Pakistan; ಖೈಬರ್ ಪ್ರಾಂತದಲ್ಲಿ 9 ಭಯೋತ್ಪಾದಕರ ಹ*ತ್ಯೆ
Team Udayavani, Oct 25, 2024, 2:03 AM IST
ಪೇಶಾವರ: ಪಾಕಿಸ್ಥಾನದ ಗಲಭೆಪೀಡಿತ ಖೈಬರ್ ಪಖ್ತುಂಖ್ವಾ ಪ್ರಾಂತದ ವಾಯವ್ಯ ಭಾಗದಲ್ಲಿ 9 ಉಗ್ರರನ್ನು ಹತ್ಯೆ ಮಾಡಲಾಗಿದೆ. ಈ ಪೈಕಿ ಭದ್ರತೆಗೆ ತೀವ್ರ ಅಪಾಯಕಾರಿಗಳಾಗಿ ಪರಿಣಮಿಸಿದ್ದ ಉಗ್ರರು ಹಾಗೂ ಅವರ ನಾಯಕ ಮತ್ತು ಇಬ್ಬರು ಆತ್ಮಾಹುತಿ ಬಾಂಬರ್ಗಳು ಕೂಡ ಸೇರಿದ್ದಾರೆ. ಗುಪ್ತಚರ ಮೂಲ ಆಧರಿಸಿ ಬುಧವಾರ ತಡರಾತ್ರಿ ಹೊತ್ತಿಗೆ ಭದ್ರತಾ ಪಡೆಗಳು ದಾಳಿ ನಡೆಸಿದವು. ಖೈಬರ್ ಪಖ್ತುಂಖ್ವಾದ ಬಜಾರ್ ದೀರ್ ಜಿಲ್ಲೆಯ ಗಡಿಭಾಗದಲ್ಲಿ ತೀವ್ರ ಗುಂಡಿನ ಚಕಮಕಿಯ ಬಳಿಕ ಉಗ್ರರು ಸಾವನ್ನಪ್ಪಿದರು ಎನ್ನಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.