Amarnath ಯಾತ್ರೆಯಲ್ಲಿ 40 ಕ್ಕೂ ಹೆಚ್ಚು ಆಹಾರ ಪದಾರ್ಥಗಳಿಗೆ ನಿಷೇಧ
Team Udayavani, Jun 15, 2023, 8:06 PM IST
ಹೊಸದಿಲ್ಲಿ: ಮುಂಬರುವ ಅಮರನಾಥ ಯಾತ್ರೆಯಲ್ಲಿ 40 ಕ್ಕೂ ಹೆಚ್ಚು ಆಹಾರ ಪದಾರ್ಥಗಳನ್ನು ನಿಷೇಧಿಸಲಾಗಿದ್ದು, ಯಾತ್ರಾರ್ಥಿಗಳು ದಿನಕ್ಕೆ ಕನಿಷ್ಠ 5 ಕಿಲೋಮೀಟರ್ ನಡೆದುಕೊಂಡು ದೈಹಿಕ ಕ್ಷಮತೆ ಸಾಧಿಸುವಂತೆ ಸೂಚಿಸಲಾಗಿದೆ ಎಂದು ಶ್ರೀ ಅಮರನಾಥ ದೇಗುಲ ಮಂಡಳಿ ಗುರುವಾರ ಹೊರಡಿಸಿರುವ ಆರೋಗ್ಯ ಸಲಹೆಯಲ್ಲಿ ತಿಳಿಸಿದೆ.ನಿಷೇಧಿತ ಆಹಾರ ಪದಾರ್ಥಗಳಲ್ಲಿ ಪಾನೀಯಗಳು, ಕರಿದ ಮತ್ತು ತ್ವರಿತ ಆಹಾರ ಪದಾರ್ಥಗಳು ಸೇರಿವೆ.
ದಕ್ಷಿಣ ಕಾಶ್ಮೀರದಲ್ಲಿರುವ ಹಿಮಾಲಯನ್ ದೇಗುಲಕ್ಕೆ ತೀರ್ಥಯಾತ್ರೆ ಕೈಗೊಳ್ಳುವ ಭಕ್ತರು ದೈಹಿಕ ಕ್ಷಮತೆಯನ್ನು ಸಾಧಿಸಲು ಆರೋಗ್ಯ ಸಲಹೆ ನೀಡಿದ್ದು ದಿನಕ್ಕೆ ಸುಮಾರು 4 ರಿಂದ 5 ಕಿಮೀ ಪೂರ್ವಭಾವಿಯಾಗಿ ಬೆಳಗ್ಗೆ ಮತ್ತು ಸಂಜೆಯ ನಡಿಗೆಯನ್ನು ಪ್ರಾರಂಭಿಸುವಂತೆ ಕೇಳಿ ಕೊಂಡಿದೆ.
ದಕ್ಷಿಣ ಕಾಶ್ಮೀರ ಹಿಮಾಲಯದ 3,880-ಮೀಟರ್ ಎತ್ತರದ ಪವಿತ್ರ ಗುಹೆಗೆ ಯಾತ್ರೆ ಜುಲೈ 1 ರಂದು ಎರಡು ಮಾರ್ಗಗಳ ಮೂಲಕ ಪ್ರಾರಂಭವಾಗಲಿದೆ. ಅನಂತನಾಗ್ ಜಿಲ್ಲೆಯ ಸಾಂಪ್ರದಾಯಿಕ 48-ಕಿಮೀ ನುನ್ವಾನ್-ಪಹಲ್ಗಾಮ್ ಮಾರ್ಗ ಮತ್ತು ಗಂದರ್ಬಾಲ್ ನ ಬಾಲ್ ತಾಲ್ 14 ಕಿಮೀ ಕಡಿದಾದ ಇನ್ನೊಂದು ಮಾರ್ಗವಾಗಿದೆ.
ನೀವು 14 ಕಿಲೋಮೀಟರ್ ಪಾದಯಾತ್ರೆಯ ಅಮರನಾಥ ಯಾತ್ರೆಯನ್ನು ಪ್ರಾರಂಭಿಸುವ ಮೊದಲು, ನಿಷೇಧಿತ ಆಹಾರ ಪದಾರ್ಥಗಳ ಪಟ್ಟಿ ಮತ್ತು ತೀರ್ಥಯಾತ್ರೆಯಲ್ಲಿ ನಿಮಗೆ ಸಾಗಿಸಲು ಅನುಮತಿಸಲಾದ ವಸ್ತುಗಳನ್ನು ಪರಿಶೀಲಿಸಿ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶ್ರೀ ಅಮರನಾಥ ದೇಗುಲ ಮಂಡಳಿ (ಎಸ್‌ಎಎಸ್‌ಬಿ) ಸಲಹೆಯ ಪ್ರಕಾರ, ನಿಷೇಧಿತ ಆಹಾರಗಳಲ್ಲಿ ಭಾರೀ ಪುಲಾವ್, ಫ್ರೈಡ್ ರೈಸ್, ಪೂರಿ, ಬಾಟುರಾ, ಪಿಜ್ಜಾ, ಬರ್ಗರ್, ಸ್ಟಫ್ಡ್ ಪರೋಟಾ, ದೋಸೆ ಮತ್ತು ಕರಿದ ರೊಟ್ಟಿ, ಬೆಣ್ಣೆಯೊಂದಿಗೆ ಬ್ರೆಡ್, ಕ್ರೀಮ್ ಆಧಾರಿತ ಆಹಾರಗಳು, ಉಪ್ಪಿನಕಾಯಿ, ಚಟ್ನಿ, ಕರಿದ ಪಾಪಡ್, ಚೌಮೇನ್ ಇತರ ಕರಿದ ಮತ್ತು ತ್ವರಿತ ಆಹಾರ ಪದಾರ್ಥಗಳನ್ನು ತರಬಾರದು ಎಂದು ಸೂಚಿಸಿದೆ.
ಭಕ್ತರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಮಂಡಳಿಯು ಧಾನ್ಯಗಳು, ಬೇಳೆಕಾಳುಗಳು, ಹಸಿರು ತರಕಾರಿಗಳು ಮತ್ತು ಸಲಾಡ್‌ಗಳಂತಹ ಆರೋಗ್ಯಕರ ಆಯ್ಕೆಗಳನ್ನು ಕೆಲವು ಅಕ್ಕಿ ಭಕ್ಷ್ಯಗಳೊಂದಿಗೆ ಶಿಫಾರಸು ಮಾಡಿದೆ. 40 ನಿಷೇಧಿತ ವಸ್ತುಗಳನ್ನು ಹೊರತುಪಡಿಸಿ ಎಲ್ಲವನ್ನೂ ಅನುಮತಿಸಲಾಗಿದೆ ಎಂದು ಮಂಡಳಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Old cars ಬಿಕರಿಗೆ ಶೇ.18 ಜಿಎಸ್‌ಟಿ! ; ವಿತ್ತ ಸಚಿವೆ ನೇತೃತ್ವದ ಜಿಎಸ್‌ಟಿ ಸಭೆ ತೀರ್ಮಾನ
Maharashtra; ಫಡ್ನವೀಸ್ ಬಳಿ ಗೃಹ, ಶಿಂಧೆಗೆ ನಗರಾಭಿವೃದ್ಧಿ ಸೇರಿ 3 ಪ್ರಮುಖ ಖಾತೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ
ಕೊಡುವುದರಿಂದ ಕೊರತೆಯಾಗದು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.