ಮೋದಿ ಜತೆ ಪಾಕ್ ಅಧಿಕೃತ ಹೊಂದಾಣಿಕೆ, ಅವರಿಗೆ ಮತ ಹಾಕಿದರೆ ಪಾಕಿಗೆ ಮತ : ಕಾಂಗ್ರೆಸ್
Team Udayavani, Apr 10, 2019, 12:13 PM IST
ಹೊಸದಿಲ್ಲಿ : ‘ಮಾಧ್ಯಮ ವರದಿಯೊಂದರ ಪ್ರಕಾರ ಪಾಕಿಸ್ಥಾನವು ಪ್ರಧಾನಿ ನರೇಂದ್ರ ಮೋದಿ ಅವರ ಜತೆಗೆ ಹೊಂದಾಣಿಕೆ ಮಾಡಿಕೊಂಡಿದೆ; ಅಂತಿರುವಾಗ ಮೋದಿಗೆ ಓಟ್ ಹಾಕಿದರೆ ಪಾಕಿಸ್ಥಾನಕ್ಕೆ ಓಟ್ ಹಾಕಿದ ಹಾಗೆ ಅಗುತ್ತದೆ’ ಎಂದು ಕಾಂಗ್ರೆಸ್ ಇಂದು ಬುಧವಾರ ಆರೋಪಿಸಿದೆ.
‘ಮೋದಿ ಅವರ ಭಾರತೀಯ ಜನತಾ ಪಕ್ಷ 2019ರ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬಂದರೆ ಭಾರತದೊಂದಿಗೆ ಶಾಂತಿ ಮಾತುಕತೆಗೆ ಉತ್ತಮ ಅವಕಾಶ ಒದಗುತ್ತದೆ ಮತ್ತು ಕಾಶ್ಮೀರ ಪ್ರಶ್ನೆಯನ್ನು ಇತ್ಯರ್ಥ ಮಾಡುವುದಕ್ಕೆ ಸಾಧ್ಯವಾಗುತ್ತದೆ’ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿರುವುದನ್ನು ಮಾಧ್ಯಮಗಳು ವರದಿ ಮಾಡಿವೆ ಎಂದು ಹೇಳಿರುವ ಕಾಂಗ್ರೆಸ್ ಮುಖ್ಯ ವಕ್ತಾರ ರಣದೀಪ್ ಸುರ್‌ಜೇವಾಲಾ ಅವರು, ‘ಪಾಕಿಸ್ಥಾನ ಮೋದಿ ಜತೆ ಹೊಂದಾಣಿಕೆ ಮಾಡಿಕೊಂಡಿರುವುದಕ್ಕೆ ಮಾಧ್ಯಮ ವರದಿ ಸಾಕ್ಷಿಯಾಗಿದೆ’ ಎಂದು ಹೇಳಿದರು.
ಇಮ್ರಾನ್ ಖಾನ್ ಮುಂದುವರಿದು, ‘ಕಾಶ್ಮೀರ ಪ್ರಶ್ನೆಯನ್ನು ಇತ್ಯರ್ಥಪಡಿಸಲು ಭಾರತದ ಇತರ ಪಕ್ಷಗಳು ಯತ್ನಿಸಿದಲ್ಲಿ ಬಲಪಂಥೀಯರ ಟೀಕೆ, ಖಂಡನೆಗಳಿಗೆ ತುತ್ತಾಗಬೇಕಾದೀತೆಂಬ ಭಯ ಅವುಗಳಿಗೆ ಇದೆ ‘ ಎಂದು ಹೇಳಿದರು.
ಈ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಸುರ್‌ಜೇವಾಲಾ ಅವರು “ಪಾಕಿಸ್ಥಾನ ಮೋದಿ ಜತೆಗೆ ಅಧಿಕೃತ ಹೊಂದಾಣಿಕೆ ಮಾಡಿಕೊಂಡಿದೆ; ಮೋದಿಗೆ ಓಟ್ ಹಾಕಿದರೆ ಪಾಕಿಸ್ಥಾನಕ್ಕೆ ಓಟ್ ಹಾಕಿದ ಹಾಗೆ’ ಎಂದು ಟೀಕಿಸಿದ್ದಾರೆ.
“ಮೋದೀ ಜೀ ಮೊದಲು ನಿಮಗೆ ನವಾಜ್ ಷರೀಫ್ ಮೇಲೆ ಪ್ರೀತಿ ಉಂಟಾಯಿತು; ಈಗ ನಿಮ್ಮ ಪ್ರಿಯ ಸ್ನೇಹಿತ ಇಮ್ರಾನ್ ಖಾನ್ ಮೇಲೆ; ಸತ್ಯವಂತೂ ಈಗ ಬಹಿರಂಗವಾಗಿದೆ’ ಎಂದು ಸುರ್‌ಜೇವಾಲಾ ತಮ್ಮ ಟ್ವೀಟ್‌ನಲ್ಲಿ ವ್ಯಂಗ್ಯವಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hotel Room: ಹೋಟೆಲ್ ಕೊಠಡಿಯಲ್ಲೇ ವೈದ್ಯನ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ
Aligarh ಮುಸ್ಲಿಮ್ ವಿವಿ ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ
Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹ*ತ್ಯೆ
Maharashtra: ಮತ ನೀಡಿದರೆ ಮದುವೆ ಮಾಡಿಸುವೆ: ಶರದ್ ಬಣದ ನಾಯಕ
India-Afghanistan: ಆಫ್ಘನ್ ಜೊತೆಗೆ ಬಾಂಧವ್ಯ ಪುನಃಸ್ಥಾಪನೆಗೆ ಭಾರತ ಸಜ್ಜು?
MUST WATCH
ಹೊಸ ಸೇರ್ಪಡೆ
Karkala: ಡಾ. ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆಯಲ್ಲಿ 24*7 ಸಿಟಿ ಸ್ಕ್ಯಾನ್ ಸೌಲಭ್ಯ ಉದ್ಘಾಟನೆ
Manipal: ಡಿಸಿ ಕಚೇರಿ ಆವರಣದಲ್ಲೂ ಬೀದಿನಾಯಿ ಉಪಟಳ
Malpe: ಕೋಡಿಬೆಂಗ್ರೆ-ಹಂಗಾರಕಟ್ಟೆ ಸಂಪರ್ಕ ಇನ್ನು ದೂರ
Hotel Room: ಹೋಟೆಲ್ ಕೊಠಡಿಯಲ್ಲೇ ವೈದ್ಯನ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ
Bengaluru: ಬೆಂಗಳೂರಲ್ಲಿ ಶೀಘ್ರ ಪ್ರತಿ ಕೆಜಿ ಈರುಳ್ಳಿ ಬೆಲೆ 100?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.