ಹಳೆ ತಂತ್ರಗಾರಿಕೆ ಬದಲಿಸಿದ ಪಾಕ್
ಐಎಸ್‌ಐ ರಣತಂತ್ರದ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ
Team Udayavani, Oct 20, 2021, 7:20 AM IST
ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದನೆ ನಡೆಸುತ್ತಿರುವ ಪಾಕಿಸ್ಥಾನ, ಅದಕ್ಕಾಗಿ ತಾನು ಈವರೆಗೆ ಪಾಲಿಸುತ್ತಿದ್ದ ಎಲ್ಲ ರೀತಿಯ ತಂತ್ರಗಳನ್ನು ಬದಲಾಯಿಸಿದೆ ಎಂದು ಭಾರತೀಯ ಗುಪ್ತಚರ ಇಲಾಖೆ, ಕೇಂದ್ರ ಸರಕಾರಕ್ಕೆ ಮಾಹಿತಿ ಸಲ್ಲಿಸಿದೆ.
ಹೀಗೆ ತಂತ್ರಗಾರಿಕೆ ಬದಲಾಯಿಸು ವುದರ ಹಿಂದೆ ಪಾಕಿಸ್ಥಾನಕ್ಕೆ ಎರಡು ಉದ್ದೇಶ ಗಳಿವೆ. ಕಣಿವೆಯಲ್ಲಿ ಇತ್ತೀ ಚಿಗೆ ಇಳಿಕೆಯಾ ಗಿದ್ದ ಭಯೋತ್ಪಾದನೆ ಇನ್ನೂ ಜೀವಂತ ವಾಗಿದೆ ಎಂಬುದರ ಬಗ್ಗೆ ಕಾಶ್ಮೀರಿ ಯುವಕರಿಗೆ ಸ್ಪಷ್ಟ ಸಂದೇಶ ರವಾನಿಸುವುದು ಹಾಗೂ ಅವ ರನ್ನು ಅದರತ್ತ ಆಕರ್ಷಿಸುವುದು ಎಂದು ಗುಪ್ತಚರ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇನ್ನೊಂದು ಉದ್ದೇಶವೆಂದರೆ – ಕಾಶ್ಮೀರದಲ್ಲಿ ಶಾಶ್ವತವಾಗಿ ನೆಲೆಸಲು ಬರುವ ಇತರ ರಾಜ್ಯಗಳ ವ್ಯಕ್ತಿಗಳನ್ನು ಕೊಲ್ಲುವ ಮೂಲಕ ಅನ್ಯ ರಾಜ್ಯಗಳ ನಾಗರಿಕರಲ್ಲಿ ಭಯ ಬಿತ್ತುವುದು ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
“ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದಾಗಿ, ಆ ರಾಜ್ಯ ಇತರ ರಾಜ್ಯಗಳಂತೆ ದೇಶದ ಎಲ್ಲ ಜನರ ವಾಸಸ್ಥಳವಾಗಿ ಮುಕ್ತವಾಗಿ ತೆರೆಯಲ್ಪಟ್ಟಿದೆ. ಇದನ್ನು ಸಹಿಸದ ಪಾಕಿಸ್ಥಾನ, ಅನ್ಯ ರಾಜ್ಯಗಳಿಂದ ಕಣಿವೆಯಲ್ಲಿ ಬಂದು ನೆಲೆ ಯೂರುವವರಲ್ಲಿ ಭೀತಿ ಹುಟ್ಟಿಸಲು ನಿರ್ಧರಿಸಿದೆ.
ಇದನ್ನೂ ಓದಿ:ಬಾಂಗ್ಲಾ ಹಿಂದುಗಳ ರಕ್ಷಣೆಗೆ ಸಿಎಎ ಬೇಕು: ಕಾಂಗ್ರೆಸ್ ನಾಯಕ ಮಿಲಿಂದ್ ದೇವ್ರಾ!
ಹಾಗಾಗಿಯೇ, ಅಲ್ಲಿ ಇತ್ತೀಚೆಗೆ ನಡೆದ ಉಗ್ರರ ದಾಳಿಗಳ ವೇಳೆ, ಅನ್ಯ ರಾಜ್ಯಗಳಿಂದ ಬಂದಿರುವ ಕೂಲಿಕಾರ್ಮಿ ಕರು, ಬೀದಿ ವ್ಯಾಪಾರಿಗಳನ್ನು ಕೊಲ್ಲಲಾಗಿದೆ. ಅ. 2ರಂದು ಶ್ರೀನಗರದ ಮುಖ್ಯ ಮಾರುಕಟ್ಟೆಯಲ್ಲಿ ಔಷಧ ಅಂಗಡಿ ಮಾಲಕ ಎಂ.ಎಲ್. ಬಿಂದ್ರೂ ಹಾಗೂ ಒಬ್ಬ ಮುಸ್ಲಿಂ ವ್ಯಕ್ತಿಯನ್ನು ಕೊಂದಿದ್ದು, ರಾಷ್ಟ್ರಾದ್ಯಂತ ಇರುವ ಎಲ್ಲ ಮಾಧ್ಯಮಗಳಲ್ಲಿ ಪ್ರಕಟ ವಾಗಿತ್ತು. ಇದು ಸಹಜವಾಗಿಯೇ ದೇಶದ ಇತರ ಭಾಗಗಳಲ್ಲಿ ಭಯ ಬಿತ್ತಿದೆ. ಇದೇ ರೀತಿಯ ಭೀತಿ ಹೆಚ್ಚಾಗಬೇಕು ಎಂಬುದು ಪಾಕಿಸ್ಥಾನದ ಉದ್ದೇಶ. ಇದು ಸಾಲದೆಂಬಂತೆ ಮತ್ತಷ್ಟು ದಾಳಿಗಳನ್ನು ನಡೆಸಿರುವ ಅವರು ಇತ್ತೀಚೆಗೆ ಬಿಹಾರದಿಂದ ಬಂದಿದ್ದ ಕೂಲಿ ಕಾರ್ಮಿಕರನ್ನು ಕೊಂದಿದ್ದಾರೆ. ಇವೆೆಲ್ಲವೂ ಅನ್ಯ ರಾಜ್ಯಗಳ ಜನರು ಶಾಶ್ವತವಾಗಿ ನೆಲೆ ಯೂರಲು ಕಾಶ್ಮೀರಕ್ಕೆ ಬರದಂತೆ ತಡೆಯಲು ಮಾಡುತ್ತಿರುವ ಪ್ರಯತ್ನಗಳು’ ಎಂದು ಅವರು ತಿಳಿಸಿದ್ದಾರೆ.
ಇದಲ್ಲದೆ ಇತ್ತೀಚೆಗೆ ಕಣಿವೆಯಲ್ಲಿ ನಡೆದ ಗುಂಡಿನ ಚಕಮಕಿ ಪ್ರಕರಣಗಳಲ್ಲಿ ಹುತಾತ್ಮ ರಾದ ಭಾರತೀಯ ಯೋಧರ ಸಾವಿನ ಹಿಂದೆ ಪಾಕಿಸ್ಥಾನದಿಂದ ಗಡಿ ನಿಯಂತ್ರಣ ರೇಖೆಯ ಮೂಲಕ ಭಾರತದೊಳಕ್ಕೆ ನುಸುಳಿದ ಉಗ್ರರೇ ಕಾರಣ ಎಂಬುದಕ್ಕೆ ಅನೇಕ ಸಾಕ್ಷಿಗಳಿವೆ ಎಂದು ತಿಳಿಸಿದ್ದಾರೆ.
ಯುವಕರೇ ಅಪಾಯವಾಗುವ ಸಾಧ್ಯತೆ
ಇದೇ ವೇಳೆ, ಜಮ್ಮು ಕಾಶ್ಮೀರದ ಸ್ಥಳೀಯ ಯುವಕರನ್ನು ಕಾಶ್ಮೀರ ಭಯೋತ್ಪಾದನೆಯತ್ತ ಆಕರ್ಷಿಸಲು ಪಾಕಿಸ್ಥಾನ ಇನ್ನಿಲ್ಲದ ಹೊಸ ಪ್ರಯತ್ನಗಳನ್ನು ಮಾಡುತ್ತದೆ ಎಂದು ಗುಪ್ತಚರ ಇಲಾಖೆ ತಿಳಿಸಿದೆ. ಈಗಾಗಲೇ ಪಾಕಿಸ್ಥಾನದಲ್ಲಿ ಹೊಸ ಯುವಕರ ಸಂಘಟನೆಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿರುವ ಪಾಕಿಸ್ಥಾನ, ಮುಂದೆ ಅವರನ್ನು ಭಾರತದ ಶಕ್ತಿಶಾಲಿ ಉಗ್ರರನ್ನಾಗಿಸಲು ಯೋಜಿಸಿದೆ. ಹೀಗಾದರೆ ಮುಂದೆ ಈ ಯುವಕರೇ ಭಾರತದ ಪಾಲಿಗೆ ಅಪಾಯಕಾರಿಯಾಗಲಿದ್ದಾರೆ ಎಂದು ಇಲಾಖೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
Umar Khalid: ದೆಹಲಿ ಗಲಭೆ ಪ್ರಕರಣದ ಆರೋಪಿ ಉಮರ್ ಖಾಲಿದ್‌ಗೆ 7 ದಿನಗಳ ಮಧ್ಯಂತರ ಜಾಮೀನು
Loksabha:ಕಾಂಗ್ರೆಸ್ ಅಂಬೇಡ್ಕರ್ ಗೆ ಹಲವು ಬಾರಿ ಅವಮಾನ ಮಾಡಿದೆ: ಪ್ರಧಾನಿ ಮೋದಿ ತಿರುಗೇಟು
SC;ಪ್ರಕರಣಗಳ ವರ್ಗಾವಣೆ:ಪ್ರತಿಕ್ರಿಯಿಸಲು ಯಾಸಿನ್ ಮಲಿಕ್ ಸೇರಿ ಐವರಿಗೆ 2 ವಾರ ಕಾಲಾವಕಾಶ
ರಿವರ್ಸ್ ತೆಗೆಯುವಾಗ ಸಮುದ್ರಕ್ಕೆ ಬಿದ್ದ ಕಾರು… ನೌಕಾಪಡೆ ಅಧಿಕಾರಿ ಪಾರು, ಚಾಲಕ ನಾಪತ್ತೆ
MUST WATCH
ಹೊಸ ಸೇರ್ಪಡೆ
One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?
Bollywood: ಬಾಲಿವುಡ್ ನಟ ಶಾಹಿದ್ ಕಪೂರ್ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?
Water: ನಾನು ನೀರು ನಾನಿಲ್ಲದೇ ಜಗತ್ತಿಲ್ಲ
Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
Order: ಗ್ಯಾಸ್ ಸೋರಿಕೆ ಅವಘಡ: ಪೋಷಕರ ಕಳೆದುಕೊಂಡ ಪುತ್ರಿಗೆ 28 ಲಕ್ಷ ರೂ.ಪರಿಹಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.