102 ಸಾಧಕರ ಮುಕುಟಕ್ಕೆ ಪದ್ಮಶ್ರೀ ಕಿರೀಟ
ಎಂಟು ಮಂದಿ ರಾಜಕಾರಣಿಗಳಿಗೆ ಪ್ರಶಸ್ತಿ ,ಪಶ್ಚಿಮ ಬಂಗಾಳದ 7, ಉತ್ತರ ಪ್ರದೇಶದ 9 ಮಂದಿಗೆ ಪ್ರಶಸ್ತಿ
Team Udayavani, Jan 26, 2021, 7:40 AM IST
ನವದೆಹಲಿ: ಅತ್ಯಂತ ಮಹತ್ವದ ಭಾರತದ ಅತ್ಯುನ್ನತ ಪ್ರಶಸ್ತಿಗಳಾದ ಪದ್ಮವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀ ಪ್ರಶಸ್ತಿಗಳನ್ನು ಸೋಮವಾರ ಪ್ರಕಟಿಸಲಾಗಿದೆ. ಈ ಬಾರಿಯೂ ಹಲವಾರು ಎಲೆಮರೆಯ ಕಾಯಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಕರ್ನಾಟಕದ ಐವರಿಗೆ ಪ್ರಶಸ್ತಿ ಸಿಕ್ಕಿದ್ದರೆ, ಉತ್ತರ ಪ್ರದೇಶದ 9 ಮಂದಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಈ ಬಾರಿ ಎಂಟು ಮಂದಿ ರಾಜಕಾರಣಿಗಳಿಗೆ ಪ್ರಶಸ್ತಿ ಸಿಕ್ಕಿದೆ. ಹಾಗೆಯೇ, 15 ಮಂದಿಗೆ ಮರಣೋತ್ತರವಾಗಿ ಪ್ರಶಸ್ತಿ ಲಭಿಸಿದೆ. ಕಲಾ ವಿಭಾಗದಲ್ಲಿ 41 ಮಂದಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಕ್ರೀಡಾ ವಿಭಾಗದಲ್ಲಿ ಏಳು ಮಂದಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಜಪಾನ್‌ನ ಮಾಜಿ ಪ್ರಧಾನಿ ಶಿನ್ಝೋ ಅಬೆ ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ನೀಡಲಾಗಿದೆ.
ಈ ಬಾರಿ 7 ಮಂದಿಗೆ ಪದ್ಮವಿಭೂಷಣ, 10 ಮಂದಿಗೆ ಪದ್ಮಭೂಷಣ ಮತ್ತು 102 ಮಂದಿಗೆ ಪದ್ಮಶ್ರೀ ಪ್ರಶಸ್ತಿ ನೀಡಲಾಗಿದೆ. ಅಂದರೆ, ಒಟ್ಟು 119 ಮಂದಿಗೆ ಪ್ರಶಸ್ತಿ ಸಿಕ್ಕಂತಾಗಿದೆ.
ಪದ್ಮಶ್ರೀ ಪುರಸ್ಕೃತರು :
ಕಲೆ : ಗುಲ್ಫಮ್ ಅಹ್ಮದ್, ರಾಮಸ್ವಾಮಿ ಅನ್ನವರಪು, ಸುಬ್ಬು ಆರ್ಮುಗಂ, ಭುರಿ ಬಾಯಿ, ರಾಧೇ ಶ್ಯಾಮ್ ಬರ್ಲೆ, ಬಿರೆನ್ ಕುಮಾರ್ ಬಸಕ್, ಪೀಟರ್ ಬ್ರೂಕ್, ಜಿ.ಬಿ.ಬುರಾಭಕತ್, ನಾರಾಯಣ ದೇವನಾಥ್, ದುಲಾರಿ ದೇವಿ, ರಾಧೇ ದೇವಿ, ವಯಾನ್ ದಿಬಿಯಾ, ಪರುಶುರಾಮ್ ಆತ್ಮಾರಾಮ್ ಗಂಗವಾನೆ, ಪೂರ್ಣಮಾಸಿ ಜಾನಿ, ಮಂಜಮ್ಮ ಜೋಗತಿ, ದಾಮೋದರನ್ ಕೈಥಪ್ರಮ್, ಮಹೇಶಿಬಾಯಿ ಮತ್ತು ನರೇಶಿಬಾಯಿ ಕನೋಡಿಯಾ(ಮರಣೋತ್ತರ), ಕೆ.ಕೇಶವಸ್ವಾಮಿ, ಗುಲಾಂ ರಸೂಲ್ ಖಾನ್, ಲಖಾ ಖಾನ್, ಸಾಜಿದಾ ಖಥನ್(ಬಾಂಗ್ಲಾ), ವಿನಾಯಕ ವಿಷ್ಣು ಖೇಡೇಕರ್, ಲಜ್ವಂತಿ, ರಾಮಚಂದ್ರ ಮಾಂಜಿ, ದುಲಾಲ್ ಮಾಂಕಿ, ರೇವ್‌ಬನ್ ಮಾಶಂಗ್ವಾ, ಕೆ.ಕೆ.ರಾಮಚಂದ್ರ ಪುಲಾವರ್, ಕನಕ ರಾಜು, ಬಾಂಬೆ ಜಯಶ್ರೀ ರಾಮನಾಥ್, ಸತ್ಯಾರಾಮ್ ರೇಯಾಂಗ್, ಕರ್ತಾರ್ ಪರಸ್ ರಾಮ್ ಸಿಂಗ್, ಕರ್ತಾರ್ ಸಿಂಗ್, ಕೆ.ಸಿ.ಶಿವಶಂಕರ್(ಮರಣೋತ್ತರ), ನಿಡಮೋಲು ಸುಮತಿ.
ಸಾಮಾಜಿಕ ಸೇವೆ : ಲಕ್ಷ್ಮೀ ಬರುವಾ, ಸಾಂಗ್‌ಕುಮಿ ಬುಲ್ಚೌಕ್, ಜಗದೀಶ್ ಚೌಧರಿ(ಮರಣೋತ್ತರ, ತ್ಸುತ್ರಿಮ್ ಚೋಂಜೋರ್, ಚುಟ್ನಿ ದೇವಿ, ಶಾಂತಿ ದೇವಿ, ಪ್ರಕಾಶ್ ಕೌರ್, ನೀರು ಕುಮಾರ್, ಶ್ಯಾಮ್ ಸುಂದರ್ ಪಲಿವಾಲ್, ಗಿರೀಶ್ ಪ್ರಭುನೇ, ಬಿರುಬಲ ರಾಧಾ, ಸಿಂಧುತಾಯಿ ಸಪ್ಕಲ್, ಜಿತೇಂದರ್ ಸಿಂಗ್ ಶಾಂತಿ, ಗುರು ಮಾ ಕಮಲಿ ಸೋರೇನ್, ಮರಾಚಿ ಸುಬ್ಬರಾಮನ್.
ಸಾರ್ವಜನಿಕ ಸೇವೆ : ಬಿಜೋಯ್ ಚಕ್ರವರ್ತಿ, ಕ. ಖ್ವಾಜಿ ಸಾಜಿದ್ ಅಲಿ ಝಾಹೀರ್(ಬಾಂಗ್ಲಾ)
ವೈದ್ಯಕೀಯ : ಡಾ.ರತನ್ ಲಾಲ್ ಮಿತ್ತಲ್, ಡಾ. ಚಂದ್ರಕಾಂತ್ ಸಂಭಾಜಿ ಪಾಂಡವ್, ಡಾ.ಜೆ.ಎನ್. ನಂಡೇ(ಮರಣೋತ್ತರ), ಡಾ.ಕೃಷ್ಣ ಮೋಹನ್ ಪಥಿ, ಡಾ.ಧನಂಜಯ್ ದಿವಾಕರ್ ಸಾಗ್ಡೋ, ಅಶೋಕ್ ಕುಮಾರ್ ಸಾಹು, ಡಾ.ಭೂಪೇಂದ್ರ ಕುಮಾರ್ ಸಿಂಗ್ ಸಂಜಯ್, ದಿಲೀಪ್ ಕುಮಾರ್ ಸಿಂಗ್, ಡಾ. ತಿರುವೇಂಗದಮ್ ವೀರರಾಘವನ್(ಮರಣೋತ್ತರ).
ಸಾಹಿತ್ಯ ಮತ್ತು ಶಿಕ್ಷಣ :
ಪ್ರಕಾಶ್ ರಾವ್ ಅಸವಾದಿ, ಧರ್ಮ ನಾರಾಯಣ ಬರ್ಮಾ, ಸುಜೀತ್ ಚಟ್ಟೋಪಾಧ್ಯಾಯ್, ಶ್ರೀಕಾಂತ್ ದಾತರ್, ಜೈ ಭಗ್‌ವಾನ್ ಗೋಯಲ್, ಜಗದೀಶ್ ಚಂದ್ರ ಹಲ್ದಾರ್, ಮಂಗಲ್
ಸಿಂಗ್ ಹಝೋವಾರಿ, ನಾಮ್ದಿಯೋ ಸಿ ಕಾಂಬ್ಳೆ, ರಜತ್ ಕುಮಾರ್ ಕರ್, ರಂಗಸ್ವಾಮಿ ಲಕ್ಷ್ಮಿನಾರಾಯಣ ಕಶ್ಯಪ್, ನಿಕೋಲಸ್ ಕಝಾನಸ್, ಚಂದ್ರಕಾಂತ್ ಮೆಹ್ತಾ, ಸೋಲೋಮನ್ ಪಾಪಯ್ಯ, ನಂದಾ ಪ್ರುಸ್ತಿ, ಬಾಲನ್ ಪುಥೇರಿ, ಚಮನ್‌ಲಾಲ್ ಶಪ್ರು, ರೋಮನ್ ಸರ್ಮಾಹ್, ಇಮ್ರಾನ್ ಶಾ, ಅರ್ಜುನ್ ಸಿಂಗ್ ಶೇಖಾವತ್, ರಾಮಯತ್ನ ಶುಕ್ಲಾ, ಮೃದುಲಾ ಸಿನ್ಹಾ, ಕಪಿಲ್ ತಿವಾರಿ, ಫಾ.ವಲ್ಲೆಸ್(ಸ್ಪೇನ್), ಉಷಾ ಯಾದವ್.
ಕ್ರೀಡೆ : ಪಿ.ಅನಿತಾ, ಮೌಮಾ ದಾಸ್, ಅನ್ಶು ಜೇಮ್‌ಸೇನ್ಟಾ, ಮಾಧವನ್ ನಂಬಿಯಾರ್, ಸುಧಾ ಹರಿ ನಾರಾಯಣ ಸಿಂಗ್, ವಿರೇಂದರ್ ಸಿಂಗ್, ಕೆ.ವೈ.ವೆಂಕಟೇಶ್.
ಕೃಷಿ : ನಾನಾದ್ರೋ ಬಿ ಮಾರಕ್, ಪಾಪ್ಪಮ್ಮಳ್, ಪ್ರೇಮ್ ಚಾಂದ್ ಶರ್ಮ, ಚಂದ್ರ ಶೇಖರ್ ಸಿಂಗ್.
ವ್ಯಾಪಾರ ಮತ್ತು ಉದ್ದಿಮೆ : ರಜನಿ ಬೇಕ್ಟರ್, ಜಸ್ವಂತಿಬೆನ್ಜ್ ಮುನಾದಾಸ್ ಪೋಪೆಟ್, ಪಿ ಸುಬ್ರಮಣಿಯನ್(ಮರಣೋತ್ತರ), ಶ್ರೀಧರ ವೆಂಬು
ವಿಜ್ಞಾನ : ರತನ್ ಲಾಲ್ :
ಇತರೆ : ಅಲಿ ಮಣಿಕ್ಫಾನ್.
ಗಾಲ್ವಾನ್ ಯೋಧ ಕ. ಸಂತೋಷ್ ಬಾಬುಗೆ ಮಹಾವೀರ ಚಕ್ರ :
ಭಾರತ ಮತ್ತು ಚೀನಾ ನಡುವೆ ಕಳೆದ ವರ್ಷ ಪೂರ್ವ ಲಡಾಖ್‌ನ ಗಾಲ್ವಾನ್‌ನಲ್ಲಿ ನಡೆದ ಘರ್ಷಣೆ ವೇಳೆ ಹುತಾತ್ಮರಾದ ಆಂಧ್ರದ ಕರ್ನಲ್ ಸಂತೋಷ್ ಬಾಬು ಅವರಿಗೆ ಮರಣೋತ್ತರವಾಗಿ ಮಹಾವೀರ ಚಕ್ರ ಘೋಷಿಸಲಾಗಿದೆ. ಜೊತೆಗೆ ಗಾಲ್ವಾನ್‌ನಲ್ಲಿ ಹುತಾತ್ಮರಾದ ಇತರೆ ಐವರು ಯೋಧರಿಗೂ (ನುದುರಾಮ್ ಸೊರೇನ್, ಕೆ. ಪಳನಿ, ತೇಜೀಂ ದರ್ ಸಿಂಗ್, ದೀಪಕ್ ಸಿಂಗ್, ಗುರುತೇಜ್ ಸಿಂಗ್) ಗೌರವ ಸಂದಿದೆ. 2020ರಲ್ಲಿ ಜಮ್ಮು-ಕಾಶ್ಮೀರದಲ್ಲಿ ಉಗ್ರ ನಿಗ್ರಹ ಕಾರ್ಯಾಚರಣೆಯಲ್ಲಿ ಅಸುನೀಗಿದ ಮೇಜರ್ ಅಂಜು ಸೂದ್‌ರಿಗೆ ಮರಣೋತ್ತರ ಶೌರ್ಯ ಚಕ್ರ ಸಂದಿದೆ.
ಪುಲ್ವಾಮಾ ಹುತಾತ್ಮನಿಗೆ ಗೌರವ: 2019ರ ಪುಲ್ವಾಮಾ ದಾಳಿಯ ವೇಳೆ ಸ್ಫೋಟಕ ತುಂಬಿದ್ದ ಉಗ್ರರ ಕಾರಿನ ಬೆನ್ನಟ್ಟಿ ಶೂಟ್ ಮಾಡಿದ್ದ ಸಿಆರ್‌ಪಿಎಫ್ ಸಹಾಯಕ ಇನ್‌ಸ್ಪೆಕ್ಟರ್ ಮೋಹನ್ ಲಾಲ್ ಅವರಿಗೆ ಮರಣೋತ್ತರವಾಗಿ ರಾಷ್ಟ್ರಪತಿಯವರ ಪೊಲೀಸ್ ಶೌರ್ಯ ಪದಕ ಘೋಷಿಸಲಾಗಿದೆ. ಈ ಗೌರವಕ್ಕೆ ಪ್ರಸಕ್ತ ವರ್ಷ ಕೇವಲ ಇಬ್ಬರು ಪೊಲೀಸರು ಪಾತ್ರರಾಗಿದ್ದಾರೆ. ಈ ಪದಕಕ್ಕೆ ಭಾಜನರಾದ ಮತ್ತೂಬ್ಬರೆಂದರೆ, ಜಾರ್ಖಂಡ್ ಪೊಲೀಸ್ ಇಲಾಖೆಯ ದಿವಂಗತ ಎಎಸ್‌ಐ ಬನುವಾ ಓರಾವನ್.
ಕರ್ನಾಟಕದ ಎಸ್.ಎಂ.ರಫಿಗೆ ಜೀವನ್ ರಕ್ಷಾ ಪದಕ:
ಗಣರಾಜ್ಯೋತ್ಸವದ ಮುನ್ನಾದಿನವಾದ ಸೋಮವಾರ ಒಬ್ಬರಿಗೆ ಸರ್ವೋತ್ತಮ ಜೀವನ್ ರಕ್ಷಾ ಪದಕ, 8 ಮಂದಿಗೆ ಉತ್ತಮ ಜೀವನ ರಕ್ಷಾ ಪದಕ ಹಾಗೂ 31 ಮಂದಿಗೆ ಜೀವನ್ ರಕ್ಷಾ ಪದಕವನ್ನು ಘೋಷಿಸಲಾಗಿದೆ. ಜೀವನ್ ರಕ್ಷಾ ಪದಕ ಪಡೆದ 31 ಮಂದಿಯ ಪೈಕಿ ಕರ್ನಾಟಕದ ಎಸ್.ಎಂ. ರಫಿ ಕೂಡ ಒಬ್ಬರು. ಮಾನವೀಯ ನೆಲೆಯಲ್ಲಿ ಮತ್ತೂಬ್ಬರ ಪ್ರಾಣ ರಕ್ಷಣೆ ಮಾಡಿದವರಿಗೆ ಈ ಗೌರವ ನೀಡಲಾಗುತ್ತದೆ. ಕೇರಳದ ಮುಹಮ್ಮದ್ ಮುಹ್ಸಿನ್ ಅವರಿಗೆ ಮರಣೋತ್ತರವಾಗಿ ಸರ್ವೋತ್ತಮ ಜೀವನ ರಕ್ಷಾ ಪದಕ ಘೋಷಿಸಲಾಗಿದೆ.
17 ಐಟಿಬಿಪಿ ಅಧಿಕಾರಿಗಳಿಗೆ ಪೊಲೀಸ್ ಪದಕ: ಇಂಡೋ-ಟಿಬೆಟನ್ ಗಡಿ ಪೊಲೀಸ್(ಐಟಿಬಿಪಿ) ಪಡೆಯ 17 ಮಂದಿ ಯೋಧರಿಗೆ ಪ್ರಸಕ್ತ ಸಾಲಿನ ಪೊಲೀಸ್ ಸೇವಾ ಪದಕ ಸಂದಿದೆ. ಈ ಪೈಕಿ ಇಬ್ಬರಿಗೆ ಪೊಲೀಸ್ ಶೌರ್ಯ ಪದಕ, ಮೂವರಿಗೆ ವಿಶಿಷ್ಟ ಸೇವೆಗಳಿಗೆ ನೀಡಲಾಗುವ ರಾಷ್ಟ್ರಪತಿಯವರ ಪೊಲೀಸ್ ಪದಕ ಹಾಗೂ 12 ಮಂದಿಗೆ ಪ್ರಶಂಸನೀಯ ಸೇವೆಗಾಗಿ ನೀಡುವ ಪೊಲೀಸ್ ಪದಕ ಘೋಷಿಸಲಾಗಿದೆ.
ಸಿಆರ್‌ಪಿಎಫ್ಗೇ ಸಿಂಹಪಾಲು :
ಎರಡನೇ ಅತ್ಯುನ್ನತ ಶೌರ್ಯ ಪ್ರಶಸ್ತಿಯಾದ ಕೀರ್ತಿ ಚಕ್ರವನ್ನು ಸುಬೇದಾರ್ ಸಂಜೀವ್ ಕುಮಾರ್‌ರಿಗೆ ಮರಣೋತ್ತರವಾಗಿ ಘೋಷಿಸಲಾಗಿದೆ. ಕಳೆದ ವರ್ಷದ ಏ.4ರಂದು ಜಮ್ಮು-ಕಾಶ್ಮೀರದಲ್ಲಿ ನಡೆದ ಉಗ್ರ ನಿಗ್ರಹ ಕಾರ್ಯಾಚರಣೆಯಲ್ಲಿ ಯೋಧ ಸಂಜೀವ್ ಕುಮಾರ್ ಅವರು ಒಬ್ಬ ಉಗ್ರನನ್ನು ಹೊಡೆದುರುಳಿಸಿದ್ದರು. ಈ ಬಾರಿಯ ಶೌರ್ಯ ಪ್ರಶಸ್ತಿಗಳಲ್ಲಿ ಸಿಂಹಪಾಲು ಅಂದರೆ 73 ಪ್ರಶಸ್ತಿಗಳು ಸಿಆರ್‌ಪಿಎಫ್ ಪಾಲಾಗಿವೆ. ಅಲ್ಲದೆ, ಸಿಆರ್‌ಪಿಎಫ್ ಇನ್‌ಸ್ಪೆಕ್ಟರ್ ಪಿಂಟು ಕುಮಾರ್ ಸಿಂಗ್, ಶ್ಯಾಮ್ ನರೈನ್ ಸಿಂಗ್, ಕಾನ್‌ಸ್ಟೇಬಲ್ ವಿನೋದ್ ಕುಮಾರ್, ಡೆಪ್ಯುಟಿ ಕಮಾಂಡೆಂಟ್ ರಾಹುಲ್ ಮಾಥೂರ್ ಅವರಿಗೆ ಮರಣೋತ್ತರವಾಗಿ ಕೀರ್ತಿ ಚಕ್ರ ಸಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Notice: ಸಂಗೀತ ಕಾರ್ಯಕ್ರಮಕ್ಕೂ ಮೊದಲು ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.