Oyo Rooms: ಮದುವೆಯಾಗದ ಜೋಡಿಗೆ ಇನ್ಮುಂದೆ ʼಓಯೋʼ ರೂಮ್‌ ಸಿಗೋದು ಕಷ್ಟ – ವರದಿ


Team Udayavani, Jan 5, 2025, 12:36 PM IST

Oyo Rooms: ಮದುವೆಯಾಗದ ಜೋಡಿಗೆ ಇನ್ಮುಂದೆ ʼಓಯೋʼ ರೂಮ್‌ ಸಿಗೋದು ಕಷ್ಟ – ವರದಿ

ನವದೆಹಲಿ: ಭಾರತದ ಜನಪ್ರಿಯ ಪ್ರಯಾಣ ಬುಕಿಂಗ್ ಕಂಪನಿಗಳಲ್ಲಿ ಒಂದಾಗಿರುವ ʼಓಯೋʼ (OYO) ತನ್ನ ನೀತಿ ಹಾಗೂ ನಿಯಮಗಳನ್ನು ಪರಿಷ್ಕರಿಸಿದೆ ಎಂದು ವರದಿಯಾಗಿದೆ.

ʼಓಯೋʼ ತನ್ನ ಪಾಲುದಾರ ಹೋಟೆಲ್‌ಗಳಿಗಾಗಿ ಹೊಸ ಚೆಕ್-ಇನ್ ನೀತಿಯನ್ನು ʼಓಯೋʼ ಮಾಡಿರುವುದು ವರದಿಯಾಗಿದೆ.

ಭಾರತದ ಪ್ರಮುಖ ಹೊಟೇಲ್‌ ಬುಕಿಂಗ್‌ ಕಂಪೆನಿಯಾಗಿರುವ ʼಓಯೋʼ ಆರಂಭವಾದದಿಂದ ದೊಡ್ಡದಾಗಿಯೇ ಸದ್ದು ಮಾಡಿದ ಸಂಸ್ಥೆ. ʼಓಯೋʼ ಮೂಲಕ ಹೊಟೇಲ್‌ ಬುಕಿಂಗ್‌ ಮಾಡಿ ಬರುವ ಪ್ರಯಾಣಿಕರಿಗೆ ಅಥವಾ ಗ್ರಾಹಕರಿಗೆ ʼಓಯೋʼ ಉತ್ತಮ ರೀತಿಯ ಸೇವೆಯನ್ನು ನೀಡುತ್ತಲೇ ಬಂದಿದೆ.

ಇದೀಗ ತನ್ನ ನೀತಿಯಲ್ಲಿ ʼಓಯೋʼ ಪ್ರಮುಖ ಬದಲಾವಣೆಯನ್ನು ಮಾಡಿಕೊಂಡಿದೆ ಎಂದು ವರದಿಯಾಗಿದೆ.

ಚೆಕ್-ಇನ್ ಮಾಡಲು ಬಯಸುವ ಗ್ರಾಹಕರು ದಂಪತಿಗಳಾಗಿದ್ದರೆ ಅವರು ತಮ್ಮ ಮದುವೆಯ ಸಂಬಂಧಿತ ಸೂಕ್ತ ದಾಖಲೆಯನ್ನು ಹೊಟೇಲ್‌ಗೆ ಒದಗಿಸಬೇಕಾಗುತ್ತದೆ ಎಂದು ವರದಿ ತಿಳಿಸಿದೆ.

ಪರಿಷ್ಕೃತ ನೀತಿಯ ಅಡಿಯಲ್ಲಿ, ಆನ್‌ಲೈನ್‌ನಲ್ಲಿ ಮಾಡಿದ ಬುಕಿಂಗ್‌ಗಳು ಸೇರಿದಂತೆ ಚೆಕ್-ಇನ್ ಸಮಯದಲ್ಲಿ ಸಂಬಂಧದ ಮಾನ್ಯ ಪುರಾವೆಗಳನ್ನು ಪ್ರಸ್ತುತಪಡಿಸಲು ಎಲ್ಲಾ ದಂಪತಿಗಳನ್ನು ಕೇಳಲಾಗುತ್ತದೆ ಎಂದು ವರದಿ ತಿಳಿಸಿದೆ.

ಈ ಹಿಂದೆ ʼಓಯೋʼಗೆ ಕೆಲ ಸಂಸ್ಥೆಗಳು ಹೊಟೇಲ್‌ ರೂಮ್‌ಗಳಲ್ಲಿ ಮದುವೆಯಾಗದ ಜೋಡಿಗಳನ್ನು ಚೆಕ್‌ ಇನ್‌ ಮಾಡಲು ಅವಕಾಶ ನೀಡಬಾರದೆನ್ನುವ ಅರ್ಜಿಗಳು ಬಂದಿದ್ದವು. ಮೀರತ್‌ನಲ್ಲಿ ಮದುವೆಯಾಗದ ಕೆಲ ಜೋಡಿಗಳು ಹೊಟೇಲ್‌ ರೂಮ್‌ನಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇವರಿಗೆ ʼಓಯೋʼ ಚೆಕ್‌ ಇನ್‌ ಮಾಡಲು ಹೊಟೇಲ್‌ನಲ್ಲಿ ನೀಡಬಾರದೆಂದು ಕೆಲ ನಾಗರಿಕ ಸಮಾಜದ ಗುಂಪುಗಳು ಕಂಪೆನಿಗೆ ಅರ್ಜಿ ಸಲ್ಲಿಸಿತ್ತು.

ಈ ಅರ್ಜಿ ಬಂದ ಬಳಿಕ ಎಚ್ಚೆತ್ತುಕೊಂಡ ʼಓಯೋʼ ತನ್ನ ನೀತಿಯಲ್ಲಿ ಪರಿಷ್ಕರಣೆ ಮಾಡಲು ಮುಂದಾಗಿದೆ.

ಈ ನಿಯಮಗಳು ಆರಂಭಿಕವಾಗಿ ಮೀರತ್‌ನಲ್ಲಿ ಜಾರಿಯಾಗಲಿದೆ ಎಂದು ಮೀರತ್‌ನಲ್ಲಿರುವ ತನ್ನ ಪಾಲುದಾರ ಹೋಟೆಲ್‌ಗಳಿಗೆ ನಿರ್ದೇಶನವನ್ನು ನೀಡಿದೆ. ಮುಂದಿನ ದಿನಗಳಲ್ಲಿ ಕಂಪನಿಯು ಇದನ್ನು ಹೆಚ್ಚಿನ ನಗರಗಳಿಗೆ ವಿಸ್ತರಿಸಬಹುದು ಎಂದು ವರದಿ ತಿಳಿಸಿದೆ.

“ಓಯೋ ಸುರಕ್ಷಿತ ಮತ್ತು ಜವಾಬ್ದಾರಿಯುತ ಆತಿಥ್ಯ ಪದ್ಧತಿಗಳನ್ನು ಎತ್ತಿಹಿಡಿಯಲು ಬದ್ಧವಾಗಿದೆ. ನಾವು ವೈಯಕ್ತಿಕ ಸ್ವಾತಂತ್ರ್ಯವನ್ನು ಗೌರವಿಸುತ್ತೇವೆ. ನಾವು ಕಾರ್ಯನಿರ್ವಹಿಸುವ ಮೈಕ್ರೋ ಮಾರುಕಟ್ಟೆಗಳಲ್ಲಿ ಕಾನೂನು ಜಾರಿ ಮಾಡುವುದರ ಜತೆ ನಾಗರಿಕ ಸಮಾಜದ ಗುಂಪುಗಳನ್ನು ಆಲಿಸುವುದು ಕೂಡ ನಮ್ಮ ಜವಾಬ್ದಾರಿಯಾಗಿದೆ. ನಾವು ಈ ನೀತಿ ಮತ್ತು ಅದರ ಪರಿಣಾಮವನ್ನು ನಿಯತಕಾಲಿಕವಾಗಿ ಪರಿಶೀಲಿಸುವುದನ್ನು ಮುಂದುವರಿಸುತ್ತೇವೆ.” ಎಂದು ಓಯೋ ಉತ್ತರ ಭಾರತದ ಪ್ರಾದೇಶಿಕ ಮುಖ್ಯಸ್ಥ ಪವಾಸ್ ಶರ್ಮಾ ಹೇಳಿದ್ದಾರೆ.

ಕಂಪನಿಯು ದೀರ್ಘಾವಧಿಯ ವಾಸ್ತವ್ಯವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ ಎಂದು ನೀತಿ ಪರಿಷ್ಕರಣೆಯಲ್ಲಿ ʼಓಯೋʼ ಹೇಳಿದೆ.

ಟಾಪ್ ನ್ಯೂಸ್

Bengaluru-Techi

Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!

HDK–Siddu

Percentage War: ಮತ್ತೆ 60 ಪರ್ಸೆಂಟ್‌ ಕಮಿಷನ್‌ ಯುದ್ಧ ; ಆರೋಪ – ಪ್ರತ್ಯಾರೋಪ

DKS–Delhi

Dinner Meet: ಸಚಿವರ ಮನೆ ಔತಣಕೂಟಕ್ಕೆ ಅಪಾರ್ಥ ಕಲ್ಪಿಸುವುದು ಬೇಡ: ಡಿ.ಕೆ.ಶಿವಕುಮಾರ್‌

siddaramaih-Meeting

State Budget Meeting: ಇಂದಿನಿಂದ ಸಿಎಂ ಬಜೆಟ್‌ ಪೂರ್ವಭಾವಿ ಸರಣಿ ಸಭೆ

Naxaliam-End

Naxal Surrender: ಮುಂಡಗಾರು ಲತಾ ಸೇರಿ 6 ನಕ್ಸಲರು ನಾಳೆ ಶರಣಾಗತಿ?

Mangaluru: ರಾಜ್ಯದಲ್ಲೇ ಮೊದಲ ಹವಾಮಾನ ಡಾಪ್ಲರ್‌ ರಾಡಾರ್‌

Mangaluru: ರಾಜ್ಯದಲ್ಲೇ ಮೊದಲ ಹವಾಮಾನ ಡಾಪ್ಲರ್‌ ರಾಡಾರ್‌

Horoscope: ಈ ರಾಶಯವರಿಗೆ ಸಂಸಾರದಲ್ಲಿ ಮಾನಸಿಕ ನೆಮ್ಮದಿ ಇರಲಿದೆ

Horoscope: ಈ ರಾಶಿಯವರಿಗೆ ಸಂಸಾರದಲ್ಲಿ ಮಾನಸಿಕ ನೆಮ್ಮದಿ ಇರಲಿದೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qeqeqe

HMPV ಸೋಂಕಿಗೆ ಆತಂಕ ಬೇಡ: ಐಸಿಎಂಆರ್‌

1-kumb

Mahakumbh 2025; ವಕ್ಫ್ ಮಂಡಳಿಗೆ ಸೇರಿದ ಜಾಗದಲ್ಲಿ ಕುಂಭಮೇಳ: ಮೌಲ್ವಿ ವಿವಾದ

mob

ಆಸೀಸ್‌ ರೀತಿ ಸಾಮಾಜಿಕ ಜಾಲತಾಣ ಬಳಕೆ ಬ್ಯಾನ್‌ ಮಾಡಿಲ್ಲ: ಐಟಿ ಕಾರ್ಯದರ್ಶಿ

1-aala

ISRO ಯಶಸ್ಸು ;ಬಾಹ್ಯಾಕಾಶದಲ್ಲಿ ಮೊದಲ ಎಲೆ ಬಿಟ್ಟ ಅಲಸಂದೆ ಕಾಳು

1-shiv

ಪಟ್ನಾದಲ್ಲಿ ಸುಮಾರು 500 ವರ್ಷಗಳ ಹಿಂದಿನ ದೇಗುಲ ಪತ್ತೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Bengaluru-Techi

Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!

HDK–Siddu

Percentage War: ಮತ್ತೆ 60 ಪರ್ಸೆಂಟ್‌ ಕಮಿಷನ್‌ ಯುದ್ಧ ; ಆರೋಪ – ಪ್ರತ್ಯಾರೋಪ

DKS–Delhi

Dinner Meet: ಸಚಿವರ ಮನೆ ಔತಣಕೂಟಕ್ಕೆ ಅಪಾರ್ಥ ಕಲ್ಪಿಸುವುದು ಬೇಡ: ಡಿ.ಕೆ.ಶಿವಕುಮಾರ್‌

siddaramaih-Meeting

State Budget Meeting: ಇಂದಿನಿಂದ ಸಿಎಂ ಬಜೆಟ್‌ ಪೂರ್ವಭಾವಿ ಸರಣಿ ಸಭೆ

Naxaliam-End

Naxal Surrender: ಮುಂಡಗಾರು ಲತಾ ಸೇರಿ 6 ನಕ್ಸಲರು ನಾಳೆ ಶರಣಾಗತಿ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.