ದತ್ತು ಸ್ವೀಕರಿಸಿದ್ದ 1,100 ಮಕ್ಕಳು ವಾಪಸ್
Team Udayavani, Jan 6, 2020, 7:06 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Use
ಹೊಸದಿಲ್ಲಿ: ಕಳೆದ ಐದು ವರ್ಷದಲ್ಲಿ ದತ್ತು ಸ್ವೀಕರಿಸಲಾಗಿದ್ದ ಸಾವಿರಕ್ಕೂ ಅಧಿಕ ಮಕ್ಕಳು ಮರಳಿ ತಮ್ಮ ಗೂಡು ಸೇರಿಕೊಂಡಿದ್ದಾರೆ. 2014ರಿಂದ 2019ರ ಅವಧಿಯಲ್ಲಿ ಪೋಷಕರು ದತ್ತು ಸ್ವೀಕರಿಸಿದ್ದ 1,100 ಮಕ್ಕಳು ಹೊಂದಾಣಿಕೆ ಸಮಸ್ಯೆಯಿಂದಾಗಿ ಮಕ್ಕಳ ಪಾಲನಾ ಸಂಸ್ಥೆಗೆ ಹಿಂದಿರುಗಿದ್ದಾರೆ. 8 ವರ್ಷ ಮೇಲ್ಪಟ್ಟ ಮಕ್ಕಳು, ಪಾಲನಾ ಕೇಂದ್ರದಲ್ಲಿ ಮುಕ್ತವಾಗಿ ಬೆಳೆದಿರುತ್ತಾರೆ. ದತ್ತು ಸ್ವೀಕರಿಸಿದ ಬಳಿಕ ಹೊಂದಾಣಿಕೆ ಕೊರತೆಯಿಂದ ಮರಳಿ ಕೇಂದ್ರಕ್ಕೆ ವಾಪಸ್ ಆಗುತ್ತಿದ್ದಾರೆ.
ಆರ್‌ಟಿಐಯಡಿ ಮಾಹಿತಿ ಪಡೆದಿರುವ ನೋಡೆಲ್ ದತ್ತು ಸ್ವೀಕಾರ ಮಂಡಳಿಯು ಅಂಕಿ ಅಂಶಗಳೊಂ ದಿಗೆ ಇದನ್ನು ದೃಢಪಡಿಸಿದೆ. ಮಹಾರಾಷ್ಟ್ರ-273, ಮಧ್ಯ ಪ್ರದೇಶ-92, ಒಡಿಶಾ-88 ಹಾಗೂ ಕರ್ನಾಟಕದ 60 ಮಕ್ಕಳು ವಾಪಸ್ ತಮ್ಮ ಕೇಂದ್ರಕ್ಕೆ ವಾಪಸಾಗಿದ್ದಾರೆ. ದತ್ತು ಸ್ವೀಕರಿಸುವ ವೇಳೆ ಪೋಷಕರು ಹಾಗೂ ಮಕ್ಕಳ ಜತೆ ಸಮಾಲೋಚನೆ ನಡೆಸಬೇಕಿದೆ ಎಂದು ಮಂಡಳಿಯು ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Hebri: ಎನ್‌ಕೌಂಟರ್ ತನಿಖೆ ನಡೆಸುವ ಹೆಬ್ರಿ ಪೊಲೀಸ್ ಠಾಣೆ ಇಲ್ಲಗಳ ಆಗರ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.