ಪಾಕ್ ಲಜ್ಜೆಗೇಡಿ ಕೃತ್ಯ:ಭಾರತೀಯ ಯೋಧರಿಬ್ಬರ ಮೃತದೇಹ ಛಿದ್ರ ಛಿದ್ರ
Team Udayavani, May 1, 2017, 5:12 PM IST
ಜಮ್ಮು : ಪಾಕ್ ಸೇನೆ ಇಂದು ಸೋಮವಾರ ಜಮ್ಮು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಕದನ ವಿರಾಮ ಉಲ್ಲಂಘನೆ ಗೈದು ಕೃಷ್ಣಘಾಟಿಯಲ್ಲಿನ ಭಾರತೀಯ ಮುಂಚೂಣಿ ಠಾಣೆಗಳನ್ನು ಗುರಿ ಇರಿಸಿ ನಡೆಸಿದ ಗುಂಡಿನ ಹಾಗೂ ರಾಕೆಟ್ ದಾಳಿಗೆ ಇಬ್ಬರು ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ.
ಅತ್ಯಂತ ಲಜ್ಜೆಗೇಡಿ ಹಾಗೂ ಅನೈತಿಕತೆಯ ಪರಮಾವಧಿ ಕೃತ್ಯದಲ್ಲಿ ಪಾಕ್ ಸೈನಿಕರು ಹತ ಭಾರತೀಯ ಯೋಧರಾದ ಜೆಸಿಓ ನಾಯಿಬ್ ಸುಬೇದಾರ್ ಪರಮ್ಜಿತ್ ಸಿಂಗ್ ಮತ್ತು ಹೆಡ್ ಕಾನ್ಸ್ಟೆಬಲ್ ಪ್ರೇಮ್ ಸಾಗರ್ (ಬಿಎಸ್ಎಫ್ 200 ಬೆಟಾಲಿಯನ್ನ ಯೋಧ) ಅವರ ಮೃತ ದೇಹಗಳನ್ನು ಛಿದ್ರಛಿದ್ರಗೊಳಿಸಿ ವಿರೂಪಗೊಳಿಸಿದ್ದಾರೆ.
ಪಾಕ್ ಪಡೆಗಳ ಈ ದುಷ್ಕೃತ್ಯವನ್ನು ಭಾರತೀಯ ಸೇನಾ ಪಡೆ ತೀವ್ರವಾಗಿ ಖಂಡಿಸಿದ್ದು ಇದಕ್ಕೆ ಅತ್ಯಂತ ಕಠಿನ ಪ್ರತ್ಯುತ್ತರ ನೀಡುವುದಾಗಿ ಹೇಳಿದೆ.
ರಾಕೆಟ್ ದಾಳಿ
ಪಾಕಿಸ್ಥಾನ ಪುನಃ ಕದನ ವಿರಾಮ ಉಲ್ಲಂಘನೆ ಗೈದು ಗುಂಡಿನ ದಾಳಿ ನಡೆಸಿದ ಕಾರಣ ಇಬ್ಬರು ಭಾರತೀಯ ಜವಾನರು ಜಮ್ಮು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿನ ಗಡಿ ನಿಯಂತ್ರಣ ರೇಖೆಯಲ್ಲಿ ಅಸುನೀಗಿದ ಘಟನೆ ಇಂದು ಸೋಮವಾರ ಬೆಳಗ್ಗೆ ನಡೆದಿತ್ತು.
ಕೃಷ್ಣಾ ಘಾಟಿ ಪ್ರದೇಶದಲ್ಲಿನ ಮುಂಚೂಣಿ ರಕ್ಷಣಾ ಠಾಣೆಗಳನ್ನು ಗುರಿಯಾಗಿರಿಸಿಕೊಂಡು ಪಾಕ್ ಪಡೆಗಳು ರಾಕೆಟ್ಗಳನ್ನು ಹಾರಿಸಿದ ಕಾರಣ ಭಾರತೀಯ ಸೇನೆಯ ಓರ್ವ ಜೂನಿಯರ್ ಕಮಿಷನ್ಡ್ ಆಫೀಸರ್ ಮತ್ತು ಬಿಎಸ್ಎಫ್ನ ಓರ್ವ ಕಾನ್ಸ್ಟೆಬಲ್ ಕೊಲ್ಲಲ್ಪಟ್ಟರು . ಇನ್ನೋರ್ವ ಬಿಎಸ್ಎಫ್ ಕಾನ್ಸ್ಟೆಬಲ್ ಗಾಯಗೊಂಡರು ಎಂದು ಸೇನಾ ಮೂಲಗಳು ತಿಳಿಸಿವೆ.
ಬೆಳಗ್ಗೆ ಸುಮಾರು 8.30ರ ಹೊತ್ತಿಗೆ ಪಾಕ್ ಪಡೆಗಳು ಪೂಂಚ್ ಜಿಲ್ಲೆಯ ಕೃಷ್ಣಘಾಟಿ ಪ್ರದೇಶದಲ್ಲಿನ ಗಡಿ ನಿಯಂತ್ರಣ ರೇಖೆಯಲ್ಲಿ ರಾಕೆಟ್ ದಾಳಿ ನಡೆಸಿ ಆಟೋಮ್ಯಾಟಿಕ್ ಶಸ್ತ್ರಾಸ್ತ್ರಗಳಿಂದ ಗುಂಡಿ ಮಳೆಸುರಿಸಿದವು ಎಂದು ಹಿರಿಯ ಬಿಎಸ್ಎಫ್ ಅಧಿಕಾರಿ ತಿಳಿಸಿದ್ದಾರೆ.
ಗಡಿ ರೇಖೆಯಲ್ಲಿ ಕಾವಲು ಕಾಯುತ್ತಿದ್ದ ಭಾರತೀಯ ಸೇನಾ ಪಡೆಗಳು ಪಾಕ್ ಪಡೆಗಳ ಗುಂಡಿಗೆ ತಕ್ಕುದಾದ ಉತ್ತರ ನೀಡಿ ಪಾಕ್ ದಾಳಿಯನ್ನು ಹಿಮ್ಮೆಟ್ಟಿಸಿದವು ಎಂದು ಬಿಎಸ್ಎಫ್ ಅಧಿಕಾರಿ ತಿಳಿಸಿದ್ದಾರೆ.
ಇಂದು ಪಾಕ್ ಪಡೆಗಳು ನಡೆಸಿರುವ ಕದನ ವಿರಾಮ ಉಲ್ಲಂಘನೆಯ ವೈಖರಿಯನ್ನು ಕಂಡರೆ ಪಾಕ್ ಆಕ್ರಮಿತ ಕಾಶ್ಮೀರದ ಲಾಂಚ್ ಪ್ಯಾಡ್ಗಳಲ್ಲಿ ಭಾರತದ ಗಡಿ ದಾಟಿ ಒಳಬರಲು ಭಯೋತ್ಪಾದಕರು ಸಿದ್ಧರಾಗಿ ನಿಂತಿರುವುದು ಸ್ಪಷ್ಟವಿದೆ ಎಂದು ಭಾರತೀಯ ಸೇನಾ ಮೂಲಗಳು ಹೇಳಿವೆ.
ಕಳೆದ ಎಪ್ರಿಲ್ 4, 5 ಹಾಗೂ 8ರಂದು ಪಾಕ್ ಪಡೆಗಳು ಪೂಂಚ್ನಲ್ಲಿ ಕದನ ವಿರಾಮ ಉಲ್ಲಂಘನೆಗೈದು ಭಾರೀ ಗುಂಡಿನ ದಾಳಿ ನಡೆಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Mahayuti ಗೆಲುವು: ಆ್ಯಕ್ಸಿಸ್ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
MUST WATCH
ಹೊಸ ಸೇರ್ಪಡೆ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ
Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್.ಆರ್.
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.