ಗಡಿ ಪಾಠ ಕಲಿತ ಮೇಲೂ ಬಾಲ ಬಿಚ್ಚಿದ ಪಾಕಿಸ್ಥಾನ

Team Udayavani, Jul 11, 2017, 11:24 AM IST

11-PTI-13.jpg

ಜಮ್ಮು/ಇಸ್ಲಾಮಾಬಾದ್‌: ಇಬ್ಬರು ಸೈನಿಕರ ಹತ್ಯೆ, ಮೂರು ಬಂಕರ್‌ಗಳ ನಾಶದ ಬಳಿಕವೂ ಪಾಕಿಸ್ಥಾನ ಸೇನೆಯು ಕದನ ವಿರಾಮ ಉಲ್ಲಂಘನೆಯನ್ನು ಮುಂದುವರಿಸಿದೆ.

ರವಿವಾರ ರಾತ್ರೋರಾತ್ರಿ ಪಾಕ್‌ ಪಡೆಯು ಪೂಂಛ… ವಲಯದ ಗಡಿ ನಿಯಂತ್ರಣ ರೇಖೆಯಲ್ಲಿ ಗ್ರಾಮಗಳು ಹಾಗೂ ಸೇನಾ ಮುಂಚೂಣಿ ನೆಲೆಗಳನ್ನು ಗುರಿಯಾಗಿಸಿ ಗುಂಡಿನ ದಾಳಿ ನಡೆಸಿದೆ. ಪರಿಣಾಮ ಗಡಿಯಲ್ಲಿನ ಪೊಲೀಸ್‌ ಬ್ಯಾರಕ್‌ಗಳು ಹಾಗೂ ವ್ಯಾಪಾರ ಕೇಂದ್ರವೊಂದಕ್ಕೆ ಹಾನಿಯಾಗಿದೆ. ಪಾಕ್‌ ದಾಳಿ ಹಿನ್ನೆಲೆಯಲ್ಲಿ ಪೂಂಛ… ಮತ್ತು ಪಾಕಿಸ್ಥಾನದ ರಾವಲ್‌ಕೋಟ್‌ ನಡುವೆ ಸಂಚರಿಸುವ ಬಸ್‌ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.

ಇದೇ ವೇಳೆ, ರವಿವಾರದ ಗುಂಡಿನ ದಾಳಿಯಲ್ಲಿ ನಾವು ನಾಲ್ವರು ಭಾರತೀಯ ಯೋಧರನ್ನು ಹತ್ಯೆಗೈದಿದ್ದೇವೆ ಎನ್ನುವ ಮೂಲಕ ಪಾಕಿಸ್ಥಾನ  ತನ್ನ ಸುಳ್ಳಿನಾಟವನ್ನು ಮುಂದುವರಿಸಿದೆ. ಇದಕ್ಕೆ ಸೋಮವಾರ ಪ್ರತಿಕ್ರಿಯಿಸಿರುವ ಸೇನಾ ವಕ್ತಾರರು, “ಅಂಥದ್ದೇನಾದರೂ ಆದರೆ ಸೇನೆಯು ಹುತಾತ್ಮ ಯೋಧರಿಗೆ ಟ್ವಿಟರ್‌ ಹಾಗೂ ಫೇಸ್‌ಬುಕ್‌ ಮೂಲಕ ಶ್ರದ್ಧಾಂಜಲಿ ಸಲ್ಲಿಸುತ್ತದೆ. ಸಕಲ ಸರಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನೆರವೇರಿಸುತ್ತದೆ. ಆದರೆ, ಪಾಕ್‌ ದಾಳಿಯಿಂದ ಭಾರತದ ಯೋಧರು ರವಿವಾರ ಮೃತಪಟ್ಟಿಲ್ಲ. ಪಾಕಿಸ್ಥಾನ ಹೇಳುತ್ತಿರು ವುದೆಲ್ಲ ಸುಳ್ಳು,’ ಎಂದು ಸ್ಪಷ್ಟಪಡಿಸಿದ್ದಾರೆ. 

ಮೂವರು ಉಗ್ರರ ಹತ್ಯೆ: ಉತ್ತರ ಕಾಶ್ಮೀರದ ನೌಗಾಮ್‌ ವಲಯದಲ್ಲಿ ಭಾರತದೊಳಕ್ಕೆ ನುಸುಳಲು ಯತ್ನಿಸಿದ ಮೂವರು ಉಗ್ರರನ್ನು ಸೇನೆ ಸದೆಬಡಿದಿದೆ. ರವಿವಾರ ರಾತ್ರಿಯೇ ಅನುಮಾನಾಸ್ಪದ ಚಲನೆ ಕಂಡುಬಂದಿದ್ದು, ಬೆಳಗ್ಗೆ ನುಸುಳುಕೋರ ಉಗ್ರರನ್ನು ಪತ್ತೆಹಚ್ಚುವಲ್ಲಿ ಸೇನೆ ಯಶಸ್ವಿಯಾಯಿತು.

ಜಾಧವ್‌ ತಾಯಿಗೆ ವೀಸಾ ವಿಳಂಬ: ಸುಷ್ಮಾ ತರಾಟೆ
ಪಾಕ್‌ನಲ್ಲಿ ಗಲ್ಲುಶಿಕ್ಷೆಗೆ ಒಳಗಾಗಿರುವ ಭಾರತೀಯ ನೌಕಾಪಡೆ ಮಾಜಿ ಅಧಿಕಾರಿ ಕುಲಭೂಷಣ್‌ ಜಾಧವ್‌ ಅವರ ತಾಯಿಗೆ ಪಾಕ್‌ ವೀಸಾ ನೀಡದ್ದಕ್ಕೆ ಪಾಕ್‌ ಪ್ರಧಾನಿ ಅವರ ವಿದೇಶಾಂಗ ಸಲಹೆಗಾರ ಸರ್ತಾಜ್‌ ಅಜೀಜ್‌ ಅವರನ್ನು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಬಗ್ಗೆ ಸರಣಿ ಟ್ವೀಟ್‌ಗಳನ್ನು ಅವರು ಮಾಡಿದ್ದು, ಭಾರತದಲ್ಲಿ ವೈದ್ಯಕೀಯ ನೆರವು ಪಡೆಯಲು ಇಚ್ಛಿಸುವ ಎಲ್ಲಾ ಪಾಕಿಸ್ಥಾನೀಯರಿಗೆ ತಾವು ವೀಸಾ ನೀಡುವ ವ್ಯವಸ್ಥೆ ಮಾಡುತ್ತೇವೆ. ಆದರೆ ಕುಲಭೂಷಣ್‌ ಭೇಟಿ ಸಂಬಂಧ ಅವರ ತಾಯಿಗೆ ಇನ್ನೂ ವೀಸಾ ನೀಡಿಲ್ಲ. ಈ ಬಗ್ಗೆ ತಾವೇ ಖುದ್ದು ಪತ್ರ ಬರೆದಿದ್ದರೂ ಪ್ರತಿಕ್ರಿಯೆ ಇಲ್ಲ ಎಂದು ಹೇಳಿದ್ದಾರೆ. ಪಾಕ್‌ ಈ ವರ್ತನೆ ತೋರಿದ್ದರೂ, ಭಾರತಕ್ಕೆ ಚಿಕಿತ್ಸೆಗೆ ಆಗಮಿಸುವ, ಸರ್ತಾಜ್‌ ಅವರ ಶಿಫಾರಸು ಪತ್ರ ಹೊಂದಿದ ರೋಗಿಗಳಿಗೆ ನೆರವಾಗುವುದಾಗಿ ಸುಷ್ಮಾ ಹೇಳಿದ್ದಾರೆ. 

ಸೇನೆ ಮೇಲೆ ದಾಳಿಗೆ ಸಂಚು: ಇಬ್ಬರು ಲಷ್ಕರ್‌ ಉಗ್ರರ ಸೆರೆ
ಜಮ್ಮು-ಕಾಶ್ಮೀರ ಪೊಲೀಸರು ಮತ್ತು ಭಾರತೀಯ ಸೇನೆಯ ಮೇಲೆ ದಾಳಿಗೆ ಸಂಚು ರೂಪಿಸಿದ್ದ ಲಷ್ಕರ್‌ ಉಗ್ರರಿಬ್ಬರನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ. ವಿಶೇಷವೆಂದರೆ, ಇಬ್ಬರು ಉಗ್ರರ ಪೈಕಿ ಒಬ್ಟಾತ ಉತ್ತರಪ್ರದೇಶದ ಮುಜಾಫ‌ರ್‌ನಗರದವನು. ಈತನ ಹೆಸರು ಸಂದೀಪ್‌ ಕುಮಾರ್‌ ಶರ್ಮಾ. ಕಣಿವೆ ರಾಜ್ಯದ ಹೊರಗಿನ ವ್ಯಕ್ತಿಯೊಬ್ಬನನ್ನು ಲಷ್ಕರ್‌ ನಂಟಿನ ಹಿನ್ನೆಲೆ ಬಂಧಿಸಿರುವುದು ಇದೇ ಮೊದಲು ಎಂದು ಪೊಲೀಸರು ತಿಳಿಸಿದ್ದಾರೆ. ಸಂದೀಪ್‌ ಕುಮಾರ್‌ 2012ರಲ್ಲಿ ಕಾಶ್ಮೀರಕ್ಕೆ ಕೆಲಸಕ್ಕೆಂದು ತೆರಳಿದ್ದು, ಚಳಿಗಾಲದ ಸಮಯದಲ್ಲಿ ಪಂಜಾಬ್‌ನಲ್ಲಿ ಬೇರೊಂದು ಕೆಲಸ ಮಾಡಿಕೊಂಡಿದ್ದ. ಜನವರಿಯಲ್ಲಿ ಕಣಿವೆ ರಾಜ್ಯಕ್ಕೆ ವಾಪಸಾದ ಈತ ಲಷ್ಕರ್‌ ಉಗ್ರರೊಂದಿಗೆ ಸಂಪರ್ಕ ಹೊಂದಿರುವ ಸ್ಥಳೀಯರನ್ನು ಭೇಟಿಯಾಗಿದ್ದ. ಅಲ್ಲಿಂದೀಚೆಗೆ ಲಷ್ಕರ್‌ ಉಗ್ರ ಬಶೀರ್‌ ಲಷ್ಕರಿಯ ಸಹಾಯಕನಾಗಿ ಕಾರ್ಯನಿರ್ವಹಿಸುತ್ತಿದ್ದ. ಸಂದೀಪ್‌ ಶರ್ಮಾ ಎಟಿಎಂಗಳನ್ನು ಲೂಟಿ ಮಾಡುವುದು, ಸೇನಾ ಗಸ್ತು ವಾಹನಗಳ ಮೇಲೆ ದಾಳಿ, ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳುವುದು ಮತ್ತು ಲಕ್ಷಾಂತರ ರೂ.ಗಳನ್ನು ಕೊಳ್ಳೆ ಹೊಡೆಯುವುದು ಮತ್ತಿತರ ರೀತಿಯಲ್ಲಿ ಲಷ್ಕರ್‌ಗೆ ನೆರವಾಗುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಈತನ ಜೊತೆಗೆ ಕುಲ್ಗಾಂನ ಮುನೀಬ್‌ ಶಾ ಎಂಬಾತನನ್ನೂ ಬಂಧಿಸಲಾಗಿದೆ.

ಟಾಪ್ ನ್ಯೂಸ್

parthagali

Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ

kalaranga

Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ

kapu-marigudi

Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ

K-H-Muniyappa

BPL ಕಾರ್ಡು ರದ್ದಾಗಲ್ಲ: ಮುನಿಯಪ್ಪ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

NCB ನಿರಂತರ ಕಾರ್ಯಾಚರಣೆ: ಡ್ರಗ್ಸ್‌ ಜಾಲ ಮುರಿಯಲು ಆಪರೇಷನ್‌ ಸಾಗರ ಮಂಥನ

NCB ನಿರಂತರ ಕಾರ್ಯಾಚರಣೆ: ಡ್ರಗ್ಸ್‌ ಜಾಲ ಮುರಿಯಲು ಆಪರೇಷನ್‌ ಸಾಗರ ಮಂಥನ

J. P. Nadda: ನುಸುಳುಕೋರರಿಗೆ ಮದ್ರಸಾದಲ್ಲಿ ಆಶ್ರಯ ಕೊಟ್ಟ ಜೆಎಂಎಂ

J. P. Nadda: ನುಸುಳುಕೋರರಿಗೆ ಮದ್ರಸಾದಲ್ಲಿ ಆಶ್ರಯ ಕೊಟ್ಟ ಜೆಎಂಎಂ

Delhi: ಮಿತಿ ಮೀರಿದ ಮಾಲಿನ್ಯ: ಟ್ರಕ್‌ಗಳ ಪ್ರವೇಶಕ್ಕೆ ನಿರ್ಬಂಧ

Delhi: ಮಿತಿ ಮೀರಿದ ಮಾಲಿನ್ಯ: ಟ್ರಕ್‌ಗಳ ಪ್ರವೇಶಕ್ಕೆ ನಿರ್ಬಂಧ

Maharashtra: ಕಾಂಗ್ರೆಸ್‌ ಸರಕಾರ ಬಂದರೆ ಮುಸ್ಲಿಂ ಮೀಸಲು: ರೇವಂತ್‌ ರೆಡ್ಡಿ

Maharashtra: ಕಾಂಗ್ರೆಸ್‌ ಸರಕಾರ ಬಂದರೆ ಮುಸ್ಲಿಂ ಮೀಸಲು: ರೇವಂತ್‌ ರೆಡ್ಡಿ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

parthagali

Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ

kalaranga

Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ

kapu-marigudi

Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

1-chuii

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.