ಪದ್ಮಾವತ್: ಶಾಲಾ ಬಸ್ ದಾಳಿಕೋರರನ್ನು ಖಂಡಿಸಿ: ಕೇಜ್ರಿ ಕರೆ
Team Udayavani, Jan 25, 2018, 3:28 PM IST
ಹೊಸದಿಲ್ಲಿ : ಪದ್ಮಾವತ್ ಚಿತ್ರ ಪ್ರತಿಭಟನಕಾರರು ಗುರುಗ್ರಾಮದಲ್ಲಿ ಶಾಲಾ ಮಕ್ಕಳ ಬಸ್ಸಿನ ಮೇಲೆ ದಾಳಿ ನಡೆಸಿರುವುದನ್ನು ಅತ್ಯುಗ್ರವಾಗಿ ಖಂಡಿಸಿರುವ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಈ ರೀತಿಯ ದಾಳಿಗಳ ಬಗ್ಗೆ ಯಾರೂ ಮೂಕರಾಗಿ ಉಳಿಯಬಾರದು, ತೀವ್ರವಾಗಿ ಖಂಡಿಸಬೇಕು ಎಂದು ಹೇಳಿದ್ದಾರೆ.
“ನಾನು ಎಲ್ಲರಲ್ಲೂ ವಿನಂತಿ ಮಾಡುತ್ತೇನೆ; ನಾವಿನ್ನು ಮೂಕರಾಗಿರಲು ಸಾಧ್ಯವಿಲ್ಲ; ಈ ದಾಳಿಕೋರರು ಮುಸ್ಲಿಮರನ್ನು ಕೊಂದವರು, ದಲಿತರನ್ನು ಸಜೀವ ದಹನ ಮಾಡಿದವರು; ಚಚ್ಚಿ ಕೊಂದವರು; ಇವತ್ತು ಅವರು ನಮ್ಮ ಮಕ್ಕಳ ಮೇಲೆ ಕಲ್ಲು ಹೊಡೆಯುತ್ತಿದ್ದಾರೆ; ನಮ್ಮ ಮನೆಗೇ ನುಗ್ಗಿ ಬಂದು ನಮ್ಮ ಮೇಲೆ ದಾಳಿಗೆ ಮುಂದಾಗಿದ್ದಾರೆ; ಹಾಗಿರುವಾಗ ಇನ್ನು ಯಾರೂ ಮೂಕರಾಗಿರಬಾರದು; ಇಂತಹ ದಾಳಿಗಳನ್ನು ಖಂಡಿಸಿ ಮಾತನಾಡಲೇಬೇಕು’ ಎಂದು ಕೇಜ್ರಿವಾಲ್ ಗುಡುಗಿದರು.
ಜನರು ವಿಭಜಕ ಶಕ್ತಿಗಳ ವಿರುದ್ಧ ಸೆಟೆದೆದ್ದು ಮಾತನಾಡಬೇಕು ಎಂದು ಕೇಜ್ರಿವಾಲ ದಿಲ್ಲಿಯ ಉತ್ತರ ಛತ್ರಶಾಲಾ ಸ್ಟೇಡಿಯಂ ನಲ್ಲಿ ಗಣರಾಜ್ಯೋತ್ಸವದ ಪ್ರಯುಕ್ತ ನಡೆದ ರಾಜ್ಯ ಮಟ್ಟದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Assam Coal Mine Tragedy: ಅಸ್ಸಾಂ ಗಣಿ ದುರಂತ… ಒಬ್ಬನ ಮೃತ ದೇಹ ಪತ್ತೆ
ತಿಮ್ಮಪ್ಪನ ಸನ್ನಿಧಾನದಲ್ಲಿ ನೂಕುನುಗ್ಗಲು ಕಾಲ್ತುಳಿತ… 6 ಸಾ*ವು, ಹಲವರ ಸ್ಥಿತಿ ಗಂಭೀರ
Sheesh Mahal Row: ಶೀಶ್ಮಹಲ್ ವರ್ಸಸ್ ರಾಜ್ ಮಹಲ್: ದಿಲ್ಲೀಲಿ ಬಿಜೆಪಿ, ಆಪ್ ಹೈಡ್ರಾಮ
Foundation: ಆಂಧ್ರ ಅಭಿವೃದ್ಧಿಗೆ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುವೆವು: ಮೋದಿ
Delhi: ಜ.15ಕ್ಕೆ ಹೊಸ ಕಟ್ಟಡಕ್ಕೆ ಕಾಂಗ್ರೆಸ್ ಪ್ರಧಾನ ಕಚೇರಿ ಸ್ಥಳಾಂತರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.