ಸಂಸತ್‌ನಲ್ಲಿ ಹೆಗಡೆ ಸಂವಿಧಾನ ಪ್ರತಿಧ್ವನಿ
Team Udayavani, Dec 28, 2017, 6:00 AM IST
ನವದೆಹಲಿ: ಕೇಂದ್ರ ಕೌಶಲಾಭಿವೃದಿಟಛಿ ಖಾತೆ ಸಹಾಯಕ ಸಚಿವ ಅನಂತ್‌ಕುಮಾರ್ ಹೆಗಡೆ ಅವರ ಸಂವಿಧಾನ ಕುರಿತ ವಿವಾದಾತ್ಮಕ ಹೇಳಿಕೆಯು ಬುಧವಾರ ಸಂಸತ್‌ನ ಎರಡೂ ಸದನಗಳಲ್ಲಿ ಪ್ರತಿಧ್ವನಿಸಿದ್ದಲ್ಲದೆ, ಭಾರೀ ಕೋಲಾಹಲಕ್ಕೂ ಕಾರಣವಾಯಿತು. ಪ್ರತಿಪಕ್ಷಗಳ ಗದ್ದಲ ಮಿತಿ ಮೀರಿದ ಹಿನ್ನೆಲೆಯಲ್ಲಿ ಈ ಕುರಿತು ಸ್ಪಷ್ಟನೆ ನೀಡಿದ ಕೇಂದ್ರ ಸರ್ಕಾರವು, “ಹೆಗಡೆ ಅವರ ಹೇಳಿಕೆಗೂ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ’ ಎಂದು ದೃಢಪಡಿಸಿತಾದರೂ, ಕಲಾಪವು
ಗದ್ದಲದಲ್ಲೇ ಕೊನೆಯಾಗಬೇಕಾಯಿತು.
ರಾಜ್ಯಸಭೆಯಲ್ಲಿ ಕಲಾಪ ಆರಂಭವಾದೊಡನೆ, “ಸಂವಿಧಾನವನ್ನು ಬದಲಿಸುತ್ತೇವೆ’ ಎಂಬ ಸಚಿವೆ ಹೆಗಡೆಯವರ ಹೇಳಿಕೆಯನ್ನು ಪ್ರಸ್ತಾಪಿಸಿದ ಕಾಂಗ್ರೆಸ್ ನಾಯಕ ಗುಲಾಂನಬಿ ಆಜಾದ್, “ಒಬ್ಬ ವ್ಯಕ್ತಿಗೆ ಸಂವಿಧಾನದ ಮೇಲೆ ನಂಬಿಕೆ ಇಲ್ಲ ಎಂದಾದರೆ, ಆತ ಸಂಸತ್ ಸದಸ್ಯನಾಗಲು ಅರ್ಹನೇ ಅಲ್ಲ.
ಸಚಿವ ಹೆಗಡೆ ಅವರನ್ನು ಕೂಡಲೇ ಸಚಿವ ಸ್ಥಾನದಿಂದ ಕೈಬಿಡಬೇಕು’ ಎಂದು ಆಗ್ರಹಿಸಿದರು. ಇದೇ ವೇಳೆ, ಪ್ರತಿಪಕ್ಷ
ಸದಸ್ಯರು ಸಭಾಧ್ಯಕ್ಷ ಎಂ.ವೆಂಕಯ್ಯ ನಾಯ್ಡು ಅವರ ಕುರ್ಚಿಯನ್ನು ಸುತ್ತುವರಿದರಲ್ಲದೆ, “ಬಾಬಾ ಸಾಹೇಬ್‌ಗ ಮಾಡಿರುವ ಈ ಅವಮಾನವನ್ನು ಸಹಿಸುವುದಿಲ್ಲ,’ ಎಂದು ಘೋಷಣೆ ಕೂಗಲಾರಂಭಿಸಿದರು. ಇಷ್ಟೆಲ್ಲ ಹೈಡ್ರಾಮಾ ನಡೆಯುವಾಗ ಸಚಿವ ಅನಂತ್ ಹೆಗಡೆ ಅವರೂ ಸದನದಲ್ಲಿದ್ದರು. ಎದ್ದು ನಿಂತೊಡನೆ, ಪ್ರತಿಪಕ್ಷ ಸದಸ್ಯರು “ಶೇಮ್, ಶೇಮ್’ ಎಂದು ಕೂಗಿದರು.
ಗೋಯಲ್ ಸ್ಪಷ್ಟನೆ: ಕೊನೆಗೆ ಎದ್ದು ನಿಂತ ಕೇಂದ್ರ ಸಚಿವ ವಿಜಯ್ ಗೋಯಲ್, “ಹೆಗಡೆಯವರ ಹೇಳಿಕೆ ಅವರ ವೈಯಕ್ತಿಕವೇ ಹೊರತು, ಸರ್ಕಾರದ್ದಲ್ಲ’ ಎಂದು ಸ್ಪಷ್ಟಪಡಿಸಿದರು. ಆದರೂ ಗದ್ದಲ ಮುಂದುವರಿದ ಕಾರಣ ಕಲಾಪವನ್ನು
ಮುಂದೂಡಲಾಯಿತು.
ಖರ್ಗೆ ಗರಂ
ಇನ್ನು ಲೋಕಸಭೆಯಲ್ಲೂ ಪರಿಸ್ಥಿತಿ ಭಿನ್ನವಾಗಿರಲಿಲ್ಲ. ಇಲ್ಲಿ ಹೆಗಡೆ ವಿಚಾರವನ್ನೆತ್ತಿದ್ದ ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, “ಬಿಜೆಪಿ ಸಂಸದ ಹೆಗಡೆ ಅವರು ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್‌ರನ್ನು ಹಾಗೂ ಜಾತ್ಯತೀತವಾದಿಗಳನ್ನು ಅವಮಾನಿಸಿ ದ್ದಾರೆ. ಇದನ್ನು ಒಪ್ಪಿಕೊಳ್ಳಲಾಗದು,’ ಎಂದರು. ಸದನದಲ್ಲಿದ್ದ ಇತರೆ ಸದಸ್ಯರು, ಅನಂತ್ ಹೆಗಡೆ ಅವರನ್ನು ವಜಾ ಮಾಡಿ ಎಂದು ಬರೆದಿದ್ದ ಫಲಕಗಳನ್ನು ಪ್ರದರ್ಶಿಸಲಾರಂಭಿಸಿದರು.
ಕಾಂಗ್ರೆಸ್ ವಿರುದ್ಧ ಅನಂತ್ ಕಿಡಿ
ಕಾಂಗ್ರೆಸ್ ನಾಯಕರು ಹೆಗಡೆ ಅವರ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿ ಕೊಂಡಿದ್ದಾರೆ. ಬಿ.ಆರ್.ಅಂಬೇಡ್ಕರ್ ಅವರನ್ನು
ನಾವು ಗೌರವಿಸುತ್ತೇವೆ. ಪ್ರಧಾನಿ ಮೋದಿ ಅವರೇ ಸಂವಿಧಾನವನ್ನು ನಮ್ಮ ರಾಷ್ಟ್ರೀಯ ಗ್ರಂಥ ಎಂದು ಬಣ್ಣಿಸಿದ್ದಾರೆ. ಜಾತ್ಯತೀತತೆ ವಿಚಾರದಲ್ಲೂ ಅಷ್ಟೆ. ಕಾಂಗ್ರೆಸ್ ನಮಗೆ ಪಾಠ ಮಾಡ ಬೇಕಾಗಿಲ್ಲ. ಅಂಬೇಡ್ಕರ್‌ರನ್ನು ರಾಜ್ಯ ಸಭೆಗೆ ಕರೆತಂದಿದ್ದು ಜನ ಸಂಘವೇ ಹೊರತು ಕಾಂಗ್ರೆಸ್ ಅಲ್ಲ, ಎಂದು ಅನಂತ್‌ಕುಮಾರ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
R-Day parade; ಗಣರಾಜ್ಯೋತ್ಸವ ಪರೇಡ್‌ನಲ್ಲಿ 5,000 ಕ್ಕೂ ಹೆಚ್ಚು ಕಲಾವಿದರ ತಂಡಗಳು
Sharon Raj ಹ*ತ್ಯೆ ಕೇಸ್: ಪ್ರೇಯಸಿಗೆ ಮರ*ಣ ದಂಡನೆ ವಿಧಿಸಿದ ನ್ಯಾಯಾಲಯ
Sopore Encounter: ಉಗ್ರರೊಂದಿಗಿನ ಗುಂಡಿನ ಕಾಳಗದಲ್ಲಿ ಯೋಧ ಹುತಾತ್ಮ
RG ಕರ್ ಆಸ್ಪತ್ರೆ ವೈದ್ಯೆ ಪ್ರಕರಣ-ಅಪರಾಧಿ ಸಂಜಯ್ ರಾಯ್ ಗೆ ಜೀವಾವಧಿ ಶಿಕ್ಷೆ
CowUrine: ಗೋಮೂತ್ರವು ಬ್ಯಾಕ್ಟೀರಿಯಾ ವಿರೋಧಿ, ಶಿಲೀಂಧ್ರ ವಿರೋಧಿ: ಐಐಟಿ ಮದ್ರಾಸ್ ನಿರ್ದೇಶಕ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.