವರ್ಷ 6.8 ದಶಲಕ್ಷವಿತ್ತು. ಪ್ರಸಕ್ತ ವರ್ಷ 7.3 ದಶಲಕ್ಷಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಜನಧನ ಠೇವಣಿ 64,564 ಕೋಟಿಗೆ ಏರಿಕೆ
ದೇಶದ ಜನಧನ ಖಾತೆಗಳಲ್ಲಿನ ಠೇವಣಿ ಮೊತ್ತ ಬರೋಬ್ಬರಿ 64,564 ಕೋಟಿ ರೂ.ಗೆ ಏರಿಕೆಯಾಗಿದೆ. ಈ ಪೈಕಿ ನೋಟು ಅಮಾನ್ಯದ ಮೊದಲ 7 ತಿಂಗಳಲ್ಲೇ 300 ಕೋಟಿ ರೂ. ಠೇವಣಿ ಇಡಲಾಗಿದೆ ಎಂದು ಸರಕಾರ ಮಾಹಿತಿ ನೀಡಿದೆ. ಆರ್‌ಟಿಐ ಅಡಿ ಕೇಳಲಾಗಿದ್ದ ಮಾಹಿತಿಗೆ ಉತ್ತರಿಸಿದ್ದ ವಿತ್ತ ಸಚಿವಾಲಯವು, ಕಳೆದ ಜೂನ್‌ವರೆಗೆ ದೇಶದಲ್ಲಿ 28.9 ಕೋಟಿ ಜನಧನ ಖಾತೆಗಳನ್ನು ತೆರೆಯಲಾಗಿದೆ. 2016ರ ನವೆಂಬರ್‌ 16ಕ್ಕೆ ಈ ಖಾತೆಗಳಲ್ಲಿ ಸುಮಾರು 64,252.15 ಕೋಟಿ ರೂ. ಠೇವಣಿ ಇತ್ತು. ಅಂದಿನಿಂದ ಪ್ರಸಕ್ತ ವರ್ಷದ ಜೂನ್‌ 14ರವರೆಗಿನ ಅವಧಿಯಲ್ಲಿ ಈ ಖಾತೆಗಳಲ್ಲಿ 311.93 ಕೋಟಿ ಠೇವಣಿ ಇಡಲಾಗಿದೆ ಎಂದು ಹೇಳಿದೆ.

ಟಾಪ್ ನ್ಯೂಸ್

Nandini-Dosa

New Products KMF: ಮಾರುಕಟ್ಟೆಗೆ ಬಂತು “ನಂದಿನಿ’ ಇಡ್ಲಿ, ದೋಸೆ ಹಿಟ್ಟು

GST: ಖರೀದಿ, ಮಾರಾಟ ದರದ ವ್ಯತ್ಯಾಸಕ್ಕಷ್ಟೇ 18% ಜಿಎಸ್‌ಟಿ

GST: ಖರೀದಿ, ಮಾರಾಟ ದರದ ವ್ಯತ್ಯಾಸಕ್ಕಷ್ಟೇ 18% ಜಿಎಸ್‌ಟಿ

Pro Kabaddi League-11: ಇಂದು ಎಲಿಮಿನೇಟರ್‌ ಸ್ಪರ್ಧೆ ಸೋತವರು ಮನೆಗೆ, ಗೆದ್ದವರು ಸೆಮಿಗೆ

Pro Kabaddi League-11: ಇಂದು ಎಲಿಮಿನೇಟರ್‌ ಸ್ಪರ್ಧೆ ಸೋತವರು ಮನೆಗೆ, ಗೆದ್ದವರು ಸೆಮಿಗೆ

ICC : 904 ರೇಟಿಂಗ್‌ ಅಂಕ ನೂತನ ಎತ್ತರಕ್ಕೆ ಜಸ್‌ಪ್ರೀತ್‌ ಬುಮ್ರಾ

ICC : 904 ರೇಟಿಂಗ್‌ ಅಂಕ ನೂತನ ಎತ್ತರಕ್ಕೆ ಜಸ್‌ಪ್ರೀತ್‌ ಬುಮ್ರಾ

Vijay Hazare Trophy: ಇಂದು ರಾಜ್ಯಕ್ಕೆ ಪಂಜಾಬ್‌ ಎದುರಾಳಿ

Vijay Hazare Trophy: ಇಂದು ರಾಜ್ಯಕ್ಕೆ ಪಂಜಾಬ್‌ ಎದುರಾಳಿ

Sabarimala ತಲುಪಿದ ತಂಗ ಅಂಗಿ; ಇಂದು ಮಂಡಲ ಸಂಪನ್ನ Sabarimala ತಲುಪಿದ ತಂಗ ಅಂಗಿ; ಇಂದು ಮಂಡಲ ಸಂಪನ್ನ

Sabarimala ತಲುಪಿದ ತಂಗ ಅಂಗಿ; ಇಂದು ಮಂಡಲ ಸಂಪನ್ನ

Bangla–Pak

ಬಾಂಗ್ಲಾದೇಶದ ಭಾರತ ವಿರೋಧಿ ಮನಃಸ್ಥಿತಿ ಖಂಡನೀಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

GST: ಖರೀದಿ, ಮಾರಾಟ ದರದ ವ್ಯತ್ಯಾಸಕ್ಕಷ್ಟೇ 18% ಜಿಎಸ್‌ಟಿ

GST: ಖರೀದಿ, ಮಾರಾಟ ದರದ ವ್ಯತ್ಯಾಸಕ್ಕಷ್ಟೇ 18% ಜಿಎಸ್‌ಟಿ

Sabarimala ತಲುಪಿದ ತಂಗ ಅಂಗಿ; ಇಂದು ಮಂಡಲ ಸಂಪನ್ನ Sabarimala ತಲುಪಿದ ತಂಗ ಅಂಗಿ; ಇಂದು ಮಂಡಲ ಸಂಪನ್ನ

Sabarimala ತಲುಪಿದ ತಂಗ ಅಂಗಿ; ಇಂದು ಮಂಡಲ ಸಂಪನ್ನ

Manipur: 2 ಗುಂಪುಗಳ ನಡುವೆ ಗುಂಡಿನ ಚಕಮಕಿ

Manipur: 2 ಗುಂಪುಗಳ ನಡುವೆ ಗುಂಡಿನ ಚಕಮಕಿ

Fake News: ಕೇಂದ್ರ ಸಚಿವ ಅಮಿತ್‌ ಶಾ ನಿಧನ ಎಂದು ಸುಳ್ಳು ಸುದ್ದಿ: ವ್ಯಕ್ತಿ ಸೆರೆ

Fake News: ಕೇಂದ್ರ ಸಚಿವ ಅಮಿತ್‌ ಶಾ ನಿಧನ ಎಂದು ಸುಳ್ಳು ಸುದ್ದಿ: ವ್ಯಕ್ತಿ ಸೆರೆ

Karnataka ಸೇರಿ ವಿವಿಧ ರಾಜ್ಯದ ಸಾಧಕರ ಜತೆ ರಾಷ್ಟ್ರಪತಿ ಭೇಟಿ

Karnataka ಸೇರಿ ವಿವಿಧ ರಾಜ್ಯದ ಸಾಧಕರ ಜತೆ ರಾಷ್ಟ್ರಪತಿ ಭೇಟಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Nandini-Dosa

New Products KMF: ಮಾರುಕಟ್ಟೆಗೆ ಬಂತು “ನಂದಿನಿ’ ಇಡ್ಲಿ, ದೋಸೆ ಹಿಟ್ಟು

GST: ಖರೀದಿ, ಮಾರಾಟ ದರದ ವ್ಯತ್ಯಾಸಕ್ಕಷ್ಟೇ 18% ಜಿಎಸ್‌ಟಿ

GST: ಖರೀದಿ, ಮಾರಾಟ ದರದ ವ್ಯತ್ಯಾಸಕ್ಕಷ್ಟೇ 18% ಜಿಎಸ್‌ಟಿ

Pro Kabaddi League-11: ಇಂದು ಎಲಿಮಿನೇಟರ್‌ ಸ್ಪರ್ಧೆ ಸೋತವರು ಮನೆಗೆ, ಗೆದ್ದವರು ಸೆಮಿಗೆ

Pro Kabaddi League-11: ಇಂದು ಎಲಿಮಿನೇಟರ್‌ ಸ್ಪರ್ಧೆ ಸೋತವರು ಮನೆಗೆ, ಗೆದ್ದವರು ಸೆಮಿಗೆ

ICC : 904 ರೇಟಿಂಗ್‌ ಅಂಕ ನೂತನ ಎತ್ತರಕ್ಕೆ ಜಸ್‌ಪ್ರೀತ್‌ ಬುಮ್ರಾ

ICC : 904 ರೇಟಿಂಗ್‌ ಅಂಕ ನೂತನ ಎತ್ತರಕ್ಕೆ ಜಸ್‌ಪ್ರೀತ್‌ ಬುಮ್ರಾ

Vijay Hazare Trophy: ಇಂದು ರಾಜ್ಯಕ್ಕೆ ಪಂಜಾಬ್‌ ಎದುರಾಳಿ

Vijay Hazare Trophy: ಇಂದು ರಾಜ್ಯಕ್ಕೆ ಪಂಜಾಬ್‌ ಎದುರಾಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.