ಆಫ್ಘನ್‌ನಲ್ಲಿ ಹೆಚ್ಚುತ್ತಿವೆ ಉಗ್ರ ತರಬೇತಿ ಶಿಬಿರಗಳು!
ಲಷ್ಕರ್,ಜೈಶ್‌ನಿಂದ 11 ಕ್ಯಾಂಪ್ ಗಳು
Team Udayavani, May 31, 2022, 6:50 AM IST
ನವದೆಹಲಿ: ಪಾಕಿಸ್ತಾನ ಮೂಲದ ಜೈಶ್-ಎ-ಮೊಹಮ್ಮದ್ ಮತ್ತು ಲಷ್ಕರ್-ಎ-ತೊಯ್ಬಾದ ನೂರಾರು ಉಗ್ರರು ಇನ್ನೂ ಅಫ್ಘಾನಿಸ್ತಾನದಲ್ಲಿದ್ದು, ಈ ಎರಡೂ ಸಂಘಟನೆಗಳ ಕನಿಷ್ಠ 11 ಉಗ್ರ ತರಬೇತಿ ಕೇಂದ್ರಗಳು ಕುನಾರ್ ಮತ್ತು ನಂಗರ್‌ಹಾರ್ ಪ್ರಾಂತ್ಯದಲ್ಲಿವೆ.
ತಾಲಿಬಾನ್ ನಿರ್ಬಂಧದ ಮೇಲೆ ನಿಗಾ ಇಟ್ಟಿರುವ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ತಂಡದ ವರದಿಯು ಈ ಆಘಾತಕಾರಿ ಅಂಶಗಳನ್ನು ಬಹಿರಂಗಪಡಿಸಿದೆ. ಕಳೆದ ವರ್ಷದ ಆಗಸ್ಟ್‌ನಲ್ಲಿ ಆಫ್ಘನ್ ಅನ್ನು ತಾಲಿಬಾನ್ ವಶಕ್ಕೆ ಪಡೆದ ನಂತರದಲ್ಲಿ ಈ ತಂಡ ಸಲ್ಲಿಸಿದ ಮೊದಲ ವರದಿ ಇದಾಗಿದೆ.
ಜೆಇಎಂ ಮತ್ತು ಲಷ್ಕರ್‌ನ ನೂರಾರು ಉಗ್ರರು ಆಫ್ಘನ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ನಂಗರ್‌ಹಾರ್ ಪ್ರಾಂತ್ಯದಲ್ಲಿ ಜೆಇಎಂ 8 ತರಬೇತಿ ಕ್ಯಾಂಪ್‌ಗ್ಳನ್ನು ಹೊಂದಿದೆ. ಈ ಪೈಕಿ ಮೂರು ಶಿಬಿರಗಳು ನೇರವಾಗಿ ತಾಲಿಬಾನ್ ನಿಯಂತ್ರಣದಲ್ಲಿವೆ ಎಂದೂ ವರದಿ ಹೇಳಿದೆ.
ಇನ್ನು ನಂಗರ್‌ಹಾರ್‌ನ ಹಸ್ಕಾ ಮೆನಾ ಜಿಲ್ಲೆಯಲ್ಲಿರುವ ಲಷ್ಕರ್‌ನ ಉಗ್ರ ತರಬೇತಿ ಕ್ಯಾಂಪ್‌ಗೆ ಕಳೆದ ಜನವರಿಯಲ್ಲಷ್ಟೇ ತಾಲಿಬಾನ್ ನಿಯೋಗವೊಂದು ಭೇಟಿ ನೀಡಿತ್ತು. ಇದು ತಾಲಿಬಾನ್ ಜೊತೆ ಜೆಇಎಂ ಮತ್ತು ಲಷ್ಕರ್ ನಂಟು ಹೊಂದಿರುವುದನ್ನು ಸ್ಪಷ್ಟಪಡಿಸಿದೆ ಎಂದಿದೆ ವರದಿ.
ಆಫ್ಘನ್ ನಿಂದ ಕಾಶ್ಮೀರದತ್ತ…?
ಅಲ್‌ಖೈದಾ ಉಗ್ರ ಸಂಘಟನೆಯ ಭಾರತೀಯ ಉಪಖಂಡದ (ಎಕ್ಯೂಐಎಸ್) ನಿಯತಕಾಲಿಕೆಯ ಹೆಸರನ್ನು ಬದಲಿಸಿರುವುದು ಹೊಸ ಅನುಮಾನಗಳಿಗೆ ಕಾರಣವಾಗಿದೆ. “ನವಾ-ಇ ಆಫ^ನ್ ಜಿಹಾದ್’ ಎಂದಿದ್ದ ನಿಯತಕಾಲಿಕೆಯ ಹೆಸರನ್ನು “ನವಾ-ಇ-ಗಜ್ವಾ-ಎ-ಹಿಂದ್’ ಎಂದು ಬದಲಿಸಲಾಗಿದೆ. ಇದು ಎಕ್ಯೂಐಎಸ್ ಉಗ್ರ ಸಂಘಟನೆಯು ಆಫ^ನ್‌ನಿಂದ ಹೊರಬಂದು ಕಾಶ್ಮೀರದಲ್ಲಿ ನೆಲೆಗೊಳ್ಳಲು ಸಿದ್ಧವಾಗಿದೆಯೇ ಎಂಬ ಪ್ರಶ್ನೆ ಮೂಡಿಸಿದೆ. ಈಗಾಗಲೇ ಅಫ್ಘಾನಿಸ್ತಾನದಲ್ಲಿ ಈ ಸಂಘಟನೆಯ ಪ್ರಭಾವ ಮತ್ತು ಕಾರ್ಯಚಟುವಟಿಕೆ ತಗ್ಗುತ್ತಿದೆ.
ಸಂಘಟನೆಯಲ್ಲಿ 180-400 ಹೋರಾಟಗಾರರು ಇದ್ದಾರೆ. ಅವರ ಮೂಲ ಭಾರತ, ಬಾಂಗ್ಲಾದೇಶ, ಮಯೆನ್ಮಾರ್, ಪಾಕಿಸ್ತಾನವಾಗಿದೆ. 2019ರ ಏಪ್ರಿಲ್‌ನಲ್ಲಿ ಶ್ರೀಲಂಕಾದಲ್ಲಿ ನಡೆದ ದಾಳಿಯ ಬಳಿಕ ಈ ನಿಯತಕಾಲಿಕೆಯು, “ಕಾಶ್ಮೀರದಲ್ಲಿ ಜಿಹಾದ್‌ಗೆ ಜವಾಹಿರಿ ಕರೆ ಕೊಟ್ಟಿದ್ದ’ ಎಂಬುದನ್ನು ನೆನಪಿಸಿತ್ತು. ಈ ಎಲ್ಲ ಬೆಳವಣಿಗೆಗಳು, ಅಲ್‌ಖೈದಾವು ಕಾಶ್ಮೀರದಲ್ಲಿ ಸಕ್ರಿಯಗೊಳ್ಳಲು ಪ್ರಯತ್ನಿಸುತ್ತಿರುವ ಸುಳಿವು ನೀಡಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.