ಸಾಮ್ರಾಜ್ಯ ಅವರ ಧ್ಯೇಯ ಸಶಕ್ತೀಕರಣ ನಮ್ಮ ಗುರಿ
Team Udayavani, Jan 14, 2019, 12:30 AM IST
ಚೆನ್ನೈ: “ವಿಪಕ್ಷಗಳು ತಮ್ಮದೇ ಆದ ಸಾಮ್ರಾಜ್ಯ ಕಟ್ಟುವ ಗುರಿ ಹೊಂದಿದ್ದರೆ, ನಾವು ಸಶಕ್ತೀಕರಣದ ಧ್ಯೇಯ ಹೊಂದಿದ್ದೇವೆ” ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
2019ರ ಮಹಾ ಚುನಾವಣೆಯಲ್ಲಿ ಶತಾಯಗತಾಯ ಬಿಜೆಪಿಗೆ ಅಧಿಕಾರ ತಪ್ಪಿಸುವ ಉದ್ದೇಶದಿಂದ ರಚನೆ ಯಾಗುತ್ತಿರುವ ವಿಪಕ್ಷಗಳ ಮಹಾ ಘಟ ಬಂಧನವನ್ನು ಕಟುವಾಗಿ ಟೀಕಿಸಿರುವ ಅವರು, “”ವಿಪಕ್ಷಗಳಂತೆ ಸಮಾಜವನ್ನು ಒಡೆದು ಆಳುವ, ವೋಟ್ ಬ್ಯಾಂಕ್‌ಗಳನ್ನು ನಿರ್ಮಿಸುವ ಆಶಯದೊಂದಿಗೆ ಬಿಜೆಪಿ ರಾಜಕಾರಣಕ್ಕೆ ಕಾಲಿಟ್ಟಿಲ್ಲ. ಬಿಜೆಪಿ ಕಾರ್ಯಕರ್ತನೊಬ್ಬ ಸ್ವಹಿತಾಸಕ್ತಿ ಯಿಂದ ಎಂದಿಗೂ ಕಾರ್ಯ ನಿರ್ವಹಿಸಲಾರ. ದೇಶಸೇವೆಯ ಗುರಿಯೊಂದಿಗೆ ಮಾತ್ರ ಕಾರ್ಯ ನಿರ್ವಹಿಸುತ್ತಾನೆ” ಎಂದು ಅವರು ಹೇಳಿದ್ದಾರೆ.
ತಮಿಳುನಾಡಿನ ಬಿಜೆಪಿ ಕಾರ್ಯ ಕರ್ತರೊಂದಿಗೆ ಸಂವಾದ ನಡೆಸುವ ವೇಳೆ ಅವರು ಈ ರೀತಿ ಟೀಕೆ ಮಾಡಿದ್ದು, ಎಸ್‌ಪಿ, ಬಿಎಸ್‌ಪಿ ಮೈತ್ರಿ ಏರ್ಪಟ್ಟ ಮರುದಿನವೇ ಈ ಹೇಳಿಕೆ ಗಮನಾರ್ಹ.
ವಿಪಕ್ಷಗಳನ್ನು ಅವಕಾಶ ವಾದಿಗಳು, ವಂಶ ಪಾರಂಪರ್ಯ ಪಕ್ಷಗಳು ಎಂದು ಜರೆದ ಅವರು, “”ಅಭಿವೃದ್ಧಿಯ ಗುರಿ ಒಂದೆಡೆಯಿದ್ದರೆ, ಅವಕಾಶವಾದಿ ಪಕ್ಷಗಳ ಗುಂಪು ಮತ್ತೂಂದೆಡೆ ಇದೆ. ಇವುಗಳಲ್ಲಿ ಅಭಿವೃದ್ಧಿಯ ಪಥವನ್ನು ಆರಿಸಿಕೊಳ್ಳ ಬೇಕಿದ್ದು, “ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಆಶಯದೊಂದಿಗೆ ಮುನ‚°ಡೆ ಯಬೇಕಾಗಿದೆ” ಎಂದು ಅವರು ತಿಳಿಸಿದ್ದಾರೆ.
ಕಾಂಗ್ರೆಸ್ ತಪ್ಪೆಸಗಿತು
ದೇಶ ವಿಭಜನೆ ವೇಳೆ ಕರ್ತಾರ್ಪುರ ಸಾಹಿಬ್ ಅನ್ನು ಭಾರತದ ಭಾಗವಾಗಿಸುವಲ್ಲಿ ವಿಫಲವಾದ ಕಾಂಗ್ರೆಸ್ ವಿರುದ್ಧ ಪ್ರಧಾನಿ ಮೋದಿ ಕಿಡಿಕಾರಿದ್ದಾರೆ. ರವಿವಾರ ಹೊಸದಿಲ್ಲಿಯ ತಮ್ಮ ನಿವಾಸದಲ್ಲಿ 10ನೇ ಸಿಕ್ಖ್ ಗುರು ಗೋವಿಂದ ಸಿಂಗ್ 350ನೇ ಜನ್ಮ ದಿನದ ಸ್ಮರಣಾರ್ಥ ನಾಣ್ಯ ಬಿಡುಗಡೆ ಮಾಡಿದ ಅವರು, ಕಾಂಗ್ರೆಸ್ ವಿರುದ್ಧ ಹರಿಹಾಯ್ದು. 1947ರಲ್ಲೇ ನಡೆದ ತಪ್ಪು ಇದು. ನಮ್ಮ ಗುರುವಿನ ಪ್ರಮುಖ ತಾಣ ಕೆಲವೇ ಕೆಲವು ಕಿ.ಮೀ. ದೂರದಲ್ಲಿದೆ. ಅದನ್ನು ಭಾರತದ ಭಾಗವಾಗಿಸುವಲ್ಲಿ ಕಾಂಗ್ರೆಸ್ ವಿಫಲವಾಯಿತು ಎಂದು ಹೇಳಿದ್ದಾರೆ ಪ್ರಧಾನಿ. ಈ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರೂ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Politics; ಮತಕ್ಕಾಗಿ ಮುಸ್ಲಿಮರನ್ನು ಒಡೆವ ಕೆಲಸ ಕಾಂಗ್ರೆಸ್ ಮಾಡುತ್ತಿದೆ: ಬಿಜೆಪಿ
Maha Election; ಚು.ಆಯೋಗದಿಂದ ಉದ್ಧವ್ ಠಾಕ್ರೆ ಬ್ಯಾಗ್ ಪರಿಶೀಲನೆ, ವಿವಾದ
Manipura: ಇಬ್ಬರು ಶವ ಪತ್ತೆ, ಮಕ್ಕಳು ಸೇರಿ 6 ಮಂದೆ ಕಾಣೆ
ದಾವೂದ್, ನಟ ಸಲ್ಮಾನ್ ಸಂಪರ್ಕ ಇದ್ದಿದ್ದಕ್ಕೆ ಸಿದ್ಧಿಕಿ ಹತ್ಯೆ: ಶೂಟರ್
Ranchi: ವಕ್ಫ್ ಮಂಡಳಿಯು ಕರ್ನಾಟಕದಲ್ಲಿ ದೇಗುಲ, ರೈತರ ಭೂಮಿಯ ಕಸಿದಿದೆ: ಅಮಿತ್ ಶಾ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.