ಇಟಲಿ ನೆರವು ನೀಡಿದ ಆಮ್ಲಜನಕ ಘಟಕ ಗ್ರೇಟರ್ ನೋಯ್ಡಾದ ಐಟಿಬಿಪಿ ಆಸ್ಪತ್ರೆಯಲ್ಲಿ ಆರಂಭ
Team Udayavani, May 6, 2021, 3:16 PM IST
ನವ ದೆಹಲಿ : ಕೋವಿಡ್ ಸೋಂಕಿನ ರೂಪಾಂತರಿ ಅಲೆಯಲ್ಲಿ ಸಂಪೂರ್ಣ ಅಡಿಮೇಲಾಗಿರುವ ಭಾರತಕ್ಕೆ ವಿದೇಶಗಳಿಂದ ಭರಪೂರ ನೆರವು ದೊರಕುತ್ತಿದೆ.
ದೇಶದಲ್ಲಿರು ಮೆಡಿಕಲ್ ಆಕ್ಸಿಜನ್ ಕೊರತೆಯನ್ನು ನನೀಗಿಸುವ ನಿಟ್ಟಿನಲ್ಲಿ ಆಮ್ಲಜನಕ ಉತ್ಪಾದಸನಾ ಘಟಕವನ್ನು ಭಾರತಕ್ಕೆ ಕಳುಹಿಸಿ ಕೊಟ್ಟಿದೆ.
ಒಂದೇ ಸಮಯದಲ್ಲಿ 100 ರೋಗಿಗಳ ಚಿಕಿತ್ಸೆಗೆ ಬಳಸಬಹುದಾದ ವೈದ್ಯಕೀಯ ಆಮ್ಲಜನಕ ಉತ್ಪಾದನಾ ಘಟಕವನ್ನು ಗ್ರೇಟರ್ ನೋಯ್ಡಾದಲ್ಲಿರುವ ಸಿಎಪಿಎಫ್ ಆಸ್ಪತ್ರೆಯಲ್ಲಿ ಗುರುವಾರ(ಮೇ. 06) ಸ್ಥಾಪಿಸಲಾಯಿತು.
ಓದಿ : ಜೊತೆ ಜೊತೆಯಲಿ ನಟಿ ಮೇಘಾ ಶೆಟ್ಟಿಯಿಂದ ಕೊರೊನಾ ಜಾಗೃತಿ
ಇನ್ನು, ಘಟಕಕ್ಕೆ ಸಂಬಂಧಿಸಿದ ಯಂತ್ರೋಪಕರಣಗಳನ್ನು ಕೆಲವು ದಿನಗಳ ಹಿಂದೆಯೇ ವಿಶೇಷ ವಿಮಾನದಲ್ಲಿ ದೇಶಕ್ಕೆ ಬಂದಿದ್ದು, ಮತ್ತು ಕೇಂದ್ರವು ಇದನ್ನು ಸಿಎಪಿಎಫ್ ರೆಫರಲ್ ಆಸ್ಪತ್ರೆಯಲ್ಲಿ ನಿಯೋಜಿಸಲಾಗಿತ್ತು, ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲಿಸ್ (ಐಟಿಬಿಪಿ) ನಿರ್ವಹಿಸಲಿದೆ.
“ಭಾರತದ ಇಟಾಲಿಯನ್ ರಾಯಭಾರಿ ವಿನ್ಸೆಂಜೊ ಡಿ ಲುಕಾ ಅವರು ಹಿರಿಯ ಐಟಿಬಿಪಿ ಅಧಿಕಾರಿಗಳು ಭಾಗವಹಿಸಿದ್ದ ಸಮಾರಂಭದಲ್ಲಿ ಆಕ್ಸಿಜನ್ ಘಟಕವನ್ನು ಭಾರತಕ್ಕೆ ಹಸ್ತಾಂತರಿಸಲಾಯಿತು. 48 ಗಂಟೆಗಳ ಒಳಗೆ ಆಸ್ಪತ್ರೆಯ ಆವರಣದಲ್ಲಿ ಆಕ್ಸಿಜನ್ ಘಟಕವನ್ನು ಸ್ಥಾಪಿಸಲಾಗಿದೆ ಮತ್ತು ಕಾರ್ಯಗತಗೊಳಿಸಲಾಗಿದೆ” ಎಂದು ಗಡಿ ಕಾವಲು ಪಡೆ ವಕ್ತಾರರು ತಿಳಿಸಿದ್ದಾರೆ.
ಈ ಆಕ್ಸಿಜನ್ ಘಟಕವು ಈ ಆಸ್ಪತ್ರೆಯಲ್ಲಿ “ಶಾಶ್ವತವಾಗಿ” ಇರುತ್ತದೆ ಮತ್ತು ಇದು ಉಭಯ ದೇಶಗಳ ನಡುವಿನ ಸ್ನೇಹ ಮತ್ತು ಒಗ್ಗಟ್ಟಿನ ಸಂಕೇತವಾಗಿರಲಿಕ್ಕಿದೆ. ಈ ಸ‍್ನೇಹ ಸೌಹಾರ್ಧತೆಯನ್ನು ಎಂದಿಗೂ ಮರೆಯುವುದಿಲ್ಲ ಎಂದು ಅವರು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಹಾಜರಿದ್ದ ಹಿರಿಯ ಐಟಿಬಿಪಿ ಅಧಿಕಾರಿಯೋರ್ವರು ಮಾತನಾಡಿ, ಇಟಲಿ ನೀಡಿದ ನೆರವಿಗೆ ಸರ್ಕಾರ ಮತ್ತು ಭಾರತದ ಜನರು ಎಂದಿಗೂ ಕೃತಜ್ಞರಾಗಿರುತ್ತಾರೆ ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.