ಪ್ರಧಾನಿ ಮೋದಿ ಜತೆ ಪಾಕ್ PM ಇಮ್ರಾನ್ ಫೋನ್ ಮಾತುಕತೆ ಸಂಭವ ?
Team Udayavani, Feb 28, 2019, 10:43 AM IST
ಹೊಸದಿಲ್ಲಿ : ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಫೋನ್ ಕರೆ ಮಾಡಿ ಉಭಯ ದೇಶಗಳ ನಡುವಿನ ಸಂಭವನೀಯ ಸಮರ ಉದ್ವಿಗ್ನತೆ ಮತ್ತು ಬಿಕ್ಕಟ್ಟನ್ನು ಶಮನಗೊಳಿಸುವ ನಿಟ್ಟಿನಲ್ಲಿ ಮಾತುಕತೆ ನಡೆಸುವ ಸಂಭವವಿದೆ ಎಂದು ಪಾಕ್ ಮೂಲಗಳನ್ನು ಉಲ್ಲೇಖೀಸಿ ನ್ಯೂಸ್ 18 ವರದಿ ಮಾಡಿದೆ.
ಇದೇ ವೇಳೆ ಭಾರತದ ವಿದೇಶ ವ್ಯವಹಾರಗಳ ಕಾರ್ಯಾಲಯದ ಹೊರಗೆ ಜರ್ಮನಿ, ಡೊಮಿನಿಕನ್ ರಿಪಬ್ಲಿಕ್, ನೈಜೀರಿಯ, ದಕ್ಷಿಣ ಆಫ್ರಿಕ ಮತ್ತು ಬೆಲ್ಜಿಯಂ ಸೇರಿದಂತೆ ಹತ್ತು ದೇಶಗಳ ವಿದೇಶ ಕಾರ್ಯದರ್ಶಿಗಳು ಸೇರಿರುವ ದೃಶ್ಯ ಈಗ ಕಂಡುಬಂದಿದ್ದು ಭಾರತದ ವಿದೇಶ ಕಾರ್ಯದರ್ಶಿ ಭಾರತ-ಪಾಕ್ ಉದ್ವಿಗ್ನತೆಯ ತಾಜಾ ವಿವರಗಳನ್ನು, ಮಾಹಿತಿಗಳನ್ನು ಅವರಿಗೆ ನೀಡಿದ್ದಾರೆ ಎಂದು ವರದಿಗಳು ತಿಳಿಸಿವೆ.
ಭಾರತ ಮತ್ತು ಪಾಕಿಸ್ಥಾನ ಈ ನಿರ್ಣಾಯಕ ಹಂತದಲ್ಲಿ ತಮ್ಮೊಳಗಿನ ಉದ್ವಿಗ್ನ ಸನ್ನಿವೇಶವನ್ನು ಬಗೆಹರಿಸುವ ಮಾತುಕತೆ ಮಾರ್ಗವನ್ನು ಕಂಡು ಕೊಳ್ಳಬೇಕು ಎಂದು ವಿದೇಶಿ ರಾಜತಾಂತ್ರಿಕರು ಅಭಿಪ್ರಾಯಪಟ್ಟಿದ್ದಾರೆ.
ಎರಡೂ ದೇಶಗಳ ಸೇನೆ ತಮ್ಮ ಮಿಲಿಟರಿ ವೃತ್ತಿಪರತೆಯನ್ನು ಪ್ರದರ್ಶಿಸಿವೆ; ಆದುದರಿಂದ ಈ ಹಂತದಲ್ಲಿ ಎರಡೂ ದೇಶಗಳು ಈ ಉದ್ವಿಗ್ನತೆಯನ್ನು ಹೆಚ್ಚಿಸಲು ಬಿಡುವುದು ಸರಿಯಲ್ಲ ಎಂಬ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ
Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ
Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’
ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್ಎಫ್ ಮಾದರಿಯಲ್ಲಿ ವಿಶೇಷ ಪೊಲೀಸ್ ಪಡೆ
Hassan: ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕ್ಯ ಮೆರೆದ ಕಾರ್ಮಿಕನ ಕುಟುಂಬ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.