ಅಮೆರಿಕ ಬಿಟ್ಟು ಹೋದ ಅಸ್ತ್ರಗಳು ಪಾಕ್ ಉಗ್ರರ ಕೈಲಿ!
ಭಾರತ, ಪಾಕ್ ಗಡಿ ನಿಯಂತ್ರಣ ರೇಖೆಯ ಬಳಿ ಶಸ್ತ್ರಾಸ್ತ್ರಗಳು, ನೈಟ್ ವ್ಯೂ ಸಾಧನಗಳು
Team Udayavani, Feb 20, 2022, 6:35 AM IST
ಬಾರಾಮುಲ್ಲ: ಅಫ್ಘಾನಿಸ್ಥಾನ ತೊರೆಯುವ ವೇಳೆ ಅಮೆರಿಕ ಸೇನೆ ಬಿಟ್ಟು ಹೋಗಿದ್ದ ಲಕ್ಷಾಂತರ ಸಣ್ಣಸಣ್ಣ ಆಧುನಿಕ ಸೇನಾ ಉಪಕರಣಗಳು; ಈಗ ಭಾರತ-ಪಾಕ್ ಗಡಿ ನಿಯಂತ್ರಣ ರೇಖೆಯ ಬಳಿ ಪತ್ತೆಯಾಗಿವೆ ಎಂದು ಜಮ್ಮು-ಕಾಶ್ಮೀರದಲ್ಲಿರುವ ಭಾರತದ ಹಿರಿಯ ಸೇನಾಧಿಕಾರಿ, ಮೇಜರ್ ಜನರಲ್ ಅಜಯ್ ಚಾಂದ್‌ಪುರಿ ತಿಳಿಸಿದ್ದಾರೆ.
ಹಾಗೆಯೇ ಅಫ್ಘಾನಿಸ್ಥಾನದಲ್ಲಿ ಆಶ್ರಯ ಪಡೆದಿದ್ದ ಪಾಕ್ ಉಗ್ರರು ಅಲ್ಲಿ ತಾಲಿಬಾನ್ ಆಡಳಿತ ಬಂದ ಅನಂತರ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಬಂದು ಸೇರಿಕೊಳ್ಳುತ್ತಿದ್ದಾರೆ. ಇವರು ಭಾರತಕ್ಕೆ ನುಸುಳುವ ಯತ್ನ ಮಾಡುತ್ತಿದ್ದಾರೆ. ಕಳೆದ ವರ್ಷ 6 ಬಾರಿ ಭಾರತಕ್ಕೆ ಒಳ ನುಸುಳಲು ಪಾಕ್ ಉಗ್ರರು ಯತ್ನಿಸಿದ್ದರು. ಅವರನ್ನು ಹೊಡೆದುರುಳಿಸಲಾಗಿತ್ತು.
ಈ ಸಂದರ್ಭದಲ್ಲಿ ಉಗ್ರರಿಂದ ವಶಪಡಿಸಿಕೊಂಡ ಉಪಕರಣಗಳಲ್ಲಿ ಕೆಲವು ಅಮೆರಿಕ ಸೇನೆಗೆ ಸೇರಿದವಾಗಿವೆ. ಅಂದಾಜಿನ ಪ್ರಕಾರ ಅಮೆರಿಕ ಸೇನೆ ಅಫ್ಘಾನ್‌ನಲ್ಲಿ 6 ಲಕ್ಷ ಶಸ್ತ್ರಾಸ್ತ್ರ ಗಳು, ರಾತ್ರಿನೋಟಕ್ಕೆ ಅನುಕೂಲವಾಗುವ ಲಕ್ಷಾಂತರ ಸಾಧನಗಳನ್ನು ಬಿಟ್ಟು ಹೋಗಿದ್ದಾರೆ. ಇವನ್ನು ಬಳಸಿಕೊಂಡು ಬರುವ ದಿನಗಳಲ್ಲಿ, ಇನ್ನಷ್ಟು ಪಾಕ್ ಉಗ್ರರು ಭಾರತದೊಳಕ್ಕೆ ನುಸುಳಲು ಯತ್ನಿಸುವುದು ಖಚಿತ ಎಂದು ಅವರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Congress;ಸಂಪುಟ,ಕೆಪಿಸಿಸಿ ಯಥಾಸ್ಥಿತಿ? ಬಜೆಟ್ ಅಧಿವೇಶನ, ಪಂ.ಚುನಾವಣೆ ಬಳಿಕ ಚುರುಕು?
KPTCL: ಕೆಪಿಸಿಗೆ 30 ಸಾವಿರ ಕೋಟಿ ರೂ. ಬಾಕಿ ಸಂಕಷ್ಟ !
Mangaluru; ಸಾಮಾನ್ಯ ಸ್ಥಳದಲ್ಲಿ ಬಿಲ್ಡರ್ ಹಕ್ಕು ಸಾಧಿಸುವಂತಿಲ್ಲ
Gram Panchayat ಆದಾಯಕ್ಕೆ ಟೆಲಿಕಾಂ ಕಂಪೆನಿಗಳಿಂದ ಕುತ್ತು
ಇಂದು 2ನೇ ಹಂತದ “ವಕ್ಫ್’ಸಮರ; ಬಳ್ಳಾರಿ ಜಿಲ್ಲೆ ಕಂಪ್ಲಿಯಲ್ಲಿ ಚಾಲನೆ; ಪಾದಯಾತ್ರೆ, ಜನಜಾಗೃತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.