ವಿವಾದಿತ ಪದ್ಮಾವತಿಗೆ ಸೆನ್ಸಾರ್ ಸರ್ಟಿಫಿಕೇಟ್ ಬೇಗನೆ ಇಲ್ಲ
Team Udayavani, Nov 20, 2017, 3:46 PM IST
ಮುಂಬಯಿ : ಪದ್ಮಾವತಿ ಚಿತ್ರಕ್ಕೆ ಸೆನ್ಸಾರ್ ಸರ್ಟಿಫಿಕೇಟ್ ನೀಡುವ ಪ್ರಕ್ರಿಯೆಯನ್ನು ತ್ವರಿತಗೊಳಿಸಬೇಕೆಂಬ ಚಿತ್ರ ನಿರ್ಮಾಪಕರ ಮನವಿಯನ್ನು ಗೀತ ರಚನಕಾರ ಪ್ರಸೂನ್ ಜೋಷಿ ನೇತೃತ್ವದ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ ತಿರಸ್ಕರಿಸಿದೆ.
ಸೆನ್ಸಾರ್ ಸರ್ಟಿಫಿಕೇಟ್‌ಗಾಗಿ ಸಲ್ಲಿಸಲಾಗಿರುವ ಅರ್ಜಿಗಳನ್ನು ದಿನಾಂಕದ ಅನುಕ್ರಮಣಿಕೆಯ ಪ್ರಕಾರ ಪರಾಮರ್ಶಿಸಿದ ಬಳಿಕವೇ ಸಂಜಯ್ ಲೀಲಾ ಭನ್ಸಾಲಿ ಅವರ ಚಿತ್ರಕ್ಕೆ ಸರ್ಟಿಫಿಕೇಟ್ ನೀಡಲಾಗುವುದು ಎಂದು ಸಿಬಿಎಫ್ಸಿ ಹೇಳಿದೆ.
ಕಳೆದ ನ.19ರಂದು ಪದ್ಮಾವತಿ ಚಿತ್ರ ನಿರ್ಮಾಪಕರು ಹೇಳಿಕೆ ನೀಡಿ ಚಿತ್ರದ ಬಿಡುಗಡೆಯನ್ನು ಮುಂದೂಡಲಾಗಿದೆ ಎಂದು ತಿಳಿಸಿದ್ದರು.
ಪದ್ಮಾವತಿ ಚಿತ್ರದ ಹಿಂದಿರುವ ವಯಾಕಾಮ್ 8 ಮೋಷನ್ ಪಿಕ್ಚರ್‌ಸ್ ಸ್ಟುಡಿಯೋ ತನ್ನ ಸ್ವಯಂ ಪ್ರೇರಣೆಯ ಹೇಳಿಕೆಯಲ್ಲಿ “ಡಿ.1, 2017ಕ್ಕೆ ನಿಗದಿಸಲಾಗಿದ್ದ ಪದ್ಮಾವತಿ ಚಿತ್ರದ ಬಿಡುಗಡೆಯನ್ನು ಮುಂದಕ್ಕೆ ಹಾಕಲಾಗಿದೆ; ಚಿತ್ರ ಬಿಡುಗಡೆಯ ಮುಂದಿನ ದಿನಾಂಕವನ್ನು ಶೀಘ್ರವೇ ಪ್ರಕಟಿಸಲಾಗುವುದು’ ಎಂದು ಹೇಳಿತ್ತು.
ರಣವೀರ್ ಸಿಂಗ್, ಶಾಹೀದ್ ಕಪೂರ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ಪದ್ಮಾವತಿ ಚಿತ್ರ ಕಳೆದ ವರ್ಷ ಸೆಟ್‌ಗೆ ಹೋದಂದಿನಿಂದಲೂ ವಿವಾದಗಳಿಗೆ ಗುರಿಯಾಗುತ್ತಾ ಬಂದಿತ್ತು.
ಚಿತ್ರದಲ್ಲಿ ರಾಣಿ ಪದ್ಮಾವತಿ (ದೀಪಿಕಾ) ಮತ್ತು ಅಲಾವುದ್ದೀನ್ ಖಿಲ್ಜಿ (ರಣವೀರ್ ಸಿಂಗ್) ನಡುವೆ ರೊಮ್ಯಾಂಟಿಕ್ ಕನಸಿನ ದೃಶ್ಯಗಳಿರುವೆ ಎಂಬ ಕಾರಣಕ್ಕೆ ರಾಜಪೂತ ಸಂಘಟನೆಯನ್ನು ಅದು ಕೆರಳಿಸಿತ್ತು.
ಡಿ.1ಕ್ಕೆ ಚಿತ್ರ ಬಿಡುಗಡೆ ಮಾಡದಂತೆ ವಿವಿಧೆಡೆ ಪ್ರತಿಭಟನೆಗಳು ನಡೆದಿದ್ದವು. ದೀಪಿಕಾಳನ್ನು ‘ನಾಚ್‌ನೇ ವಾಲಿ’ ಎಂದು ರಾಜಪೂತ ಕರಣಿ ಸೇನೆ ಛೇಡಿಸಿತ್ತು. ಆಕೆಯ ಶಿರಚ್ಛೇದನ ಮಾಡುವವರಿಗೆ ಒಂದೆಡೆ 1 ಕೋಟಿ ಇನಾಮು ಘೋಷಿಸಿತ್ತು. ಅನಂತರದಲ್ಲಿ ಆಕೆಯನ್ನು ಜೀವಂತ ಸುಟ್ಟರೆ 5 ಕೋಟಿ ಇನಾಮು ಕೊಡಲಾಗುವುದೆಂಬ ಮಾತು ಕೇಳಿ ಬಂದಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!
Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ
Encounter: ಬೆಳ್ಳಂಬೆಳಗ್ಗೆ ಜಮ್ಮು ಕಾಶ್ಮೀರದಲ್ಲಿ ಗುಂಡಿನ ದಾಳಿ; 5 ಭಯೋತ್ಪಾದಕರು ಹತ
22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?
MUST WATCH
ಹೊಸ ಸೇರ್ಪಡೆ
INDvAUS: ಶಮಿ ವಿರುದ್ದ ನಿಂತರೇ ನಾಯಕ ರೋಹಿತ್?; ವೇಗಿಗೆ ಆಸೀಸ್ ಪ್ರವಾಸ ಕಷ್ಟ!
Mogilaiah: ಪದ್ಮಶ್ರೀ ಪುರಸ್ಕೃತ, ಜಾನಪದ ಕಲಾವಿದ ಬಳಗಂ ಚಿತ್ರ ಖ್ಯಾತಿಯ ಮೊಗಿಲಯ್ಯ ನಿಧನ
Bantwala: ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಟೆಂಪೋ ಟ್ರಾವೆಲ್
Betting App; ಬಾಲಿವುಡ್ ನಟಿಯರು ಪ್ರಚಾರ ಮಾಡಿದ್ದ ಬೆಟ್ಟಿಂಗ್ ಆ್ಯಪ್ ಮಾಲಕ ಪಾಕಿಸ್ತಾನಿ!
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.