26/11 ಮುಂಬಯಿ ದಾಳಿಯ ಇನ್ನೊಬ್ಬ ಸೂತ್ರಧಾರಿ ಅಮೆರಿಕಾದಲ್ಲಿ ಬಂಧನ
Team Udayavani, Jun 20, 2020, 1:04 PM IST
ನವದೆಹಲಿ: 26/11 ಮುಂಬಯಿ ದಾಳಿಯ ಸೂತ್ರಧಾರಿಗಳಲ್ಲಿ ಒಬ್ಬನಾದ ಪಾಕಿಸ್ಥಾನ ಮೂಲದ ಕೆನಡಾ ಪ್ರಜೆಯನ್ನು ಅಮೆರಿಕಾದಲ್ಲಿ ಬಂಧಿಸಲಾಗಿದೆ.
59 ವರ್ಷ ಪ್ರಾಯದ ತಹವ್ವೂರ್ ರಾಣಾ ಎಂಬಾತನೇ ಬಂಧಿತ ವ್ಯಕ್ತಿಯಾಗಿದ್ದಾನೆ. ಮುಂಬಯಿ ದಾಳಿಯ ಪ್ರಮುಖ ಸಂಚುಕೋರರಲ್ಲೊಬ್ಬನಾಗಿರುವ ಡೇವಿಡ್ ಹೆಡ್ಲಿಗೆ ಈತ ಪರಮಾಪ್ತನಾಗಿದ್ದಾನೆ.
ರಾಣಾನನ್ನು ಲಾಸ್ ಏಜಂಲೀಸ್ ನಲ್ಲಿ ಜೂನ್ 10ರಂದು ಬಂಧಿಸಿರುವ ಕುರಿತಾಗಿ ಮಾಹಿತಿ ಲಭ್ಯವಾಗಿದೆ.
ಈತನಿಗೆ 14 ವರ್ಷಗಳ ಸೆರೆವಾಸ ವಿಧಿಸಿ ಲಾಸ್ ಏಂಜಲೀಸ್ ನ ಫೆಡೆರಲ್ ಜೈಲಿಗೆ ಕಳುಹಿಸಲಾಗಿತ್ತು. ಆದರೆ ಈತನಿಗೆ ಕೋವಿಡ್ ಸೋಂಕಿನ ಲಕ್ಷಣ ಕಾಣಿಸಿಕೊಂಡ ಹಿನ್ನಲೆಯಲ್ಲಿ ಈತನನ್ನು ಕಳೆದ ವಾರ ಜೈಲಿನಿಂದ ಬಿಡುಗಡೆಗೊಳಿಸಿ ಆದೇಶ ಹೊರಡಿಸಲಾಗಿತ್ತು.
ಆದರೆ, ಈತನನ್ನು ಭಾರತಕ್ಕೆ ಗಡೀಪಾರು ಮಾಡುವ ಪ್ರಕ್ರಿಯೆಗಳು ಚಾಲನೆಯಲ್ಲಿರುವ ಕಾರಣ ರಾಣಾನನ್ನು ಜೈಲಿನಿಂದ ಹೊರಬಿಟ್ಟಿರಲಿಲ್ಲ ಎಂಬ ಮಾಹಿತಿಯನ್ನು ಅಮೆರಿಕಾ ವಕೀಲರು ಅಸೋಸಿಯೇಟ್ ಪ್ರೆಸ್ ಗೆ ನೀಡಿದ್ದಾರೆ.
ಮುಂಬಯಿ ದಾಳಿಗೆ ಸಂಬಂಧಿಸಿದ ಸೂತ್ರದಾರರಲ್ಲಿ ಒಬ್ಬನಾಗಿರುವ ರಾಣಾ ಜೂನ್ 10ರಂದು ಬಂಧನವಾಗಿರುವ ಮಾಹಿತಿ ತಮಗೆ ಲಭಿಸಿದೆ ಎಂದು ಭಾರತೀಯ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಹಾಗೂ, ಭಯೋತ್ಪಾದನಾ ಚಟುವಟಿಕೆಗಳ ಆರೋಪದ ಮೇಲೆ ಈತನ ಗಡೀಪಾರು ಸಂಬಂಧ ಭಾರತದ ಮನವಿ ಇರುವುದನ್ನು ಲಾಸ್ ಏಂಜಲೀಸ್ ನಲ್ಲಿರುವ ಜಿಲ್ಲಾ ನ್ಯಾಯಾಧೀಶರಿಗೆ ಯು.ಎಸ್. ಅಟಾರ್ನಿ ಅವರು ಮಾಹಿತಿ ನೀಡಿದ್ದಾರೆ ಎಂಬ ಮಾಹಿತಿಯನ್ನು ಈ ಬೆಳವಣಿಗೆಗಳಿಗೆ ಸಂಬಂಧಿಸಿದಂತೆ ಮಾಹಿತಿ ಇರುವ ಅಧಿಕಾರಿಯೊಬ್ಬರು ಹಿಂದೂಸ್ತಾನ್ ಟೈಮ್ಸ್ ಗೆ ನೀಡಿದ್ದಾರೆ.
ಮುಂಬಯಿ ದಾಳಿ ಸಂಚಿನ ವಿಚಾರಕ್ಕೆ ಸಂಬಂಧಿಸಿದಂತೆ 11 ವರ್ಷಗಳ ಬಳಿಕ ಇದೊಂದು ಧನಾತ್ಮಕ ಬೆಳವಣಿಗೆಯಾಗಿದೆ. ಮತ್ತು ರಾಣಾನನ್ನು ಭಾರತಕ್ಕೆ ಗಡೀಪಾರು ಮಾಡುವ ನಿಟ್ಟಿನಲ್ಲಿ ಇನ್ನು ಅಲ್ಲಿ ವಿಚಾರಣೆ ಪ್ರಾರಂಭಗೊಳ್ಳಲಿದೆ ಎಂದು ರಾಷ್ಟ್ರೀಯ ತನಿಖಾ ದಳದ ಹೆಸರು ಹೇಳಲಿಚ್ಚಿಸದ ಉನ್ನತ ಅಧಿಕಾರಿಯೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಡೇವಿಡ್ ಹೆಡ್ಲಿ ಮುಂಬಯಿ ದಾಳಿಗೂ ಮುಂಚೆ ಇಲ್ಲಿ ಸಂಚು ರೂಪಿಸುವ ವಿಚಾರದಲ್ಲಿ ಆತನಿಗೆ ಸೂಕ್ತ ದಾಖಲೆಗಳನ್ನು ತಯಾರಿಸಿಕೊಡುವ ವಿಚಾರದಲ್ಲಿ ರಾಣಾ ನ ಸಂಸ್ಥೆ ನೆರವಾಗಿರುವ ವಿಚಾರದಲ್ಲಿ ಭಾರತ ಈತನ ಮೇಲೆ ಫೋರ್ಜರಿ ಮತ್ತು ನಂಬಿಕೆ ದ್ರೋಹದ ಆರೋಪಗಳನ್ನು ಹೊರಿಸಿ ಈತನನ್ನು ಗಡೀಪಾರು ಮಾಡುವಂತೆ ಅಮೆರಿಕಾಗೆ ಮನವಿ ಸಲ್ಲಿಸಲಾಗಿದೆ ಮತ್ತು ಭಾರತದ ಈ ಆರೋಪವನ್ನು ಮಾನ್ಯ ಮಾಡಿರುವ ಎಫ್.ಬಿ.ಐ. ಈತನ ವಿರುದ್ಧದ ಗಡೀಪಾರು ವಿಚಾರಣಾ ಪ್ರಕ್ರಿಯೆಗೆ ಚಾಲನೆ ನೀಡಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Supreme Court; CJI ಡಿ.ವೈ.ಚಂದ್ರಚೂಡ್ ಅವರಿಗೆ ಭಾವನಾತ್ಮಕ ವಿದಾಯ
NSE, BSE; ಷೇರು ಮಾರುಕಟ್ಟೆಗೆ ನವೆಂಬರ್ 20 ರಂದು ರಜೆ ಘೋಷಣೆ
Proposes: ಪುರುಷ ಟೈಲರ್ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Hotel Room: ಹೋಟೆಲ್ ಕೊಠಡಿಯಲ್ಲೇ ವೈದ್ಯನ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.