![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Sep 24, 2019, 9:56 PM IST
ನವದೆಹಲಿ: ತನ್ನ ಜನ್ಮದಿನಕ್ಕೆ ತಮಿಳಿನಲ್ಲಿ ಶುಭಾಶಯ ಸಂದೇಶ ಕಳುಹಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರ ನಡೆಗೆ ಸದ್ಯ ತಿಹಾರ್ ಜೈಲಿನಲ್ಲಿ ಬಂಧಿಯಾಗಿರುವ ಮಾಜೀ ಕೇಂದ್ರ ಸಚಿವ ಮತ್ತು ಕಾಂಗ್ರೆಸ್ ಮುಖಂಡ ಪಿ. ಚಿದಂಬರಂ ಅವರು ಇಂದು ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಅಚ್ಚರಿ ಮತ್ತು ಸಂತೋಷವನ್ನು ವ್ಯಕ್ತಪಡಿಸಿದ್ದಾರೆ.
ತಮಿಳುನಾಡಿನ ಶಿವಗಂಗಾದಲ್ಲಿರುವ ಚಿದಂಬಂರಂ ಅವರ ಮನೆ ವಿಳಾಸಕ್ಕೆ ಬಂದಿರುವ ಈ ಪತ್ರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪಿ. ಚಿದಂಬಂರಂ ಅವರಿಗೆ ಜನ್ಮದಿನದ ಶುಭಾಶಯಗಳನ್ನು ತಿಳಿಸಿದ್ದಾರೆ. ‘ನಿಮ್ಮ ಜನ್ಮದಿನದಂದು ಹೃದಯಾಂತರಾಳದ ಶುಭಾಶಯಗಳನ್ನು ನಾನು ನಿಮಗೆ ತಿಳಿಸುತ್ತಿದ್ದೇನೆ. ಆ ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ಸಂತೋಷವನ್ನು ಒದಗಿಸಲಿ ಹಾಗೂ ನೀವು ಸದಾ ಜನರ ಸೇವೆಯನ್ನು ಮಾಡಿಕೊಂಡಿರುವಂತೆ ದೇವರು ನಿಮ್ಮನ್ನು ಹರಸಲಿ’ ಎಂದು ಮೋದಿ ಅವರು ತಮಿಳು ಭಾಷೆಯಲ್ಲಿ ಕಳುಹಿಸಿರುವ ಸಂದೇಶದಲ್ಲಿ ತಮ್ಮ ಶುಭಕಾಮನೆಗಳನ್ನು ತಿಳಿಸಿದ್ದಾರೆ. ಚಿದಂಬಂರಂ ಅವರು ಸೆಪ್ಟಂಬರ್ 16ರಂದು 74ನೇ ವರ್ಷಕ್ಕೆ ಕಾಲಿರಿಸಿದ್ದರು.
@PMOIndia @narendramodi என் பிறந்தநாளுக்குப் பிரதமர் மோடி அனுப்பிய வாழ்த்துச் செய்தியை பெற்று வியப்பு கலந்த மகிழ்ச்சியடைந்தேன். பிரதமருக்கு நன்றி. pic.twitter.com/HGbWnkCrim
— P. Chidambaram (@PChidambaram_IN) September 24, 2019
ಪ್ರಧಾನಿ ಮೋದಿ ಅವರ ಈ ಅಭಿನಂದನೆಗೆ ಟ್ವೀಟ್ ಮಾಡಿ ಪ್ರತಿಕ್ರಿಯಿಸಿರುವ ಚಿದಂಬಂರಂ ಅವರು , ‘ಮೋದಿ ಅವರ ಆಶಯದಂತೆ ನಾನು ಜನರ ಸೇವೆ ಮಾಡಲು ಉತ್ಸುಕನಾಗಿದ್ದೇನೆ. ಆದರೆ ದುರದೃಷ್ಟವಶಾತ್, ಮೋದಿ ಸರಕಾರದ ತನಿಖಾ ಸಂಸ್ಥೆಗಳೇ ತನ್ನನ್ನು ಜನ ಸೇವೆ ಮಾಡುವಲ್ಲಿ ಅಡ್ಡಿಪಡಿಸುತ್ತಿವೆ’ ಎಂದು ಬರದುಕೊಂಡಿದ್ದಾರೆ.
‘ಈ ಹಿಂಸೆ ಮುಕ್ತಾಯಗೊಂಡ ಬಳಿಕ, ಮೋದಿ ಅವರ ಆಶಯದಂತೆ ನಾನು ಜನರ ಸೇವೆ ಮಾಡಲು ಉತ್ಸುಕನಾಗಿದ್ದೇನೆ’ ಎಂದು ಚಿದಂಬಂರಂ ಅವರು ತಮಿಳಿನಲ್ಲಿ ಬರೆದುಕೊಂಡಿದ್ದಾರೆ.
ಮಾಜೀ ಕೇಂದ್ರ ಹಣಕಾಸು ಸಚಿವ ಪಿ. ಚಿದಂಬಂರಂ ಅವರು ಐ.ಎನ್.ಎಕ್ಸ್. ಮೀಡಿಯಾ ಹಗರಣ ಪ್ರಕರಣದಲ್ಲಿ ಆರೋಪಿಯಾಗಿದ್ದು ಸದ್ಯ ತಿಹಾರ್ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.
தற்பொழுது நடைபெறும் துன்புறுத்தல் முடிந்த பிறகு, பிரதமர் மோடியின் விருப்பப்படி மீண்டும் மக்கள் பணியாற்ற ஆவலாக உள்ளேன்.
— P. Chidambaram (@PChidambaram_IN) September 24, 2019
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
You seem to have an Ad Blocker on.
To continue reading, please turn it off or whitelist Udayavani.