ಉಗ್ರ ಮಸೂದ್ ಅಜರ್ ಪುತ್ರ,ಸಹೋದರನ ಬಂಧಿಸಿದ ಪಾಕಿಸ್ಥಾನ!
Team Udayavani, Mar 5, 2019, 12:24 PM IST
ಇಸ್ಲಮಾಬಾದ್ : ಪುಲ್ವಾಮಾ ಭೀಕರ ಉಗ್ರದಾಳಿಗೆ ಕಾರಣವಾದ ನಿಷೇಧಿತ ಜೈಷ್ ಎ ಮೊಹಮ್ಮದ್ ಉಗ್ರ ಸಂಘಟನೆಯ ವಿರುದ್ಧ ಜಾಗತಿಕ ಮಟ್ಟದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾದುದನ್ನು ಗಮನಿಸಿದ ಪಾಕಿಸ್ಥಾನ, ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್‌ನ ಸಹೋದರ ಮತ್ತು ಪುತ್ರನನ್ನು ಬಂಧಿಸಿದೆ.
ಮಸೂದ್ ಸಹೋದರನಾಗಿರುವ ಮುಫ್ತಿ ರೌಫ್ ಅಸ್ಘರ್, ಪುತ್ರ ಹಂಝ ಅಜರ್ ಅವರನ್ನು ಮಂಗಳವಾರ ಪಾಕ್ ಪೊಲೀಸರು ಕಸ್ಟಡಿಗೆ ಪಡೆದುಕೊಂಡಿದ್ದಾರೆ.
ಪಾಕ್‌ನ ಆಂತರಿಕ ವ್ಯವಹಾರಗಳ ರಾಜ್ಯ ಖಾತೆ ಸಚಿವ ಶಹರ್‌ಯಾರ್ ಅಫ್ರಿದಿ ಅವರು ಇಬ್ಬರ ಬಂಧನವನ್ನು ಖಚಿತ ಪಡಿಸಿದ್ದು, ಮಾತ್ರವಲ್ಲದೆ ಪುಲ್ವಮಾ ದಾಳಿಗೆ ಸಂಬಂಧಿಸಿ ಇದುವರೆಗೆ 44 ಮಂದಿಯನ್ನು ಬಂಧಿಸಿರುವುದಾಗಿ ತಿಳಿಸಿದ್ದಾರೆ.
ಪಾಕ್ ಭಾರತದ ಒತ್ತಡ ಮತ್ತು ಜಾಗತಿಕ ನಾಯಕರ ಪ್ರಶ್ನೆಗಳಿಗೆ ಸಿಲುಕಿ ಜೆಇಎಂನ 2 ನೇ ಪ್ರಮುಖನಾಗಿರುವ ರೌಫ್ ಅಸ್ಘರ್‌ನನ್ನು ಬಂಧಿಸಿರುವುದು ಸ್ಪಷ್ಟವಾಗಿದೆ.
ಹಲವು ರಾಷ್ಟ್ರಗಳು ಜೆಇಎಂ ವಿರುದ್ಧ ಕ್ರಮಕೈಗೊಳ್ಳುವಂತೆ ಎಚ್ಚರಿಕೆ ನೀಡಿದ ಬೆನ್ನಲ್ಲೇ ಮಣಿದ ಪಾಕ್ ಈ ಕ್ರಮ ಕೈಗೊಂಡು ಬಿಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳುವ ಯತ್ನ ಮಾಡಿದೆ.
ಫೆಬ್ರವರಿ 14 ರ ಪುಲ್ವಮಾ ದಾಳಿಯಲ್ಲಿ ರೌಫ್ ಮತ್ತು ಅಸ್ಘರ್ ಪ್ರಮುಖ ಪಾತ್ರ ವಹಿಸಿದ್ದರು ಎನ್ನುವುದು ಸ್ಪಷ್ಟವಾಗಿತ್ತು.
ನರಿ ಬುದ್ದಿ ?
ಅಂದ ಹಾಗೆ, ಬಂಧಿತರ ವಿರುದ್ಧ ಯಾವುದೇ ಆರೋಪಗಳಿಗೆ ಸಾಕ್ಷ್ಯ ದೊರಕದಿದ್ದರೆ, ಅವರೆಲ್ಲರನ್ನೂ ಬಿಡುಗಡೆ ಮಾಡುವುದಾಗಿ ಆಂತರಿಕ ಸಚಿವಾಲಯದ ಕಾರ್ಯದರ್ಶಿ ಹೇಳಿದ್ದಾರೆ.
ಇದೇ ವೇಳೆ ನಾವು ಭಾರತದ ಒತ್ತಡಕ್ಕಾಗಲಿ, ಜಾಗತಿಕ ಒತ್ತಡಕ್ಕಾಗಿ ಇವರನ್ನು ಬಂಧಿಸಿಲ್ಲ. ನಾವು ನಮ್ಮ ರಾಷ್ಟ್ರೀಯ ಕಾರ್ಯ ಯೋಜನೆ ಸಮಿತಿಯ ನಿರ್ಧಾರದಂತೆ ಈ ಕ್ರಮ ಕೈಗೊಂಡಿದ್ದೇವೆ ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Podcast;ನಾನು ದೇವರಲ್ಲ,ತಪ್ಪು ಮಾಡಿದ್ದೇನೆ: ಪ್ರಧಾನಿ ಹೇಳಿಕೆ ಡ್ಯಾಮೇಜ್ ಕಂಟ್ರೋಲ್ ಎಂದ ಕೈ
Mega Concert: Black ಮಾರ್ಕೆಟ್ ಟಿಕೆಟ್ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್ ವಜಾ
Maharashtra ವಿಧಾನಸಭೆಯಲ್ಲಿ ಬಿಜೆಪಿ ಗೆಲುವಿಗೆ ಆರ್ಎಸ್ಎಸ್ ಕಾರಣ: ಶರದ್ ಪವಾರ್
Henley Passport Index: ಸಿಂಗಾಪುರಕ್ಕೆ ಮೊದಲ ಸ್ಥಾನ: ಭಾರತದ ಪಾಸ್ಪೋರ್ಟ್ ಎಷ್ಟು ಸದೃಢ?
ಸೊಸೆಯಾಗಿ ಬರಬೇಕಾಗಿದ್ದವಳನ್ನೇ ಮದುವೆಯಾದ ಅಪ್ಪ… ಬೇಸರದಿಂದ ಸನ್ಯಾಸಿಯಾಗಲು ಹೊರಟ ಮಗ
MUST WATCH
ಹೊಸ ಸೇರ್ಪಡೆ
Sachin Panchal Case: ರಾಜು ಕಪನೂರ ಸೇರಿ ಐವರ ಸಿಐಡಿ ವಿಚಾರಣೆ
Podcast;ನಾನು ದೇವರಲ್ಲ,ತಪ್ಪು ಮಾಡಿದ್ದೇನೆ: ಪ್ರಧಾನಿ ಹೇಳಿಕೆ ಡ್ಯಾಮೇಜ್ ಕಂಟ್ರೋಲ್ ಎಂದ ಕೈ
SSLC-PUC Exam: ಪರೀಕ್ಷಾ ವೇಳಾಪಟ್ಟಿ ಪ್ರಕಟ: ವಿದ್ಯಾರ್ಥಿಗಳು ಗಮನಿಸಿ
INDWvsIREW: ಪ್ರತಿಕಾ ರಾವಲ್ ಭರ್ಜರಿ ಬ್ಯಾಟಿಂಗ್; ಐರ್ಲೆಂಡ್ ವಿರುದ್ದ ಸರಣಿ ಶುಭಾರಂಭ
Mega Concert: Black ಮಾರ್ಕೆಟ್ ಟಿಕೆಟ್ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್ ವಜಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.