![naki](https://www.udayavani.com/wp-content/uploads/2025/02/naki-415x221.png)
![naki](https://www.udayavani.com/wp-content/uploads/2025/02/naki-415x221.png)
Team Udayavani, Nov 30, 2018, 5:42 PM IST
ಹೊಸದಿಲ್ಲಿ : ”ಭಾರತದೊಂದಿಗೆ ಉತ್ತಮ ಬಾಂಧವ್ಯ ಹೊಂದಬೇಕಿದ್ದರೆ ಪಾಕಿಸ್ಥಾನ ಸೆಕ್ಯುಲರ್ (ಮತ ನಿರಪೇಕ್ಷ) ದೇಶವಾಗಬೇಕಾಗುತ್ತದೆ; ಆದರೆ ಪಾಕಿಸ್ಥಾನ ಈಗಾಗಲೇ ಇಸ್ಲಾಮಿಕ್ ದೇಶವಾಗಿದೆ” ಎಂದು ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದಾರೆ.
“ನಮ್ಮದು (ಭಾರತ) ಮತ ನಿರಪೇಕ್ಷ ದೇಶ; ಆದರೆ ಪಾಕಿಸ್ಥಾನ ಇಸ್ಲಾಮಿಕ್ ದೇಶ. ಭಾರತದೊಂದಿಗೆ ಉತ್ತಮ ಬಾಂಧವ್ಯ ಹೊಂದಬೇಕಿದ್ದರೆ ಪಾಕಿಸ್ಥಾನ ನಮ್ಮಂತೆಯೇ ಸೆಕ್ಯುಲರ್ ದೇಶವಾಗಬೇಕಾಗುತ್ತದೆ; ಒಂದೊಮ್ಮೆ ಅದು ಹಾಗೆ ಆಗುವುದಿದ್ದರೆ ಖಂಡಿತವಾಗಿಯೂ ಅವಕಾಶ ಇರುತ್ತದೆ” ಎಂದು ರಾವತ್ ಹೇಳಿದರು.
“ಭಾರತದೊಂದಿಗೆ ಶಾಂತಿ, ಸಾಮರಸ್ಯದ ಉತ್ತಮ ದ್ವಿಪಕ್ಷೀಯ ಸಂಬಂಧ ಬೇಕು ಎಂಬ ಪಾಕ್ ಹೇಳಿಕೆಯಲ್ಲಿ ವೈರುಧ್ಯವಿದೆ. ಪಾಕಿಸ್ಥಾನ ಒಂದು ಹೆಜ್ಜೆ ಧನಾತ್ಮಕವಾಗಿ ಇಡಬೇಕಾಗುತ್ತದೆ ಮತ್ತು ಅದರ ಸತ್ಪರಿಣಾಮವನ್ನು ನಾವು ವಾಸ್ತವದಲ್ಲಿ ಕಾಣುವಂತಿರಬೇಕಾಗುತ್ತದೆ. ಅಲ್ಲಿಯ ವರೆಗೆ ನಮ್ಮ ದೇಶದ ನೀತಿ ಸ್ಪಷ್ಟವಿರುತ್ತದೆ. ಅದೆಂದರೆ, ಭಯೋತ್ಪಾದನೆ ಮತ್ತು ಮಾತುಕತೆ ಜತೆಜತೆಗೆ ಸಾಗುವಂತಿಲ್ಲ” ಎಂದು ರಾವತ್ ಹೇಳಿದರು.
You seem to have an Ad Blocker on.
To continue reading, please turn it off or whitelist Udayavani.