ಪಾದೂರು ತೈಲ ಸಂಗ್ರಹಾಗಾರಕ್ಕೆ ಸೌದಿ ತೈಲ
Team Udayavani, Jan 26, 2017, 3:45 AM IST
ಹೊಸದಿಲ್ಲಿ: ಉಡುಪಿ ಸಮೀಪದ ಪಾದೂರಿನಲ್ಲಿ ನಿರ್ಮಿಸಲಾಗುತ್ತಿರುವ ಭೂಗತ ತೈಲ ಸಂಗ್ರಹಾಗಾರದ ಒಟ್ಟು ಸಾಮರ್ಥ್ಯದ ಶೇ. 50ರಷ್ಟನ್ನು ಭರ್ತಿ ಮಾಡಲು ಸೌದಿ ಅರೇಬಿಯ ಸರಕಾರ ಒಪ್ಪಿಕೊಂಡಿದೆ. ಗಣರಾಜ್ಯೋತ್ಸವ ಸಮಾರಂಭಕ್ಕೆ ವಿಶೇಷ ಅತಿಥಿಯಾಗಿ ಆಗಮಿಸಿರುವ ಸೌದಿ ರಾಜಕುಮಾರ ಶೇಖ್ ಅಹ್ಮದ್ ಬಿನ್ ಝಾಯೆದ್ ಅಲ್- ನಹ್ಯಾಮ್ ಅವರು ಪ್ರಧಾನಿ ಮೋದಿ ಜತೆ ನಡೆಸಿದ ಸಭೆಯಲ್ಲಿ ಈ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.
ಒಪ್ಪಂದದ ಪ್ರಕಾರ, ಅಬುಧಾಬಿಯ ರಾಷ್ಟ್ರೀಯ ತೈಲ ಕಂಪೆನಿ 6 ಮಿಲಿಯನ್ ಬ್ಯಾರೆಲ್ ತೈಲವನ್ನು ಪಾದೂರಿನ ಭೂಗತ ತೈಲ ಸಂಗ್ರಹಾಗಾರಕ್ಕೆ ಪೂರೈಸಲಿದೆ. ಇಲ್ಲಿ ಒಟ್ಟು 18.3 ಮಿ. ಬ್ಯಾರೆಲ್ ತೈಲ ಸಂಗ್ರಹಿಸಬಹುದು. ದೇಶದಲ್ಲಿ ಒಟ್ಟು 36.87 ಮಿಲಿಯನ್ ಬ್ಯಾರೆಲ್ ತೈಲ ಸಂಗ್ರಹ ಕೇಂದ್ರವಿದ್ದು, 10 ದಿನಗಳ ಬಳಕೆಗೆ ಸಾಕಾಗುತ್ತದೆ.
ಭಾರತಕ್ಕೆ ತೈಲ ಪೂರೈಸುತ್ತಿರುವ ದೇಶಗಳಲ್ಲಿ ಸೌದಿ ಅರೇಬಿಯ 5ನೇ ಅತಿದೊಡ್ಡ ದೇಶ. ಭಾರತ ವಿಶ್ವದ ಮೂರನೇ ಅತಿದೊಡ್ಡ ತೈಲಗ್ರಾಹಕ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Patna: ಆಸ್ಪತ್ರೆಯಲ್ಲಿ ಮೃತಪಟ್ಟ ರೋಗಿಯ ಕಣ್ಣೇ ಮಾಯಾ… ಇಲಿ ತಿಂದಿದೆ ಎಂದ ವೈದ್ಯರು
Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು
Kerala govt: ಶಬರಿಮಲೆ ವರ್ಚುವಲ್ ಕ್ಯೂ ಬುಕ್ಕಿಂಗ್ ಮಿತಿ ಹೆಚ್ಚಳ
Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು
G20 Leaders Summit: ಪ್ರಧಾನಿ ಮೋದಿ ನೈಜೀರಿಯಾ, ಬ್ರೆಜಿಲ್, ಗಯಾನಾ ಪ್ರವಾಸ ಶುರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.