ಆನೆ ನಿಷೇಧಿಸಿದ್ದಕ್ಕೆ ವಿರೋಧ
ಕೇರಳದ ಪೂರಂನಲ್ಲಿ ರಾಮಚಂದ್ರನ್‌ಗೆ ನಿರ್ಬಂಧ
Team Udayavani, May 10, 2019, 6:00 AM IST
ತಿರುವನಂತಪುರ: ಶ್ರೀಮಂತ ಸಾಂಸ್ಕೃತಿಕ ವೈವಿಧ್ಯವನ್ನು ಹೊಂದಿರುವ ಕೇರಳದಲ್ಲಿ ಈಗ ಶಬರಿಮಲೆಯಂಥದ್ದೇ ಇನ್ನೊಂದು ವಿವಾದ ಹುಟ್ಟಿಕೊಳ್ಳುವ ಲಕ್ಷಣ ಗೋಚರಿಸುತ್ತಿದೆ. ಅತ್ಯಂತ ಜನಪ್ರಿಯ ಪೂರಂ ಹಬ್ಬದಲ್ಲಿ ವೃದ್ಧ ಆನೆ ತೆಚ್ಚಿಕೊಟ್ಟುಕಾವು ರಾಮಚಂದ್ರನ್ ಭಾಗವಹಿಸ ದಂತೆ ಸ್ಥಳೀಯ ಆಡಳಿತ ನಿಷೇಧ ಹೇರಿರುವುದು ಈಗ ದೊಡ್ಡ ವಿವಾದವಾಗಿದೆ. 54 ವರ್ಷದ ಈ ಆನೆ ದಶಕಗಳಿಂದಲೂ ಪೂರಂ ಹಬ್ಬದ ಸೆಲೆಬ್ರಿಟಿ! ಈ ಆನೆಯನ್ನು ಕಣ್ತುಂಬಿಕೊಳ್ಳಲೆಂದೇ ಹಬ್ಬಕ್ಕೆ ಸಾವಿರಾರು ಜನರು ಆಗಮಿಸುತ್ತಾರೆ. ಆದರೆ ಕಳೆದ ಫೆಬ್ರವರಿಯಲ್ಲಿ ರಾಮಚಂದ್ರನ್ ಮಾಡಿದ ಒಂದು ಅನಾಹುತವೇ ಈಗ ಆತನಿಗೆ ನಿಷೇಧ ಹೇರುವಂತೆ ಮಾಡಿದೆ. ಒಕ್ಕಣ್ಣ ರಾಮಚಂದ್ರನ್ ಕಳೆದ ಫೆಬ್ರವರಿಯಲ್ಲಿ ಸಿಟ್ಟಿಗೆದ್ದು ಇಬ್ಬರನ್ನು ಸಾಯಿಸಿದ್ದ. ಹೀಗಾಗಿ ಭದ್ರತೆ ಕಾರಣಗಳಿಗೆ ಆನೆಯನ್ನು ಬಳಸದಂತೆ ಆಡಳಿತ ಮಂಡಳಿ ಸೂಚಿಸಿದೆ.
ಆದರೆ ರಾಮಚಂದ್ರನ್ ಮೇಲೆ ನಂಬಿಕೆಯಿಟ್ಟಿರುವ ಭಕ್ತರಿಗೆ ಇದು ಸಿಟ್ಟು ತರಿಸಿದೆ. ಕೇರಳ ಆನೆ ಮಾಲೀಕರ ಸಂಘಟನೆ ಈಗಾಗಲೇ ಪ್ರತಿಭಟನೆ ನಡೆಸುತ್ತಿದ್ದು, ಇದಕ್ಕೆ ಬಲಪಂಥದ ಸಂಘಟನೆಗಳು ಬೆಂಬಲ ಸೂಚಿಸಿವೆ. ಯಾವ ಆನೆಯನ್ನೂ ಯಾವ ಉತ್ಸವದಲ್ಲೂ ಭಾಗವಹಿಸಲು ಒದಗಿಸುವುದಿಲ್ಲ ಎಂದು ಸಂಘಟನೆಯ ಮುಖಂಡರು ಎಚ್ಚರಿಕೆ ನೀಡಿದ್ದಾರೆ. ಅಷ್ಟೇ ಅಲ್ಲ, ಮೇ 11ರಿಂದಲೇ ಆನೆಗಳನ್ನು ಉತ್ಸವಕ್ಕೆ ಕೊಡುವುದಿಲ್ಲ ಎಂದಿವೆ. ಮೇ11ರ ನಂತರ ಕೇರಳದಾದ್ಯಂತ ಹಲವು ಉತ್ಸವಗಳು ನಡೆಯಲಿದ್ದು, ವಿವಾದ ಇನ್ನಷ್ಟು ಗಂಭೀರ ಸ್ವರೂಪ ಪಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gujarat: ಹಿರಿಯ ವಿದ್ಯಾರ್ಥಿಗಳ Ragging-ಪ್ರಥಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ ಸಾ*ವು
Army Wepon: ಭಾರತದ ಬತ್ತಳಿಕೆಗೆ ದೇಸಿ ಹೈಪರ್‌ಸಾನಿಕ್ ಅಸ್ತ್ರ !
Mobs Storm: ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ!, ಮೈತೇಯಿ ಸಮುದಾಯದಿಂದ ಭಾರೀ ಪ್ರತಿಭಟನೆ
Maharashtra: ಮತಗಟ್ಟೆ ಬಳಿ ಚಪ್ಪಲಿ ನಿಷೇಧಿಸಿ ಎಂದು ಮಹಾಪಕ್ಷೇತರ ಅಭ್ಯರ್ಥಿ ಮನವಿ!
ಮನುಷ್ಯ ನೀನು ದಂಡ, ಸತ್ತು ಹೋಗು!: ಎಐ ಚಾಟ್‌ಬಾಟ್ ಹೇಳಿಕೆ
MUST WATCH
ಹೊಸ ಸೇರ್ಪಡೆ
Hukkeri: ಮೀನು ಹಿಡಿಯಲು ಹೋಗಿದ್ದ ತಂದೆ, ಇಬ್ಬರು ಮಕ್ಕಳು ನೀರುಪಾಲು
Karkala: ಪಶು ಗಣತಿಯಲ್ಲಿ ಬೆಕ್ಕುಗಳ ಅವಗಣನೆ !
Emergency: ಹತ್ತಾರು ವಿಳಂಬದ ಬಳಿಕ ಕೊನೆಗೂ ಕಂಗನಾ ʼಎಮರ್ಜೆನ್ಸಿʼ ರಿಲೀಸ್ ಗೆ ಡೇಟ್ ಫಿಕ್ಸ್
IPL Mega Auction: ಮೆಗಾ ಹರಾಜಿನಲ್ಲಿ 13ರ ಬಾಲಕ: ಯಾರಿದು ವೈಭವ್ ಸೂರ್ಯವಂಶಿ
Mangaluru: ಹೆದ್ದಾರಿ ಬದಿ ನಿಲ್ಲುವ ವಾಹನ; ಅಪಾಯಕ್ಕೆ ಆಹ್ವಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.