ಮುಂಬೈ ಟೆರರ್ ಅಟ್ಯಾಕ್ : ಹನ್ನೊಂದು ಉಗ್ರರು ತನ್ನ ದೇಶದವರು ಎಂದು ಒಪ್ಪಿಕೊಂಡ ಪಾಕಿಸ್ತಾನ!
ಹಫೀಜ್ ಸಯೀದ್, ಮಸೂದ್ ಅಜರ್ ಅಥವಾ ದಾವೂದ್ ಇಬ್ರಾಹಿಂ ಹೆಸರು ಉಲ್ಲೇಖಿಸಿಲ್ಲ ಎಂದು ವರದಿ ಹೇಳಿದೆ.
Team Udayavani, Nov 11, 2020, 4:37 PM IST
ನವದೆಹಲಿ: 26/11 ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಶಾಮೀಲಾಗಿದ್ದ ಹನ್ನೊಂದು ಮಂದಿ ಉಗ್ರರು ತಮ್ಮ ದೇಶಕ್ಕೆ ಸೇರಿದವರು ಎಂಬುದಾಗಿ ಪಾಕಿಸ್ತಾನದ ಉನ್ನತ ತನಿಖಾ ಸಂಸ್ಥೆಯಾದ ಫೆಡರಲ್ ಇನ್ವೆಸ್ಟಿಗೇಶನ್ ಏಜೆನ್ಸಿ(ಎಫ್ ಐಎ) ಬುಧವಾರ (ನವೆಂಬರ್ 11,2020) ಒಪ್ಪಿಕೊಂಡಿರುವುದಾಗಿ ವರದಿ ತಿಳಿಸಿದೆ.
2008ರಲ್ಲಿ ನಡೆದ ಭಯೋತ್ಪಾದಕ ದಾಳಿ ಕುರಿತ ಸುಮಾರು 880 ಪುಟಗಳ ಪಟ್ಟಿಯಲ್ಲಿ, ಮುಹಮ್ಮದ್ ಅಮ್ಜದ್ ಖಾನ್ ಹೆಸರು ಉಲ್ಲೇಖವಾಗಿದ್ದು, ಈತ 2008ರ ಭಯೋತ್ಪಾದಕ ದಾಳಿ ನಡೆಸಲು ನಿಟ್ಟಿನಲ್ಲಿ ಅಲ್ ಫೌಜ್ ಎಂಬ ಬೋಟ್ ಅನ್ನು ಖರೀದಿಸಿದ್ದ. ಅಷ್ಟೇ ಅಲ್ಲ ಅಮ್ಜದ್ ಯಮಹಾ ಮೋಟಾರ್ ಬೋಟ್ ಎಂಜಿನ್, ಲೈಫ್ ಜಾಕೆಟ್ಸ್ ಅನ್ನು ಕರಾಚಿಯಲ್ಲಿ ಖರೀದಿಸಿದ್ದು, ನಂತರ ಮುಂಬೈನಲ್ಲಿ ದಾಳಿ ನಡೆಸಲು ಬಳಸಿಕೊಂಡಿದ್ದರು.
ಅಲ್ ಹುಸೈನಿ ಮತ್ತು ಅಲ್ ಫೌಝ್ ಬೋಟ್ ನ ಕ್ಯಾಪ್ಟನ್ ಆಗಿದ್ದ ಬಹಾವಾಲ್ಪುರ್ ನಿವಾಸಿ ಶಾಹೀದ್ ಗಫೂರ್ ಹೆಸರು ಉಲ್ಲೇಖಿಸಿದ್ದು, ಈ ಬೋಟ್ ಅನ್ನು ಬಳಸಿದ ಉಗ್ರರ ಹೆಸರು ಕೂಡಾ ನಮೂದಾಗಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಬಂಟ್ವಾಳ: ಗಾಂಜಾ ಮಾರಾಟ ಮಾಡಲೆತ್ನಿಸುತ್ತಿದ್ದ ನೇಪಾಳದ ಯುವಕನ ಬಂಧನ
ಮುಂಬೈ ಭಯೋತ್ಪಾದಕ ದಾಳಿಗಾಗಿ ಬಳಸಿದ್ದ ಬೋಟ್ ನಲ್ಲಿದ್ದ 9 ಸಿಬ್ಬಂದಿಗಳ ಹೆಸರು ಕೂಡಾ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ಶಾಹಿವಾಲ್ ಜಿಲ್ಲೆಯ ಮುಹಮ್ಮದ್ ಉಸ್ಮಾನ್, ಲಾಹೋರ್ ಜಿಲ್ಲೆಯ ಅತೀಖ್ ಉರ್ ರೆಹಮಾನ್, ಹಫೀಜಾಬಾದ್ ನ ರಿಯಾಜ್ ಅಹ್ಮದ್, ಗುಜ್ರಾನ್ ವಾಲಾ ಜಿಲ್ಲೆಯ ಮಹಮ್ಮದ್ ಮುಷ್ತಾಖ್, ದೇರಾ ಘಾಝಿ ಖಾನ್ ಜಿಲ್ಲೆಯ ಮುಹಮ್ಮದ್ ನಯೀಮ್, ಸರ್ಗೋದಾ ಜಿಲ್ಲೆಯ ಅಬ್ದುಲ್ ಶಾಕೂರ್, ಮುಲ್ತಾನ್ ನ ಮುಹಮ್ಮದ್ ಸಾಬೀರ್, ಲೋಧ್ರಾನ್ ಜಿಲ್ಲೆಯ ಮಹಮ್ಮದ್ ಉಸ್ಮಾನ್, ರಹೀಂ ಯಾರ್ ಕಾನ್ ಜಿಲ್ಲೆಯ ಶಾಕೀಲ್ ಅಹ್ಮದ್. ಇವರೆಲ್ಲರು ಲಷ್ಕರ್ ಎ ತಯ್ಯಬಾ ಉಗ್ರಗಾಮಿ ಸಂಘಟನೆಯವರಾಗಿದ್ದು, ವಿಶ್ವಸಂಸ್ಥೆ ಭಯೋತ್ಪಾದಕರ ಪಟ್ಟಿಯಲ್ಲಿ ಸೇರ್ಪಡೆಗೊಂಡಿರುವುದಾಗಿ ವರದಿ ತಿಳಿಸಿದೆ.
ಈ ಪಟ್ಟಿಯಲ್ಲಿ 1,210 ಹೈಪ್ರೊಫೈಲ್ ಹಾಗೂ ಭಾರತಕ್ಕೆ ಬೇಕಾಗಿದ್ದ ಮೋಸ್ಟ್ ವಾಂಟೆಡ್ ಹೆಸರುಗಳು ನಮೂದಾಗಿದೆ. ಆದರೆ ಇದರಲ್ಲಿ ಹಫೀಜ್ ಸಯೀದ್, ಮಸೂದ್ ಅಜರ್ ಅಥವಾ ದಾವೂದ್ ಇಬ್ರಾಹಿಂ ಹೆಸರು ಉಲ್ಲೇಖಿಸಿಲ್ಲ ಎಂದು ವರದಿ ಹೇಳಿದೆ.
26/11 ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ನನ್ನು ಅಂತಾರಾಷ್ಟ್ರೀಯ ಉಗ್ರ ಎಂದು ವಿಶ್ವಸಂಸ್ಥೆ ಘೋಷಿಸಿ ಪಟ್ಟಿಗೆ ಸೇರಿಸಿತ್ತು. ಭಯೋತ್ಪಾದಕ ಚಟುವಟಿಕೆಗೆ ಆರ್ಥಿಕ ನೆರವು ನೀಡಿದ ಆರೋಪದಡಿ ಪಾಕಿಸ್ತಾನ ಕೋರ್ಟ್ ಸಯೀದ್ ನನ್ನು ದೋಷಿ ಎಂದು ತೀರ್ಪು ನೀಡಿ ಐದು ವರ್ಷ ಜೈಲುಶಿಕ್ಷೆ ಆದೇಶ ನೀಡಿತ್ತು.
ಆದರೆ ದಾವೂದ್ ಇಬ್ರಾಹಿಂ ತನ್ನ ನೆಲದಲ್ಲಿ ಆಶ್ರಯ ನೀಡಲಾಗಿದೆ ಎಂಬುದನ್ನು ಮಾತ್ರ ಪಾಕಿಸ್ತಾನ ಈವರೆಗೂ ಒಪ್ಪಿಕೊಂಡಿಲ್ಲ. ದಾವೂದ್ ಕರಾಚಿಯಲ್ಲಿ ವಾಸವಾಗಿದ್ದಾನೆ ಎಂಬುದು ಎಲ್ಲರಿಗೂ ತಿಳಿದ ವಿಚಾರವಾಗಿದೆ. ಅಲ್ಲದೇ ವಿಶ್ವಸಂಸ್ಥೆಯ ಉಗ್ರರ ಪಟ್ಟಿಯಲ್ಲಿರುವ ಭಯೋತ್ಪಾದಕರ ವಿಳಾಸ ಕರಾಚಿ ಮತ್ತು ದಕ್ಷಿಣ ಸಿಂಧ್ ಪ್ರಾಂತ್ಯದ್ದಾಗಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:5 ದಶಕಗಳ ಕಾಲ ಪ್ರಧಾನಮಂತ್ರಿ: ಬಹರೈನ್ ಪ್ರಧಾನಿ ಖಲೀಫಾ ಬಿನ್ ಸಲ್ಮಾನ್ ನಿಧನ
ಪಟ್ಟಿಯಲ್ಲಿರುವ 161 ಮೋಸ್ಟ್ ವಾಂಟೆಡ್ ಉಗ್ರರು ಬಲೂಚಿಸ್ತಾನದವರು, ಖೈಬರ್ ಪಖ್ತುನ್ ಖಾವಾದ 737 ಉಗ್ರರು, ಸಿಂಧ್ ಪ್ರಾಂತ್ಯದ 100, ಪಂಜಾಬ್ ಪ್ರಾಂತ್ಯದ 122, ಇಸ್ಲಾಮಾಬಾದ್ ನ 32 ಹಾಗೂ ಪಾಕ್ ಆಕ್ರಮಿತ ಕಾಶ್ಮೀರದ 30 ಉಗ್ರರು ಮೋಸ್ಟ್ ವಾಂಟೆಡ್ ಉಗ್ರರ ಪಟ್ಟಿಯಲ್ಲಿದ್ದಿರುವುದಾಗಿ ವರದಿ ವಿವರಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Old cars ಬಿಕರಿಗೆ ಶೇ.18 ಜಿಎಸ್‌ಟಿ! ; ವಿತ್ತ ಸಚಿವೆ ನೇತೃತ್ವದ ಜಿಎಸ್‌ಟಿ ಸಭೆ ತೀರ್ಮಾನ
Maharashtra; ಫಡ್ನವೀಸ್ ಬಳಿ ಗೃಹ, ಶಿಂಧೆಗೆ ನಗರಾಭಿವೃದ್ಧಿ ಸೇರಿ 3 ಪ್ರಮುಖ ಖಾತೆ!
Mumbai; ಚುನಾವಣೆಗೆ ಏಕಾಂಗಿ ಸ್ಪರ್ಧೆ: ಉದ್ಧವ್ ಶಿವಸೇನೆ ಇಂಗಿತ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.