![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Dec 7, 2021, 10:10 AM IST
ಹೊಸದಿಲ್ಲಿ: ಭಾರತೀಯ ಖಾದ್ಯಗಳ ಅಭಿಮಾನಿ ಯಾಗಿ ರುವ ಜನಪ್ರಿಯ ಮಾಡೆಲ್ ಪದ್ಮಾ ಲಕ್ಷ್ಮಿ, ಉತ್ತರ ಭಾರತದ ಖ್ಯಾತ ತಿನಿಸುಗಳಲ್ಲೊಂದಾದ ನಾನ್‌ನ (ಮೈದಾಹಿಟ್ಟಿನ ರೊಟ್ಟಿ) 3ಡಿ ಪ್ರಿಂಟ್ ಉಳ್ಳ ಬೆಡ್‌ಶೀಟ್ ಹಾಗೂ ತಲೆ ದಿಂಬಿನ ಕವರ್‌ಗಳನ್ನು ಆರ್ಡರ್ ಮಾಡಿಕೊಂಡಿದ್ದಾರೆ. ಅವನ್ನು ತಮ್ಮ ಬೆಡ್‌ರೂಮಿನ ಹಾಸಿಗೆ, ದಿಂಬುಗಳಿಗೆ ಹಾಕಿ ಅದರ ಪೋಟೋವೊಂದನ್ನು ಕ್ಲಿಕ್ ಮಾಡಿ ಸಾಮಾ ಜಿಕ ಜಾಲತಾಣವಾದ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.
ಫೋಟೋ ನೋಡಿದ ಕ್ಷಣ.. ನಿಜವಾಗಿಯೂ ಇಡೀ ಹಾಸಿಗೆಗೆ ಸಾಕಾಗುವಷ್ಟು ನಾನ್ ತಯಾರಿಸಿ ತಂದು ಹಾಸಿಗೆಗೆ ಹೊದಿಸಿದ ಹಾಗೆ ಕಾಣುತ್ತದೆ. ಇದಕ್ಕೊಂದು ಫೋಟೋ ಅಡಿಬರಹವನ್ನೂ ಹಾಕಿ ರುವ ಅವರು, ನಾನ್ ಬೆಡ್ ಮಾರಾಟಕ್ಕಿದೆ. ಇದರೊಂದಿಗೆ ನಾನ್‌ನಿಂದ ತಯಾರಿಸಿದ ಎರಡು ದಿಂಬುಗಳೂ ಉಚಿತ ಎಂದು ಉಲ್ಲೇಖಿಸಿದ್ದಾರೆ
ಈ ಫೋಟೋ ಟ್ವಿಟರ್‌ನಲ್ಲಿ ಭಾರೀ ಚರ್ಚೆಗೆ ಗ್ರಾಸ ವಾಗಿದೆ. ಹಲವಾರು ಜನರು ಈ ಐಡಿಯಾವನ್ನು ಇಷ್ಟಪಟ್ಟಿದ್ದಾರೆ. ಇಷ್ಟಪಟ್ಟವರಲ್ಲಿ ಕೆಲವರು, ತಮಾಷೆ ಯನ್ನೂ ಮಾಡಿದ್ದಾರೆ.
ಇದನ್ನೂ ಓದಿ:ಇಂಡೋ-ಅಮೆರಿಕನ್ ಸಿನಿಮಾಕ್ಕೆ ಬಾಲಿವುಡ್ ನಟಿ ಐಶ್ವರ್ಯ ನಾಯಕಿ
“ಲಕ್ಷ್ಮಿಯವರೇ, ನೀವು ಮಲಗಿದ್ದಾಗ ಇಡೀ ಬೆಡ್ಡನ್ನು ಇಷ್ಟಿಷ್ಟೇ ತಿನ್ನುತ್ತಾ ಸಾಗಿದರೆ ಏನು ಗತಿ?” ಎಂದು ಕೇಳಿದ್ದು, ಅದಕ್ಕೆ ಉತ್ತರಿಸಿರುವ ಲಕ್ಷ್ಮಿ, “ಹಾಗೆ ರಾತ್ರಿಯಿಡೀ ತಿನ್ನುತ್ತಿದ್ದರೆ ನಾನು ಧೊಪ್ಪನೆ ಕೆಳಗೆ ಬಿದ್ದು ನೆಲದ ಮೇಲೆ ಮಲಗಿಕೊಳ್ಳ ಬೇಕಾಗುತ್ತದೆ” ಎಂದು ಹೇಳಿದ್ದಾರೆ. ಮತ್ತೊಬ್ಬರು ಕಮೆಂಟ್ ಮಾಡಿ, “”ನಾನು ನೆನ್ನೆ ರಾತ್ರಿ ಮಲಗಿದ್ದಾಗ ದೊಡ್ಡ ನಾನ್ ತಿಂದು ಮಲಗಿದ ಹಾಗೆ ಕನಸು ಬಿತ್ತು. ಬೆಳಗ್ಗೆ ಎದ್ದು ನೋಡಿದರೆ ನನ್ನ ಬೆಡ್‌ಶೀಟ್ ಮಾಯವಾಗಿದ್ದು ಅದು ನಿಮ್ಮ ಮನೆಯಲ್ಲಿದೆ” ಎಂದಿದ್ದಾರೆ. ಇಂಥ ಹಲವಾರು ಹಾಸ್ಯದ ಕಮೆಂಟ್‌ಗಳು ಅದಕ್ಕೆ ಲಕ್ಷ್ಮಿಯವರ ಹಾಸ್ಯ ಉತ್ತರಗಳು ಈ ಫೋಟೋಕ್ಕೆ ಬಂದಿವೆ.
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.