ಮೋದಿ ಮಾತಿನ ಚಾಟಿಗೆ ವಿಪಕ್ಷಗಳು ಸುಸ್ತು!
Team Udayavani, May 24, 2019, 6:05 AM IST
ಪ್ರಧಾನಿ ನರೇಂದ್ರ ಮೋದಿ ಭಾಷಣ ಕಲೆಯಲ್ಲಿ ನಿಷ್ಣಾತರು.ಸಂಶಯವೇ ಬೇಡ! ಪ್ರತಿ ಚುನಾವಣೆಯಲ್ಲೂ ಅವರು ನಿರ್ದಿಷ್ಟ ವಿಚಾರ ಪ್ರಸ್ತಾವಿಸುವುದರೊಂದಿಗೆ ಹಲವು ವಿಚಾರಗಳನ್ನು ಪ್ರಸ್ತಾವಿಸುತ್ತಾರೆ. ಈ ಮೂಲಕ ಜನರ ಮನಸ್ಸಿನಲ್ಲಿ ಅದು ನೆಲೆ ನಿಲ್ಲುವಂತೆ ಮಾಡುತ್ತಾರೆ. ಈ ಬಾರಿಯೂ ಮೋದಿ ಈ ಟ್ರಿಕ್ ಬಳಕೆ ಮಾಡಿದ್ದಾರೆ. 2014ರ ಚುನಾವಣೆ ಪ್ರಚಾರದ ವೇಳೆ ಮೋದಿ ಪ್ರಸ್ತಾವಿಸಿದ ವಿಚಾರಗಳಿಗೂ 2019ರಲ್ಲಿ ಪ್ರಸ್ತಾವಿಸಿದ ವಿಚಾರಗಳಿಗೂ ಬಹಳಷ್ಟು ವ್ಯತ್ಯಾಸವಿದೆ. 2014ರಲ್ಲಿ ಅವರು ಪ್ರಸ್ತಾವಿಸಿದ ಹಲವು ವಿಚಾರಗಳಲ್ಲಿ “ನಾವಿದನ್ನು ಮಾಡಬಲ್ಲೆವು’ ಎಂಬುದು ಮುಖ್ಯವಾಗಿದ್ದರೆ, 2019ರಲ್ಲಿ “ನಾವಿದನ್ನು ಮಾಡಿದ್ದೇವೆ’ ಎಂದು ಮನವರಿಕೆ ಮಾಡಿಕೊಟ್ಟರು.
ಚಾಯ್‌ವಾಲಾನಿಂದ ಚೌಕೀದಾರ್
2014ರಲ್ಲಿ ಮೋದಿ ಭ್ರಷ್ಟಾಚಾರದ ವಿರುದ್ಧ, ಬಡವರ ಪರವಾಗಿ ಸಾಕಷ್ಟು ಮಾತುಗಳನ್ನಾಡಿದ್ದರು. ಬಡವರ ಪರ ಎಂದು ಬಿಂಬಿಸಲು ಅವರು ಚಾಯ್‌ವಾಲಾ ಹೆಸರನ್ನು ಪರಿಣಾಮಕಾರಿಯಾಗಿ ಬಳಸಿದ್ದರು. ಈ ಬಾರಿ ರಕ್ಷಣೆ ವಿಚಾರದಲ್ಲಿ, ಭಯೋತ್ಪಾದನೆ, ಪಾಕಿಸ್ಥಾನ ವಿರುದ್ಧ ಪರಿಣಾಮಕಾರಿ ಕ್ರಮ ಕೈಗೊಂಡಿದ್ದೇವೆ ಎಂಬುದಕ್ಕೆ ಪೂರಕವಾಗಿ ಅತ್ಯುಗ್ರವಾಗಿ ಮಾತನಾಡಿದ್ದೂ ಅಲ್ಲದೇ ಭ್ರಷ್ಟಾಚಾರ, ರಕ್ಷಣೆ ವಿಚಾರದಲ್ಲಿ ಚೌಕೀದಾರ್ ಶಬ್ದವನ್ನು ಹೋದಲ್ಲೆಲ್ಲ ಪ್ರಸ್ತಾವಿಸಿದ್ದಾರೆ. ಉಗ್ರರ ಮನೆಗೆ ನುಗ್ಗಿ ಹೊಡೆಯುತ್ತೇವೆ ಎಂಬ ಅವರ ಡೈಲಾಗ್ ಪ್ರಸಿದ್ಧವಾಗಿತ್ತು. ಒಂದು ಸಮೀಕ್ಷೆ ಪ್ರಕಾರ ಅವರು 109 ಬಾರಿ ಚೌಕೀದಾರ್ ಪದವನ್ನು ತಮ್ಮ ಚುನಾವಣ ಭಾಷಣಗಳಲ್ಲಿ ಬಳಸಿದ್ದಾರೆ. 2014ರಲ್ಲಿ ಅವರು ಬಡವರು/ಬಡತನ ಎಂಬುದನ್ನು 55 ಬಾರಿ ಪ್ರಯೋಗಿಸಿದ್ದರು.
ಅಭಿವೃದ್ಧಿಯಿಂದ ರಕ್ಷಣೆ
2014ರ ಪ್ರಚಾರದ ವೇಳೆ ಪ್ರಧಾನಿ ಮೋದಿ ಅವರು ಪ್ರಚಾರದಲ್ಲಿ ಹೆಚ್ಚು ಬಳಸಿದ್ದು ಅಭಿವೃದ್ಧಿ ವಿಚಾರಗಳನ್ನು. ಬಡವರ ಕಲ್ಯಾಣ, ಉದ್ಯೋಗ ನೀಡಿಕೆ, ಭ್ರಷ್ಟಾಚಾರ, ಬಡತನ ವಿಚಾರಗಳು ಅವರ ಮಾತುಗಳಲ್ಲಿ ಹೆಚ್ಚಾಗಿದ್ದವು. ಬಡವರು ಎಂಬ ಪದವನ್ನು ಅವರು 2014ರಲ್ಲಿ 55 ಬಾರಿ ಬಳಸಿದ್ದರೆ, 14 ಬಾರಿ ಉದ್ಯೋಗದ ಬಗ್ಗೆ, 19 ಬಾರಿ ಬಡತನದ ಬಗ್ಗೆ, 10 ಬಾರಿ ಯುಪಿಎ ಸರಕಾರದ ಭ್ರಷ್ಟಾಚಾರದ ಬಗ್ಗೆ ಪ್ರಸ್ತಾವಿಸಿದ್ದರು. 2019ರಲ್ಲಿ ರಕ್ಷಣೆ ಬಗ್ಗೆ ಅತಿ ಹೆಚ್ಚು ಮೋದಿ ಪ್ರಸ್ತಾವಿಸಿದ್ದಾರೆ. ಬಾಲಾಕೋಟ್ ದಾಳಿ, ಸರ್ಜಿಕಲ್ ಸ್ಟ್ರೈಕ್‌ನ ವಿಚಾರ ಇದರಲ್ಲಿ ಪ್ರಮುಖ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು
ಎಸ್.ಎಂ.ಕೃಷ್ಣ ಸಂಸ್ಮರಣಾ ವೇದಿಕೆಯಿಂದ ಪಂಚನಮನ
New Year: ಸ್ನೇಹಿತರ ಮನೆಗೆ ಪಾರ್ಟಿಗೆಂದು ಹೋದ ಬಾಲಕಿಯ ಮೇಲೆ ಅತ್ಯಾ*ಚಾರ
Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ
China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.