Modi 15 ಲಕ್ಷ ರೂ.ಗಾಗಿ ನಮ್ಮ ಮನೆಯಲ್ಲಿ 11 ಬ್ಯಾಂಕ್ ಖಾತೆ ತೆರೆದೆವು..!; ಲಾಲು
ನಾನು, ಪತ್ನಿ,ಏಳು ಪುತ್ರಿಯರು, ಇಬ್ಬರು ಪುತ್ರರು. ..!
Team Udayavani, Sep 1, 2023, 6:49 PM IST
ಮುಂಬಯಿ: ‘ನರೇಂದ್ರ ಮೋದಿ ಕೊಡುತ್ತೇನೆ ಎಂದು ಹೇಳಿದ 15 ಲಕ್ಷ ರೂ.ಗಾಗಿ ನಾನು, ನನ್ನ ಪತ್ನಿ,ಏಳು ಪುತ್ರಿಯರು ಸೇರಿ ಇಬ್ಬರು ಪುತ್ರರು 11 ಬ್ಯಾಂಕ್ ಖಾತೆಗಳನ್ನೂ ತೆರೆದೆವು’ ಎಂದು ಆರ್ ಜೆಡಿ ನಾಯಕ ಲಾಲು ಯಾದವ್ ತಮ್ಮ ಹಳೇ ಸ್ಟೈಲ್ ನಲ್ಲಿ ಹಾಸ್ಯ ಚಟಾಕಿ ಹಾರಿಸುವ ಮೂಲಕ ಇಂಡಿಯಾ ಮೈತ್ರಿಕೂಟದ ಸಭೆಯಲ್ಲಿ ಗಮನ ಸೆಳೆದರು.
ಶುಕ್ರವಾರ ಇಂಡಿಯಾ ಮೈತ್ರಿಕೂಟದ ವೇದಿಕೆಯ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಕೇಂದ್ರ ಸರಕಾರ ಮತ್ತು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ ತಮ್ಮದೇ ಆದ ವಿಶಿಷ್ಟ ರೀತಿಯಲ್ಲಿ ಮಾತನಾಡಿದರು. ಈ ವೇಳೆ ಅಲ್ಲಿದ್ದ ನಾಯಕರು ನಗುತ್ತಿರುವುದು ಕಂಡು ಬಂತು. ತಮ್ಮ ಭಾಷಣದಲ್ಲಿ, ಮೈತ್ರಿಯಲ್ಲಿ ಭಾಗಿಯಾಗಿರುವ ಎಲ್ಲಾ ಪಕ್ಷಗಳು ಒಟ್ಟಾಗಿ ಹೋರಾಡುವ ಬಗ್ಗೆಯೂ ಲಾಲು ಹೇಳಿದರು.
‘ನನ್ನ ಹಾಗೂ ದೇಶದ ಇತರ ನಾಯಕರ ಹಣ ಸ್ವಿಸ್ ಬ್ಯಾಂಕ್ ನಲ್ಲಿದೆ ಎಂದು ಪ್ರಚಾರ ಮಾಡಿದ್ದರು. ನಾವು ಬರುತ್ತೇವೆ ಸ್ವಿಸ್ ಬ್ಯಾಂಕಿನಿಂದ ಹಣ ತಂದು ದೇಶದ ಎಲ್ಲ ಜನರಿಗೂ ಖಾತೆ ತೆರೆದು 15 ಲಕ್ಷ ರೂ.ರೂ.ಗಳನ್ನು ಠೇವಣಿ ಇಡುವುದಾಗಿ ಹೇಳಿದರು. ನಾವೂ ಬಲೆಗೆ ಬಿದ್ದೆವು’ ಎಂದರು.
‘ವಿರೋಧ ಪಕ್ಷಗಳು ಒಟ್ಟಿಗೆ ಇರದಿರುವ ಲಾಭವನ್ನು ಪ್ರಧಾನಿ ಮೋದಿ ಬಳಸಿಕೊಂಡಿದ್ದಾರೆ ಬಿಜೆಪಿ ಆಡಳಿತದಲ್ಲಿ ಅಲ್ಪಸಂಖ್ಯಾತರು ಭಾರತದಲ್ಲಿ ಸುರಕ್ಷಿತವಾಗಿಲ್ಲ, ಬೆಲೆಗಳು ನಿರಂತರವಾಗಿ ಏರುತ್ತಿವೆ’ ಎಂದು ಲಾಲು ಆರೋಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Train ಜನಶತಾಬ್ದಿ ಎಕ್ಸ್ಪ್ರೆಸ್ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ
Himachal Pradesh;ನಷ್ಟದಲ್ಲಿರುವ ಹೊಟೇಲ್ ಮುಚ್ಚಲು ಹೈಕೋರ್ಟ್ ಆದೇಶ
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.