![1-sidda](https://www.udayavani.com/wp-content/uploads/2025/02/1-sidda-415x281.jpg)
![1-sidda](https://www.udayavani.com/wp-content/uploads/2025/02/1-sidda-415x281.jpg)
Team Udayavani, Feb 26, 2024, 11:56 PM IST
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿಯವರು ಸೋಮವಾರ ಒಂದೇ ದಿನ ದೇಶಾದ್ಯಂತ 41 ಸಾವಿರ ಕೋಟಿ ರೂ. ವೆಚ್ಚದ ಬರೋಬ್ಬರಿ 2 ಸಾವಿರ ರೈಲ್ವೇ ಮೂಲಸೌಕರ್ಯ ಯೋಜನೆಗಳಿಗೆ ಶಿಲಾನ್ಯಾಸ ಮತ್ತು ಉದ್ಘಾಟನೆ ನೆರವೇರಿಸಿದ್ದಾರೆ. ಜತೆಗೆ, ಇದು “ನವ ಭಾರತ’ದ ಕಾರ್ಯವೈಖರಿಗೆ ಸಾಕ್ಷಿ ಎಂದೂ ಅವರು ಬಣ್ಣಿಸಿದ್ದಾರೆ.
ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಹರಡಿರುವ ವಿವಿಧ ಯೋಜನೆಗಳಿಗೆ ವರ್ಚುವಲ್ ಆಗಿ ಚಾಲನೆ ನೀಡಿ ಮಾತನಾಡಿದ ಮೋದಿ, “ಇಂದಿನ ಕಾರ್ಯಕ್ರಮವು ನವ ಭಾರತದ ಕಾರ್ಯವೈಖರಿ ಮತ್ತು ಕಾರ್ಯನೀತಿಗೆ ಸಾಕ್ಷಿಯಾಗಿದೆ. ಈಗ ಭಾರತವು ಹಿಂದೆಂದೂ ಕಂಡಿರದಂಥ ವೇಗದಲ್ಲಿ ಮತ್ತು ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿದೆ. ದೊಡ್ಡ ದೊಡ್ಡ ಕನಸುಗಳನ್ನು ಕಾಣುತ್ತಿದೆ ಮತ್ತು ಅಷ್ಟೇ ವೇಗವಾಗಿ ಅದನ್ನು ಸಾಕಾರಗೊಳಿಸುತ್ತಿದೆ’ ಎಂದಿದ್ದಾರೆ.
ನಿಮ್ಮ ಕನಸುಗಳೇ ನನ್ನ ಸಂಕಲ್ಪ
ಅಭಿವೃದ್ಧಿ ಹೊಂದಿದ ಭಾರತವು ದೇಶದ ಯುವಜನರ ಕನಸಾಗಿದೆ. ಭವಿಷ್ಯದಲ್ಲಿ ಭಾರತವು(ವಿಕಸಿತ ಭಾರತ) ಯಾವ ರೂಪ ಪಡೆಯಬೇಕು ಎಂಬುದನ್ನು ನಿರ್ಧರಿಸುವವರು ಇವರೇ ಆಗಿದ್ದಾರೆ. ನಾನು ದೇಶದ ಯುವಜನತೆಗೆ ಹೇಳುವುದಿಷ್ಟೆ- ನಿಮ್ಮ ಕನಸುಗಳೇ ನನ್ನ ಸಂಕಲ್ಪ. ನಿಮ್ಮ ಕನಸುಗಳು, ನಿಮ್ಮ ಪರಿಶ್ರಮ ಮತ್ತು ಮೋದಿಯ ಸಂಕಲ್ಪವೇ ವಿಕಸಿತ ಭಾರತದ ಗ್ಯಾರಂಟಿಯಾಗಿದೆ ಎಂದು ಮೋದಿ ನುಡಿದಿದ್ದಾರೆ.
ಜೂನ್‌ನಿಂದ ನಮ್ಮ 3ನೇ ಅವಧಿ ಆರಂಭ: ಮೋದಿ
ನಮ್ಮ ಸರಕಾರದ 3ನೇ ಅವಧಿಯು ಜೂನ್‌ನಲ್ಲಿ ಆರಂಭವಾಗಲಿದೆ. ಆದರೆ ನಮ್ಮ ಕೆಲಸದ ವೇಗ ಮತ್ತು ಪ್ರಮಾಣವು ದೇಶವಾಸಿಗಳನ್ನು ಅಚ್ಚರಿಗೆ ನೂಕಿದೆ. ಕಳೆದ 10 ವರ್ಷಗಳಲ್ಲಿ ನವಭಾರತ ನಿರ್ಮಾಣ ಆಗುತ್ತಿರುವುದನ್ನು ಜನ ನೋಡುತ್ತಿದ್ದಾರೆ ಎಂದೂ ಹೇಳುವ ಮೂಲಕ ಮೋದಿಯವರು ಲೋಕಸಭೆ ಚುನಾವಣೆಯಲ್ಲಿ ಮತ್ತೆ ಅಧಿಕಾರಕ್ಕೇರುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ರವಿವಾರ ನಡೆದ ಮನ್ ಕೀ ಬಾತ್‌ನಲ್ಲೂ ಅವರು ಇದೇ ಮಾತುಗಳನ್ನಾಡಿದ್ದರು.
ಯಾವ್ಯಾವ ಯೋಜನೆಗಳಿಗೆ ಶಿಲಾನ್ಯಾಸ, ಉದ್ಘಾಟನೆ?
ಅಮೃತ ಭಾರತ ಸ್ಟೇಷನ್ ಯೋಜನೆ ಅನ್ವಯ 553 ನಿಲ್ದಾಣಗಳ ಪುನರಾಭಿವೃದ್ಧಿಗೆ ಶಿಲಾನ್ಯಾಸ
24 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 1,500 ರಸ್ತೆ ಮೇಲ್ಸೇತುವೆಗಳು ಮತ್ತು ಕೆಳಸೇತುವೆಗಳ ನಿರ್ಮಾಣಕ್ಕೆ ಶಿಲಾನ್ಯಾಸ: 21,520 ಕೋಟಿ ರೂ. ವೆಚ್ಚ
19 ಸಾವಿರ ಕೋಟಿ ರೂ. ವೆಚ್ಚದಲ್ಲಿ 27 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಹರಡಿರುವ ಅಮೃತ ಭಾರತ ಸ್ಟೇಷನ್‌ಗಳ ಮರು ಅಭಿವೃದ್ಧಿ
ಗುರುಗ್ರಾಮ ರೈಲ್ವೇ ನಿಲ್ದಾಣ ಮೇಲ್ದರ್ಜೆ
ಗೇರಿಸುವ ಕಾಮಗಾರಿಗೆ ಶಿಲಾನ್ಯಾಸ (ಮೊದಲ ಹಂತಕ್ಕೆ 295 ಕೋಟಿ ರೂ. ವೆಚ್ಚ)
ಉತ್ತರಪ್ರದೇಶದಲ್ಲಿ 385 ಕೋಟಿ ರೂ. ವೆಚ್ಚದಲ್ಲಿ ಮರುನವೀಕರಣಗೊಂಡಿರುವ ಗೋಮತಿ ನಗರ ಸ್ಟೇಷನ್ ಉದ್ಘಾಟನೆ
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!
ಹೆಚ್ಚು ವರದಕ್ಷಿಣೆ ನೀಡಲಿಲ್ಲವೆಂದು ಸೊಸೆಗೆ HIV ಸೋಂಕಿನ ಇಂಜೆಕ್ಷನ್ ನೀಡಿದ ಅತ್ತೆ ಮಾವ
Valentine’s Day: ಹಳೇ ಗೆಳೆಯನಿಗೆ 100ಪಿಜ್ಜಾ ಆರ್ಡರ್ ಮಾಡಿದ ಯುವತಿ: ಆದರೆ ಟ್ವಿಸ್ಟ್ ಇದೆ
You seem to have an Ad Blocker on.
To continue reading, please turn it off or whitelist Udayavani.