ನಿರುದ್ಯೋಗಕ್ಕಿಂತ ಪಕೋಡಾ ಮಾರಾಟ ಲೇಸು
Team Udayavani, Feb 6, 2018, 9:00 AM IST
ಮೋದಿ ನೇತೃತ್ವದ ಸರಕಾರ ಯೋಜನೆಗಳ ಹೆಸರುಗಳನ್ನು ಬದಲು ಮಾಡಿ ಜಾರಿ ಮಾಡಲು ಹೆಸರುವಾಸಿ. ನೀವು ಪ್ಯಾಕೇಜ್ ಮತ್ತು ರಿಪ್ಯಾಕೇಜ್ ಮಾಡುವಲ್ಲಿ ಸಿದ್ಧಹಸ್ತರು. ನಾವು ಹಿಂದೆ ಜಾರಿ ಮಾಡಿದ್ದನ್ನೇ ಹೊಸ ಹೆಸರಲ್ಲಿ ಅನುಷ್ಠಾನ ಮಾಡಿದ್ದೀರಿ. ನಿಮ್ಮದು ಗೇಮ್ ಚೇಂಜರ್ ಅಲ್ಲ, ನೇಮ್ ಚೇಂಜರ್ ಸರಕಾರ.
ನಮ್ಮ ಸರಕಾರ ಅಧಿಕಾರದಲ್ಲಿದ್ದಾಗ 24.03 ಕೋಟಿ ಬ್ಯಾಂಕ್ ಖಾತೆಗಳನ್ನು ತೆರೆಯಲಾಯಿತು. ಹಾಲಿ ಸರಕಾರದ ಅವಧಿಯಲ್ಲಿ ಕೇವಲ 7 ಕೋಟಿ ಖಾತೆ ತೆರೆಯಲಾಗಿದೆ.
ಬೇಟಿ ಬಚಾವೋ; ಬೇಟಿ ಪಢಾವೋ ಯೋಜನೆ ಈಗ 600 ಜಿಲ್ಲೆಗಳಿಗೆ ವಿಸ್ತರಿಸಲಾಗಿದೆ. ಆದರೆ, ಅನುದಾನ ಬಹಳಷ್ಟು ಕಡಿಮೆ ನೀಡಲಾಗಿದೆ. ಇನ್ನೊಂದು ಕಡೆ ಮಹಿಳೆಯರ ವಿರುದ್ಧ ಅಪರಾಧಗಳು ಹೆಚ್ಚುತ್ತಿವೆ.
ಯುಪಿಎ ಅವಧಿಗಿಂತ ಪೆಟ್ರೋಲ್, ಡೀಸೆಲ್ ಬೆಲೆ ಶೇ.50ರಷ್ಟು ತಗ್ಗಿಸುವುದಾಗಿ ಪ್ರಧಾನಿ ವಾಗ್ಧಾನ ಮಾಡಿದ್ದರು. ಆದರೆ ಬೆಲೆ ನಮ್ಮ ಅವಧಿಗಿಂತಲೂ ಈಗ ಹೆಚ್ಚಾಗಿದೆ. ಅಡುಗೆ ಅನಿಲ ಸಿಲಿಂಡರ್ ಬೆಲೆ 300 ರೂ. ಇದ್ದದ್ದು 800 ರೂ.ಗೆ ಏರಿಕೆಯಾಗಿದೆ.
ಮೋದಿ ಸರಕಾರ 2022ರ ಒಳಗಾಗಿ ರೈತರ ಆದಾಯ ವೃದ್ಧಿ ಮಾಡುವ ಬಗ್ಗೆ ವಾಗ್ಧಾನ ಮಾಡುತ್ತಿದೆ. ಆದರೆ ಅವರು ಹಿಂದಿನ ಭರವಸೆಗಳನ್ನೇ ಈಡೇರಿಸಿಲ್ಲ. ದೇಶದ ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಅವರು ಘೋಷಣೆ ಮಾಡಿರುವ ಯೋಜನೆಗಳ ಜಾರಿಗೆ 6.5 ಲಕ್ಷ ಕೋಟಿ ರೂ. ಬೇಕು.
ಕೇಂದ್ರ ಸರಕಾರದ ಜಮ್ಮು ಮತ್ತು ಕಾಶ್ಮೀರ ನೀತಿ ಸಮರ್ಪಕವಾಗಿಲ್ಲ. 70 ವರ್ಷಗಳಲ್ಲಿಯೇ ಅತ್ಯಂತ ದುರ್ಬಲ ಸರಕಾರ ಇದಾಗಿದೆ.
ತ್ರಿವಳಿ ತಲಾಖ್ ವಿರುದ್ಧದ ಕಾನೂನಿಗೆ ನಮ್ಮ ಪಕ್ಷ ಬೆಂಬಲ ನೀಡುತ್ತಿದೆ. ಏಕಾಏಕಿ ತಲಾಖ್ ಹೇಳುವುದನ್ನು ವಿರೋಧಿಸುತ್ತೇವೆ. ಪತಿಯನ್ನು ಅಪರಾಧಿ ಎಂದು ಪರಿಗಣಿಸುವ ವಿಚಾರಕ್ಕೆ ನಮ್ಮ ಬೆಂಬಲ ಇಲ್ಲ.
ಸ್ಟಾರ್ಟಪ್ ಇಂಡಿಯಾ ಆರಂಭದಲ್ಲಿ ಉತ್ತಮವಾಗಿತ್ತಾದರೂ ನಂತರದ ದಿನಗಳಲ್ಲಿ ಸೊರಗಿತು. ಸ್ಕಿಲ್ ಇಂಡಿಯಾ ಕಿಲ್ ಇಂಡಿಯಾ ಆಯಿತು. 2017ರಲ್ಲಿ ಸರಕಾರ ಒಂದೇ ಒಂದು ಉದ್ಯೋಗ ಸೃಷ್ಟಿಸಲಿಲ್ಲ. 2015ರಲ್ಲಿ 10 ಕೋಟಿ ಉದ್ಯೋಗ ಸೃಷ್ಟಿ ಸುವುದಾಗಿ ಹೇಳಿತ್ತು. ಅದೂ ಪೂರ್ತಿಯಾಗಿಲ್ಲ.
ಶಾ ಸುದೀರ್ಘ ಭಾಷಣದ ಹಿಂದಿನ ಗುಟ್ಟು
ಕಳೆದ ಡಿ.15ರಂದು ರಾಜ್ಯಸಭೆ ಸದಸ್ಯರಾಗಿ ಪ್ರಮಾಣ ಸ್ವೀಕರಿಸಿದ ಅಮಿತ್ ಮೊದಲ ಬಾರಿಗೆ 90 ನಿಮಿಷಗಳ ಕಾಲ ಮಾತಾಡಿದ್ದಾರೆ. ಸಂಸದೀಯ ನಿಮಯಗಳ ಪ್ರಕಾರ ಮೊದಲ ಬಾರಿಗೆ ಸಂಸತ್‌ನಲ್ಲಿ ಮಾತನಾಡುವ ಸದಸ್ಯರಿಗೆ ಅಡ್ಡಿ ಮಾಡಬಾರದು ಎಂಬ ನಿಯಮ ಇದೆ. ಜತೆಗೆ ಸಮಯದ ಮಿತಿಯೂ ನಿಗದಿ ಮಾಡಲಾಗಿಲ್ಲ. ರಾಷ್ಟ್ರಪತಿ ಭಾಷಣಕ್ಕೆ ಧನ್ಯವಾದ ಹೇಳುವ ವಿಚಾರದಲ್ಲಿ ಯಾವುದೇ ವಿಚಾರದ ಬಗ್ಗೆ ಮಾತಾಡಲು ಅವಕಾಶ ಇದೆ.
ಜಿಎಸ್‌ಟಿಗೆ ಪೆಟ್ರೋಲ್ ರಾಜ್ಯಗಳ ನಿರಾಸಕ್ತಿ
ಹೊಸದಿಲ್ಲಿ: ಪೆಟ್ರೋಲ್ ಹಾಗೂ ಡೀಸೆಲ್ ಅನ್ನು ಜಿಎಸ್‌ಟಿ ವ್ಯಾಪ್ತಿಗೆ ತರುವ ಬಗ್ಗೆ ಬಹುತೇಕ ರಾಜ್ಯಗಳಿಗೆ ಸಮ್ಮತಿಯಿಲ್ಲ ಎಂದು ವಿತ್ತ ಸಚಿವ ಅರುಣ್ ಜೇಟಿÉ ಹೇಳಿದ್ದಾರೆ. ಹೀಗಾಗಿ ಇವುಗಳಿಗೆ ಕೇಂದ್ರದ ಅಬಕಾರಿ ಮತ್ತು ವ್ಯಾಟ್ ಮುಂದುವರಿದಿದೆ. ಆದರೆ ಜಿಎಸ್‌ಟಿ ಜಾರಿ ಸರಳಗೊಳ್ಳುತ್ತಿದ್ದಂತೆ ರಿಯಲ್ ಎಸ್ಟೇಟ್ ಮತ್ತು ನೈಸರ್ಗಿಕ ಅನಿಲವನ್ನೂ ಜಿಎಸ್‌ಟಿ ವ್ಯಾಪ್ತಿಗೆ ಒಳಪಡಿಸಲಾಗುತ್ತದೆ. ನಂತರದ ಹಂತದಲ್ಲಿ ಪೆಟ್ರೋಲ್, ಡೀಸೆಲ್ ಹಾಗೂ ಆಲ್ಕೋ ಹಾಲ್ ಕೂಡ ಸೇರಿಸಲಾಗುತ್ತದೆ . ಸದ್ಯ ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್‌ಟಿ ವ್ಯಾಪ್ತಿಯಿಂದ ಹೊರಗಿಟ್ಟಿರುವುದರಿಂದ, ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ ಸೇರಿದಂತೆ ಹಲವು ಸಮಸ್ಯೆಗಳು ಎದುರಾಗಿವೆ ಎಂದು ಅವರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi Police; ಬೆಂಗಳೂರಿನಲ್ಲಿ ಇಬ್ಬರು ಶಾರ್ಪ್‌ಶೂಟರ್‌ಗಳ ಬಂಧನ
L&T; ನೌಕರರು ರವಿವಾರವೂ ಕೆಲಸ ಮಾಡಬೇಕು, ವಾರಕ್ಕೆ 90 ಗಂಟೆ ಕೆಲಸ!!
Delhi airport; ಮೊಸಳೆ ತಲೆಬುರುಡೆ ಸಾಗಿಸುತ್ತಿದ್ದ ಕೆನಡಾ ಪ್ರಜೆ ಬಂಧನ
Tirupati; ಗಾಯಾಳುಗಳನ್ನು ಭೇಟಿಯಾದ ಸಿಎಂ ನಾಯ್ಡು: ಟಿಟಿಡಿ ಅಧಿಕಾರಿಗಳಿಗೆ ಛೀಮಾರಿ!
Tirupati;ದುರಂತಕ್ಕೆ ಸಿಎಂ ನಾಯ್ಡು,ಆಡಳಿತ ಮಂಡಳಿ,ಪೊಲೀಸರು ಕಾರಣ: ಮಾಜಿ ಟಿಟಿಡಿ ಮುಖ್ಯಸ್ಥರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.