ಪಾಕ್ ದಾಳಿ: ಯೋಧ ಹುತಾತ್ಮ
Team Udayavani, Jan 19, 2018, 8:45 AM IST
ಶ್ರೀನಗರ: ಜಮ್ಮುವಿನಲ್ಲಿ ವಿವಿಧ ಪ್ರದೇಶಗಳಲ್ಲಿ ಪಾಕಿಸ್ಥಾನದ ಸೇನಾ ಪಡೆಗಳು ಬುಧವಾರ ರಾತ್ರಿಯಿಡೀ ನಡೆಸಿದ ಅಪ್ರಚೋದಿತ ಶೆಲ್ ದಾಳಿಯಲ್ಲಿ ಬಿಎಸ್ಎಫ್ ಯೋಧರೊಬ್ಬರು ಹುತಾತ್ಮರಾದರೆ, 17 ವರ್ಷದ ಯುವತಿಯೊಬ್ಬಳು ಮೃತಪಟ್ಟಿದ್ದಾರೆ. ಅಲ್ಲದೆ, ಇತರ ಆರು ಜನ ಗಾಯಗೊಂಡಿದ್ದಾರೆ.
ಆರ್ಎಸ್ ಪುರ, ಅರ್ನಿಯಾ ಮತ್ತು ರಾಮಗಢದಲ್ಲಿನ ಸೇನಾ ನೆಲೆಗಳ ಮೇಲೆ ಪಾಕ್ ಯೋಧರು ಬುಧವಾರ ತಡರಾತ್ರಿ ಹಠಾತ್ ದಾಳಿ ನಡೆಸಿದ್ದಾರೆ. ದಾಳಿ ಬೆಳಗ್ಗೆ ಆರು ಗಂಟೆಯವರೆಗೂ ನಿರಂತರವಾಗಿ ಮುಂದು ವರಿದಿತ್ತು. ಅನಂತರವೂ ಆಗಾಗ್ಗೆ ಗಡಿ ಯಾ ಚೆ ಗಿಂದ ಗುಂಡಿನ ದಾಳಿ ನಡೆಸಲಾ ಗಿದೆ ಎಂದು ಬಿಎಸ್ಎಫ್ ಮೂಲಗಳು ತಿಳಿಸಿವೆ. ಸುಮಾರು 20 ಹಳ್ಳಿಗಳನ್ನು ಗುರಿಯಾಗಿಸಿ ಈ ದಾಳಿ ನಡೆಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ವಿಪರೀತ ಪ್ರಮಾಣದಲ್ಲಿ ಗುಂಡಿನ ದಾಳಿ ನಡೆಯುತ್ತಿರುವುದರಿಂದ ಈ ಭಾಗದ ಬಿಎಸ್ಎಫ್ ಯೋಧರಿಗೆ ಅತೀವ ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.